ಕಳೆದ ವರ್ಷದ ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯದ್ದು ಶೇ. 15ರಷ್ಟು ಹೆಚ್ಚಳವಾಗಿದೆ.
ನವದೆಹಲಿ (ಡಿಸೆಂಬರ್ 2, 2023): ನವೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹದಲ್ಲಿ ಶೇ. 15ರಷ್ಟು ಏರಿಕೆಯಾಗಿ 1.68 ಲಕ್ಷ ಕೋಟಿ ರೂ ತಲುಪಿದೆ. ಇದು ಈವರೆಗಿನ 3ನೇ ಅತಿ ಗರಿಷ್ಠ ಪ್ರಮಾಣದ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಹೇಳಿದೆ.
2023ರ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಸಂಗ್ರಹ ಅತ್ಯಂತ ಗರಿಷ್ಠವಾಗಿದ್ದರೆ, ಕಳೆದ ಅಕ್ಟೋಬರ್‌ನಲ್ಲಿ ಸಂಗ್ರಹವಾದ 1.72 ಲಕ್ಷ ಕೋಟಿ ರೂ. 2ನೇ ಅತ್ಯಂತ ಗರಿಷ್ಠ ಎಂಬ ದಾಖಲೆ ಹೊಂದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯದ್ದು ಶೇ. 15ರಷ್ಟು ಹೆಚ್ಚಳವಾಗಿದೆ.
ಇದನ್ನು ಓದಿ: ಜಿಡಿಪಿ ಪ್ರಗತಿ ದರದಲ್ಲಿ ಚೀನಾ ಹಿಂದಿಕ್ಕಿದ ಭಾರತ: ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ, ನಿಫ್ಟಿ ಹೊಸ ದಾಖಲೆ!
ಕಳೆದ ತಿಂಗಳು ಸಂಗ್ರಹವಾಗಿರುವ 1.68 ಲಕ್ಷ ಕೋಟಿ ರೂ. ಜಿಎಸ್‌ಟಿಯಲ್ಲಿ ಕೇಂದ್ರದ ಪಾಲು 30,420 ಕೋಟಿ ರೂ., ರಾಜ್ಯದ ಪಾಲು 38,226 ಕೋಟಿ ರೂ. ಮತ್ತು ಐಜಿಎಸ್‌ಟಿಯ ಪಾಲು 87,009 ಕೋಟಿ ರೂ .ನಷ್ಟಿದೆ (ಸರಕು ಆಮದು ಮೇಲಿನ 39,198 ಕೋಟಿ ರೂ. ಸುಂಕ ಸೇರಿ). ಅಲ್ಲದೇ 12,274 ಕೋಟಿ ರೂ. ಸೆಸ್ (ಸರಕು ಆಮದು ಮೇಲಿನ 1,036 ಕೋಟಿ ರು. ಸೇರಿ) ಸಂಗ್ರಹವಾಗಿದೆ ಎಂದು ಸಚಿವಾಲಯ ಹೇಳಿದೆ.
ಏಪ್ರಿಲ್ 2023 ರಲ್ಲಿ 1.87 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು. ಇದು ಈವರೆಗಿನ ಅತ್ಯಧಿಕವಾಗಿದೆ. ಇದಾದ ನಂತರ ಅಕ್ಟೋಬರ್‌ನಲ್ಲಿ 1.72 ಲಕ್ಷ ಕೋಟಿ ರು. ಸಂಗ್ರಹವಾಗಿದ್ದು, 2ನೇ ಅತಿ ಗರಿಷ್ಠವಾಗಿದೆ. ಇನ್ನು 2022ರ ಅಕ್ಟೋಬರ್‌ನಲ್ಲಿ ಸಂಗ್ರಹವಾಗಿದ್ದ 1.52 ಲಕ್ಷ ಕೋಟಿ ರು.ಗಿಂತ ಇದು ಶೇ.13ರಷ್ಟು ಅಧಿಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿತ್ತು.
ಬೆಂಗಳೂರಲ್ಲಿ ಪರಿಸರ ಸ್ನೇಹಿ ವಾಹನ ಬುಕ್ ಮಾಡಲು ಅನುಮತಿ: ಉಬರ್ ಕಂಪನಿಯಿಂದ 'ಉಬರ್ ಗ್ರೀನ್' ಸೇವೆ
ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಮಾಸಿಕ ಸರಾಸರಿ 2023-24ನೇ ಸಾಲಿನಲ್ಲಿ 1.66 ಲಕ್ಷ ಕೋಟಿ ರೂ. ಇದೆ. ಇದು ಹಿಂದಿನ ವರ್ಷದ ಅವಧಿಗಿಂತ 11 ಶೇಕಡಾ ಹೆಚ್ಚಾಗಿದೆ. ಇತ್ತೀಚಿನ ಜಿಎಸ್‌ಟಿ ಸಂಗ್ರಹ ಅಂಕಿಅಂಶಗಳು ಭಾರತದ ಆರ್ಥಿಕತೆಯ ಚೇತರಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಒತ್ತಿಹೇಳುತ್ತವೆ. ಕೋವಿಡ್ - 19 ಸಾಂಕ್ರಾಮಿಕ ರೋಗದಿಂದ ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಂದ ದೇಶ ಚೇತರಿಸಿಕೊಳ್ಳುವುದನ್ನು ಮುಂದುವರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಜಿಡಿಪಿ ಪ್ರಗತಿ ದರ ವಿಶ್ವದಲ್ಲೇ ನಂ.1: ಚೀನಾ ಹಿಂದಿಕ್ಕಿದ ಭಾರತ