
ಇಡೀ ಟೆಲಿಕಾಂ ಇಂಡಸ್ಟ್ರಿಯಲ್ಲಿಯೇ ಹೊಸತನವನ್ನು ತಂದು, ಅಲ್ಲಿಯವರೆಗೆ ಭಾರಿ ದರಕ್ಕೆ ನೆಟ್ಪ್ಯಾಕ್ ನೀಡುತ್ತಿದ್ದ ಕಂಪೆನಿಗಳಿಗೆಲ್ಲಾ ಸೆಡ್ಡು ಹೊಡೆದು ಹೊಸ ಕ್ರಾಂತಿಯನ್ನು ತಂದದ್ದು ಮುಕೇಶ್ ಅಂಬಾನಿ ನೇತೃತ್ವದ ಜಿಯೋ (JIO). ಕೆಲ ತಿಂಗಳ ಹಿಂದೆ ಜಿಯೋ ಕೂಡ ತನ್ನ ದರವನ್ನು ಏರಿಸಿದ್ದರೂ ಏರ್ಟೆಲ್ನಂಥ ಟೆಲಿಕಾಂಗೆ ಹೋಲಿಸಿದರೆ ಜಿಯೋದ ದರವು ಕಡಿಮೆ ಇರುವುದರ ಜೊತೆಗೆ, 5ಜಿ ಸೇವೆಯಿಂದಾಗಿ unlimited data ಸಿಗುತ್ತಿದೆ. ಇದೇ ಕಾರಣಕ್ಕೆ ಹಲವು ಗ್ರಾಹಕರು ಜಿಯೋಗೆ ತಮ್ಮ ನೆಟ್‌ವರ್ಕ್ ಬದಲಾಯಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಜಿಯೋ (Reliance Jio) ಭಾರತದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾಗಿದ್ದು, ಇದು ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿದೆ. ಇದು ಭಾರತದಾದ್ಯಂತ ಸಂಪೂರ್ಣವಾಗಿ 4G LTE ನೆಟ್‌ವರ್ಕ್ ಸೇವೆಗಳನ್ನು ಒದಗಿಸುತ್ತದೆ. 2016 ರಲ್ಲಿ ವಾಣಿಜ್ಯ ಸೇವೆಯನ್ನು ಪ್ರಾರಂಭಿಸಿ ಅಲ್ಪ ಕಾಲದಲ್ಲಿಯೇ ಭಾರಿ ಡಿಮಾಂಡ್ ಕುದುರಿಸಿಕೊಂಡಿದೆ.
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ವಿಶೇಷ ಡೇಟಾ ಯೋಜನೆಯನ್ನು ತಂದಿದೆ. ಇದರ ಬೆಲೆ ಕೇವಲ 77 ರೂ.. ಈ ಯೋಜನೆ ಸಾಮಾನ್ಯ ಜನರಿಗೆ ಕೈಗೆಟುಕುವಂತಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಜಿಯೋ ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಹೌದು. 2025 ರ 17 ನೇ ಆವೃತ್ತಿಯ ಏಷ್ಯಾ ಕಪ್, ಸೆಪ್ಟೆಂಬರ್ 9 ರಿಂದ ಆರಂಭವಾಗಿದ್ದು ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ. ಇದನ್ನು ನೀವು ಆರಾಮಾಗಿ ವೀಕ್ಷಿಸಬಹುದಾಗಿದೆ. ಅದಕ್ಕಾಗಿ 77 ರೂಪಾಯಿಗಳ ರೀಚಾರ್ಜ್ ಮಾಡಿಸಿಕೊಳ್ಳಬೇಕಿದೆ. ಜಿಯೋದ ಈ ಯೋಜನೆಯಲ್ಲಿ, ನೀವು 3 ಜಿಬಿ ಡೇಟಾ ಮತ್ತು ಸೋನಿ ಲೈವ್ ಚಂದಾದಾರಿಕೆಯನ್ನು 30 ದಿನಗಳವರೆಗೆ ಪಡೆಯುತ್ತಿದ್ದೀರಿ. ಈ ಚಂದಾದಾರಿಕೆಯ ಮೂಲಕ, ನೀವು ಕೇವಲ 77 ರೂ.ಗಳಿಗೆ ಏಷ್ಯಾ ಕಪ್ ಪಂದ್ಯಗಳನ್ನು ವೀಕ್ಷಿಸಬಹುದು.
ಇದನ್ನೂ ಓದಿ: ವರ್ಷಕ್ಕೆ 520 ರೂ. ಕಟ್ಟಿ 10 ಲಕ್ಷ ವಿಮೆ ಜೊತೆ ಹಲವು ಫ್ರೀ ಕೊಡುಗೆ ಪಡೆಯಿರಿ! ಏನಿದು Post Office ಸ್ಕೀಮ್?
ಇದಕ್ಕಾಗಿ ನೀವುವ ಮೊದಲು ಡೇಟಾ ಡೇಟಾ ಪ್ಯಾಕ್ ಹೊಂದಿರಬೇಕು. ನಿಮ್ಮ ಬಳಿ ಡೇಟಾ ಪ್ಯಾಕ್ ಇಲ್ಲದಿದ್ದರೆ, ನೀವು ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ದೇಶದ ಯಾವುದೇ ಮೂಲೆಯಿಂದ ಕ್ರಿಕೆಟ್ ಪ್ರಿಯರು ಈ ಯೋಜನೆಯನ್ನು ಬಳಸಲು ಸಾಧ್ಯವಾಗುತ್ತದೆ. ಆದ್ದರಿಂದ ನೀವು ಕ್ರಿಕೆಟ್ ಪ್ರಿಯರಾಗಿದ್ದರೆ, ನೀವು ಈ ಯೋಜನೆಯನ್ನು ಸಹ ಖರೀದಿಸಬಹುದು.
ಅಂದಹಾಗೆ, ಭಾರತದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಆಗಲಿವೆ. ಸೋನಿಲಿವ್ ಮತ್ತು ಫ್ಯಾನ್‌ಕೋಡ್‌ನಲ್ಲಿ ನೇರಪ್ರಸಾರ ವೀಕ್ಷಣೆ ಮಾಡಬಹುದು. ದೂರದರ್ಶನ ಮತ್ತು ಜಿಯೋ ಟಿವಿಯಲ್ಲಿ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕವೂ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಇದೀಗ 77 ರೂಪಾಯಿ ಡಾಟಾ ಪ್ಯಾಕ್ ಹಾಕಿಸಿಕೊಂಡರೆ ಮೊಬೈಲ್ನಲ್ಲಿಯೇ ನೀವು ಪಂದ್ಯ ವೀಕ್ಷಿಸಲು ಸಾಧ್ಯವಾಗಿದೆ.
ಇದನ್ನೂ ಓದಿ: ಡಿಗ್ರಿಯೂ ಇಲ್ಲ, ಅನುಭವವೂ ಇಲ್ಲ! ದಾವಣಗೆರೆ ದೋಸೆಯಿಂದ ಮುಂಬೈ ದಂಪತಿಗೆ ಕೋಟಿ ಆದಾಯ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.