Gold Silver Price:ವರ್ಷದ ಕೊನೆಯ ದಿನ ಚಿನ್ನ ಖರೀದಿಸೋರಿಗೆ ನಿರಾಳತೆ; ರಾಜ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ದರ ಏರಿಕೆ

Suvarna News   | Asianet News
Published : Dec 31, 2021, 12:18 PM IST
Gold Silver Price:ವರ್ಷದ ಕೊನೆಯ ದಿನ ಚಿನ್ನ ಖರೀದಿಸೋರಿಗೆ ನಿರಾಳತೆ; ರಾಜ್ಯದಲ್ಲಿ ಚಿನ್ನದ ಬೆಲೆ ಇಳಿಕೆ; ಬೆಳ್ಳಿ ದರ ಏರಿಕೆ

ಸಾರಾಂಶ

ವರ್ಷದ ಕೊನೆಯ ದಿನವಾದ ಇಂದು ಚಿನ್ನ ಖರೀದಿಸಲು ಹೊರಟವರಿಗೆ ಸ್ವಲ್ಪ ಮಟ್ಟಿಗೆ ಖುಷಿಯಾದ್ರೆ, ಬೆಳ್ಳಿ ಕೊಳ್ಳೋರಿಗೆ ನಿರಾಸೆಯಾಗೋದು ಪಕ್ಕಾ.ಯಾಕೆಂದ್ರೆ ಇಂದು ಚಿನ್ನದ ದರ ಇಳಿಕೆಯಾದ್ರೆ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. 

ಬೆಂಗಳೂರು (ಡಿ.31): ಹೊಸ ವರ್ಷಕ್ಕೆ ಪ್ರೀತಿಪಾತ್ರರಿಗೆ ಚಿನ್ನದೊಡವೆ(Gold Ornaments)ಗಿಫ್ಟ್ ಮಾಡೋ ಯೋಚನೆ ಹೊಂದಿರೋರು ಇಂದು ಜ್ಯುವೆಲ್ಲರಿ (Jewellery)ಶಾಪ್ ಗೆ ಹೋಗೋದು ಪಕ್ಕಾ. ಆಕರ್ಷಕವಾದ ಬಂಗಾರದ ಗಿಫ್ಟ್ ಖರೀದಿಸಲು ನಿಮ್ಮ ಜೇಬು ತುಸು ಭಾರವಾಗಿರೋದು ಅಗತ್ಯವೇ. ಎಷ್ಟೋ ದಿನಗಳಿಂದ ಉಳಿತಾಯ(Save) ಮಾಡಿದ ಹಣದಲ್ಲಿ ದುಬಾರಿ ಉಡುಗೊರೆ(Gift) ಖರೀದಿಸೋ ಮುನ್ನ ಮಾರುಕಟ್ಟೆಯಲ್ಲಿನ ಚಿನ್ನದ ದರ ಪರಿಶೀಲಿಸೋದು ಅಗತ್ಯ. ಚಿನ್ನದ ಬೆಲೆ ಗಗನಕ್ಕೇರಿರೋ ಸಮಯದಲ್ಲಿ ಒಡವೆ ಖರೀದಿಸಿ ಹೆಚ್ಚುವರಿ ಹೊರೆ ಮಾಡಿಕೊಳ್ಳೋ ಬದಲು ದರ ಕಡಿಮೆ ಇರೋ ದಿನ ಖರೀದಿಸೋದು ಜಾಣತನ. ಬೆಂಗಳೂರಿನಲ್ಲಿ(Bengaluru) ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇದು ಚಿನ್ನ ಖರೀದಿಗೆ ಹೊರಟ್ಟಿರೋ ಗ್ರಾಹಕರಿಗೆ ಗೊಂದಲ ಮೂಡಿಸಿರೋದು ಸುಳ್ಳಲ್ಲ. ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ತುಸು ಇಳಿಕೆ ದಾಖಲಿಸಿದೆ. ಹೀಗಾಗಿ ಇಂದು ಚಿನ್ನ ಖರೀದಿಗೆ ಹೊರಟವರು ಬೆಲೆ ನೋಡಿ ಸ್ವಲ್ಪ ಮಟ್ಟಿಗೆ ಖುಷಿಪಡಬಹುದು.  ಇನ್ನು ಬೆಳ್ಳಿ(Silver)ಖರೀದಿಸಲು ಹೊರಟವರಿಗೆ ಇಂದು(ಡಿ.31) ನಿರಾಸೆಯಾಗೋದು ಗ್ಯಾರಂಟಿ. ನಿನ್ನೆ ಇಳಿಕೆ ದಾಖಲಿಸಿದ್ದ ಬೆಳ್ಳಿ ಇಂದು ಮತ್ತೆ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.31) ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru) ಚಿನ್ನದ ಬೆಲೆಯಲ್ಲಿ ಇಂದು 10ರೂ. ಇಳಿಕೆಯಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ (GOld) ಬೆಲೆ  44,900ರೂ. ಇದ್ದು, ಇಂದು 44,890ರೂ. ಆಗಿದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  48,980ರೂ. ಇದೆ. ನಿನ್ನೆ 49,990ರೂ. ಇತ್ತು. ಅಂದ್ರೆ ನಿನ್ನೆಗಿಂತ ಇಂದು 10ರೂ. ಇಳಿಕೆಯಾಗಿದೆ. ಬೆಳ್ಳಿ(Silver) ಬೆಲೆಯಲ್ಲಿ ಇಂದು 600ರೂ. ಏರಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆ 62,200ರೂ.ಇದೆ.

Petrol Diesel Rate: 2021ರ ಕೊನೆಯ ದಿನವೂ ಬದಲಾಗದ ಇಂಧನ ದರ; ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ ನೋಡಿ

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ(Delhi) ಇಂದು ಚಿನ್ನದ ಬೆಲೆಯಲ್ಲಿ 10ರೂ. ಇಳಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 47,050ರೂ. ಇದ್ದು, ಇಂದು  47,040ರೂ. ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿ ಇಂದು 51,310ರೂ. ಇದೆ. ಬೆಳ್ಳಿ ದರದಲ್ಲಿ 600ರೂ. ಏರಿಕೆಯಾಗಿದ್ದು,ಇಂದು ಒಂದು ಕೆ.ಜಿ. ಬೆಳ್ಳಿ ದರ 62,200ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ(Mumbai)ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 46,750ರೂ. ಇದೆ. ನಿನ್ನೆ 47, 760ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  48,750ರೂ. ಇದೆ.  ನಿನ್ನೆ  48,760ರೂ. ಇತ್ತು. ಅಂದ್ರೆ 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ 10ರೂ. ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಇಂದು 600ರೂ. ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ಬೆಲೆ 62,200ರೂ.  ಆಗಿದೆ.  

KYC Update Deadline Extended:ಬ್ಯಾಂಕ್ ಖಾತೆದಾರರಿಗೆ ಗುಡ್ ನ್ಯೂಸ್; ಕೆವೈಸಿ ದಾಖಲೆ ಸಲ್ಲಿಕೆ ಗಡುವು ಮಾ.31ಕ್ಕೆ ವಿಸ್ತರಣೆ

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ (Chennai) ಇಂದು ಚಿನ್ನದ ದರದಲ್ಲಿ 10ರೂ. ಇಳಿಕೆ ಕಂಡುಬಂದಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,010ರೂ.ಇದೆ. ನಿನ್ನೆ 45,020ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ಇಂದು  49,110ರೂ. ಇದೆ. ನಿನ್ನೆ 49,120ರೂ. ಇತ್ತು. ಬೆಳ್ಳಿ ದರದಲ್ಲಿ ಇಂದು 100ರೂ. ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ 65,400ರೂ.ಇದೆ.   

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ