*ಇನ್ಫೋಸಿಸ್ ಫೌಂಡೇಷನ್ ನಿಂದ ಇಂದು (ಡಿ.31) ಸುಧಾಮೂರ್ತಿ ನಿವೃತ್ತಿ
*25 ವರ್ಷಗಳ ಕಾಲ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
*ಮೂರ್ತಿ ಫೌಂಡೇಷನ್ ಮೂಲಕ ಸಮಾಜಸೇವೆ ಮುಂದುವರಿಕೆ
Business Desk: 'ಪರೋಪಕಾರವನ್ನು(Philanthropy) ನಮ್ಮ ಜೀವನದಲ್ಲಿ ಪಾಲಿಸದೆ ಬೇರೆಯವರಿಗೆ ಆ ಬಗ್ಗೆ ಉಪದೇಶ ಮಾಡೋ ಹಕ್ಕು ನಮಗಿಲ್ಲ' ಎಂಬ ಮಗಳ ಒಂದೇ ಒಂದು ಮಾತು ಇನ್ಫೋಸಿಸ್ ಫೌಂಡೇಷನ್( Infosys Foundation ) ಸ್ಥಾಪನೆಗೆ ಸುಧಾಮೂರ್ತಿ(Sudha Murty) ಅವರಿಗೆ ಪ್ರೇರಣೆ ಒದಗಿಸಿತು. ಇನ್ಫೋಸಿಸ್ ನಲ್ಲಿರೋ( Infosys )ತಮ್ಮ ಪಾಲಿನ ಷೇರು(Shares) ಮಾರಾಟ ಮಾಡಿ ತಮ್ಮದೇ ಫೌಂಡೇಷನ್(Foundation) ಸ್ಥಾಪಿಸಬೇಕೆಂದು 25 ವರ್ಷಗಳ ಹಿಂದೆಯೇ ಸುಧಾಮೂರ್ತಿ ಯೋಚಿಸಿದ್ದರು. ಆದ್ರೆ ಇನ್ಫೋಸಿಸ್(Infosys) ಸಂಸ್ಥೆ ತನ್ನದೇ ಫೌಂಡೇಷನ್ ಸ್ಥಾಪಿಸಿ ಅದನ್ನು ನಿರ್ವಹಿಸೋ ಹೊಣೆಯನ್ನು ಸುಧಾಮೂರ್ತಿ ಅವರಿಗೆ ನೀಡಿತು. ಈ ಹೊಣೆಗಾರಿಕೆಯನ್ನು 25 ವರ್ಷಗಳ ಕಾಲ ಅತ್ಯಂತ ಸಮರ್ಥವಾಗಿ ನಿಭಾಯಿಸಿ ದೇಶದ ಜನರ ಮನಸ್ಸಿನಲ್ಲಿ ಶಾಶ್ವತ ಪಡಿಯಚ್ಚನ್ನು ಮೂಡಿಸಿದ ಸುಧಾಮ್ಮ ಇಂದು(ಡಿ.31) ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಒಂದರ ಅಂತ್ಯ ಇನ್ನೊಂದರ ಆರಂಭ ಎಂಬಂತೆ ಸ್ವತಂತ್ರವಾಗಿ 'ಮೂರ್ತಿ ಫೌಂಡೇಷನ್' (Murty Foundation)ಎಂಬ ಹೊಸ ಸಂಸ್ಥೆಯ ಮೂಲಕ ಸಮಾಜಪರ ಕಾರ್ಯಗಳನ್ನು ಮುಂದುವರಿಸಲಿದ್ದಾರೆ. ಈ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ.
ಸೇವೆ ಮುಂದುವರಿಕೆಗೆ ಮೂರ್ತಿ ಫೌಂಡೇಷನ್
ಇನ್ಫೋಸಿಸ್ ಫೌಂಡೇಷನ್ ರೂಪತಾಳೋ ಮುನ್ನವೇ ಸುಧಾಮೂರ್ತಿ ಮನಸ್ಸಿನಲ್ಲಿ 'ಮೂರ್ತಿ ಫೌಂಡೇಷನ್' ಪರಿಕಲ್ಪನೆ ಮೂಡಿತ್ತಂತೆ. ಆದ್ರೆ ಅಂದು ಇನ್ಫೋಸಿಸ್ ತನ್ನದೇ ಫೌಂಡೇಷನ್ ಸ್ಥಾಪಿಸಿ ಅದರ ಜವಾಬ್ದಾರಿಯನ್ನು ಸುಧಾ ಮೂರ್ತಿ ಅವರ ಕೈಗಿತ್ತ ಕಾರಣ ಈ ಆಲೋಚನೆಯನ್ನು 25 ವರ್ಷಗಳ ಕಾಲ ಬದಿಗಿಟ್ಟಿದ್ದರು. ಈಗ ಮತ್ತೆ ಸುಧಾಮೂರ್ತಿ ಅವರ ಹಳೆಯ ಕನಸಿಗೆ ರೆಕ್ಕೆ ಬಂದಿದೆ. ಮೂರ್ತಿ ಫೌಂಡೇಷನ್ ಅನ್ನು ಹೆಚ್ಚು ಸ್ವತಂತ್ರವಾಗಿ, ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಲು ಸುಧಾಮೂರ್ತಿ ಬಯಸಿದ್ದಾರೆ. ಈ ಹಿಂದೆ ಕೂಡ ಇನ್ಫೋಸಿಸ್ ನೆರಳು ಫೌಂಡೇಷನ್ ಮೇಲೆ ಬೀಳಬಾರದು ಎಂಬ ಕಾರಣಕ್ಕೆ ನೆರಳು ಮತ್ತು ಬೆಳಕು ಎಂಬ ಎರಡು ಪ್ರತ್ಯೇಕ ಕಟ್ಟಡದಲ್ಲಿ ಕಾರ್ಯನಿರ್ವಹಿಸೋ ವ್ಯವಸ್ಥೆಯನ್ನು ಸುಧಾ ಮೂರ್ತಿ ಮಾಡಿಕೊಂಡಿದ್ದರು. ಇನ್ನು ಮುಂದೆ ಅವರ ಸಮಾಜಸೇವೆ ಅವರದ್ದೇ ಸ್ವಂತ ಕಟ್ಟಡದಿಂದ ಕಾರ್ಯಾರಂಭ ಮಾಡಲಿದೆ. ಮೂರ್ತಿ ಫೌಂಡೇಷನ್ ಗಾಗಿ ಈಗಾಗಲೇ 'ತಥಾಗತ' ಎಂಬ ಕಟ್ಟಡ ಸಿದ್ಧಗೊಂಡಿದೆ. ತಥಾಗತ ಅಂದ್ರೆ ಬುದ್ಧ ಅಥವಾ ಯಾವುದೇ ಕಟ್ಟುಪಾಡು ಹೊಂದಿರದ ಎಂಬ ಅರ್ಥ ನೀಡುತ್ತದೆ. ಇನ್ಫೋಸಿಸ್ ಫೌಂಡೇಷನ್ ಮಾದರಿಯಲ್ಲೇ ಮೂರ್ತಿ ಫೌಂಡೇಷನ್ ಕೂಡ ಆರೋಗ್ಯ(Health), ಶಿಕ್ಷಣ(Education) ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಬಡವರ, ಸಮಾಜದ ಅಶಕ್ತ ವರ್ಗದವರ ಅಭಿವೃದ್ಧಿಗೂ ಶ್ರಮಿಸಲಿದೆ. ತಕ್ಷಣ ಯಾವ ಕ್ಷೇತ್ರ ಅಥವಾ ವಿಷಯಕ್ಕೆ ಆರ್ಥಿಕ ನೆರವಿನ ಅಗತ್ಯವಿದೆಯೋ ಅದಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗೋದು ಎಂದು ಸುಧಾಮೂರ್ತಿ ಮಾಧ್ಯಮಗಳಿಗೆ ನೀಡಿರೋ ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
Sudha Murthy Retires: ಇನ್ಫಿ ಪ್ರತಿಷ್ಠಾನದೊಂದಿಗಿನ 25 ವರ್ಷಗಳ ಪಯಣಕ್ಕೆ ಸುಧಾ ಮೂರ್ತಿ ವಿದಾಯ
ವೈಯಕ್ತಿಕ ಸಹಾಯ ಬೆಳಕಿಗೆ ಬಂದಿಲ್ಲ
ಸುಧಾಮೂರ್ತಿ ಇನ್ಫೋಸಿಸ್ ಫೌಂಡೇಷನ್ ಹಣದಿಂದ ಮಾತ್ರವಲ್ಲ, ತಮ್ಮ ವೈಯಕ್ತಿಕ ಹಣದಿಂದಲೂ ಸಾಕಷ್ಟು ಸಮಾಜಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಆದ್ರೆ ಅದು ಎಲ್ಲಿಯೂ ಹೊರಗೆ ಬಂದಿಲ್ಲ, ಇನ್ಫೋಸಿಸ್ ಫೌಂಡೇಷನ್ ಕಾರ್ಯದೊಳಗೇ ಬೆರೆತು ಹೋಗಿತ್ತು. ಸುಧಾಮೂರ್ತಿ ಸಮಾಜಪರ ಕೆಲಸಗಳಿಗೆ ವೈಯಕ್ತಿಕವಾಗಿ ವರ್ಷಕ್ಕೆ 30-40ಕೋಟಿ ರೂ. ವೆಚ್ಚ ಮಾಡುತ್ತ ಬಂದಿದ್ದಾರೆ.
Leadership Transition: ರಿಲಯನ್ಸ್‌ಗೆ ಶೀಘ್ರ ಉತ್ತರಾಧಿಕಾರಿ: ಖುದ್ದು ಅಂಬಾನಿ ಸುಳಿವು
ಇನ್ಫಿ ಫೌಂಡೇಷನ್ ನಿಂದ 2 ಸಾವಿರ ಕೋಟಿ ರೂ.ಖರ್ಚು
ಇನ್ಫೋಸಿಸ್ ಫೌಂಡೇಷನ್ 25 ವರ್ಷಗಳ ಅವಧಿಯಲ್ಲಿ ಎರಡು ಸಾವಿರ ಕೋಟಿ ರೂ.ಗಿಂತಲೂ ಅಧಿಕ ಹಣವನ್ನು ಸೇವಾಕಾರ್ಯಗಳಿಗಾಗಿ ಖರ್ಚು ಮಾಡಿದೆ. ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ 400ಕೋಟಿ ರೂ.ಗಳನ್ನು ಸಮಾಜದ ಅಭಿವೃದ್ಧಿಗಾಗಿ ವ್ಯಯಿಸುತ್ತಿದೆ. ಆದ್ರೆ ಸುಧಾಮೂರ್ತಿ ಅವರೇ ನೀಡಿರೋ ಮಾಹಿತಿ ಪ್ರಕಾರ ಈ ಫೌಂಡೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಂಡದಲ್ಲಿದ್ದದ್ದು ಕೇವಲ 5 ಜನರು! ಆದ್ರೆ ವಿವಿಧ ರಾಜ್ಯಗಳಲ್ಲಿ ಈ ಫೌಂಡೇಷನ್ ಗೆ ನೆರವು ನೀಡಲು ಅನೇಕ ಸಮಾನಮನಸ್ಕರ ತಂಡಗಳಿದ್ದವು.