
ನವದೆಹಲಿ (ಸೆ.14) ಆದಾಯ ತೆರಿಗೆ ವಿಚಾರದಲ್ಲಿ ಆಲಸ್ಯ, ನಿರ್ಲಕ್ಷ್ಯ ಉತ್ತಮವಲ್ಲ. ವಿಶೇಷವಾಗಿ ಕಳೆದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಆದಾಯ ತರಿಗೆ ವಿನಾಯಿತಿ ಮಿತಿಯನ್ನು 11 ಲಕ್ಷ ರೂಪಾಯಿಗೆ ಏರಿಕೆ ಮಾಡಿತ್ತು. ಇದರೊಂದಿಗೆ ಮಧ್ಯಮ ವರ್ಗದ ಹಲವರು ನಿರಾಳರಾಗಿದ್ದರು. ಇಷ್ಟೇ ಅಲ್ಲ ಆದಾಯ ವಿನಾಯಿತಿ ಮಿತಿಯೊಳಗಿದೆ ಎಂದು ಹಲವರು ಐಟಿಆರ್ ಸಲ್ಲಿಕೆ ಮಾಡುವುದನ್ನೇ ಬಿಟ್ಟಿದ್ದಾರೆ. ನಿಮ್ಮ ಆದಾಯ ಆದಾಯ ತೆರಿಗೆ ವಿನಾಯಿತಿ ಮಿತಿಯೊಳಗಿದ್ದರೂ ಕಡ್ಡಾಯವಾಗಿ ಐಟಿಆರ್ ಸಲ್ಲಿಕೆ ಮಾಡಬೇಕು. ಓಲ್ಡ್ ರೆಜಿಮ್ ಪ್ರಕಾರ ನಿಮ್ಮ ಆದಾಯ 2.5 ಲಕ್ಷ ರೂಪಾಯಿ, ಹೊಸ ರಿಜಿಮ್ ಪ್ರಕಾರ 3 ಲಕ್ಷ ರೂಪಾಯಿ ಆದಾಯವಿದ್ದರೂ ಐಟಿಆರ್ ಸಲ್ಲಿಕೆ ಮಾಡಲೇಬೇಕು.
ಐಟಿಆರ್ ಸಲ್ಲಿಕೆ ಮಾಡದೇ ಇರುವುದು ಉತ್ತಮ ನಿರ್ಧಾರವಲ್ಲ. ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ವಾರ್ಷಿಕವಾಗಿ 8 ಫೆನಾನ್ಶಿಯಲ್ ಟ್ರಾನ್ಸಾಕ್ಷನ್ ಮಾಡಿದರೆ ಐಟಿಆರ್ ಸಲ್ಲಿಕೆ ಮಾಡಲೇಬೇಕು. ನಿಮ್ಮ ಆದಾಯದ ಮೊತ್ತ ಮಾತ್ರವಲ್ಲ, ಇತರ ಕೆಲ ಟ್ರಾನ್ಸಾಕ್ಷನ್ ನಡೆದಿದ್ದರೂ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆ ಮಾಡಬೇಕು.
ITR Refund: ಐಟಿಆರ್ ಫೈಲ್ ಮಾಡಿ ದಿನಗಳೇ ಆಗಿದ್ರೂ ರೀಫಂಡ್ ಬಂದಿಲ್ವಾ? ಈ 6 ಕಾರಣಗಳಿರಬಹುದು..
ನಿಮ್ಮ ಆದಾಯ ಎಷ್ಟೇ ಆಗಿರಲಿ. ನೀವು ವಿದೇಶಿ ಪ್ರವಾಸ ಮಾಡುತ್ತಿದ್ದೀರಿ, 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಿ ಎಂದಾದರೆ ಐಟಿಆರ್ ಸಲ್ಲಿಕೆ ಮಾಡಲೇಬೇಕು. ಇದೇ ವೇಳೆ ವಿದೇಶದಲ್ಲಿ ಆಸ್ತಿ, ವಿದೇಶದಿಂದ ಆದಾಯ ಪಡೆಯುತ್ತಿದ್ದರೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಕೆ ಮಾಡಬೇಕು.
ನಿಮ್ಮ ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್ (ಟಿಡಿಎಸ್) ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್(ಟಿಸಿಎಸ್) 25,000 ರೂಪಾಯಿ (ಹಿರಿಯ ನಾಗರೀಕರಿಗೆ 50,000 ರೂಪಾಯಿ) ಇದ್ದರೆ ನಿಮ್ಮ ಆದಾಯ ಎಷ್ಟೇ ಇರಬಗುದು. ನೀವು ಐಟಿಆರ್ ಸಲ್ಲಿಕೆ ಮಾಡಬೇಕು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಭಾರಿ ಪ್ರಮಾಣದ ಹಣದ ಟ್ರಾನ್ಸಾಕ್ಷನ್ ನಡೆದಿದ್ದರೆ, ಅಂದರೆ ಉಳಿತಾಯ ಖಾತೆಯಲ್ಲಿ ವಾರ್ಷಿಕವಾಗಿ 50 ಲಕ್ಷ ರೂಪಾಯಿ ಡೆಪಾಸಿಟ್, ಕರೆಂಟ್ ಅಕೌಂಟ್‌ನಲ್ಲಿ 1 ಕೋಟಿ ರೂಪಾಯಿ ಡೆಪಾಸಿಟ್ ಆದರೂ ಐಟಿಆರ್ ಸಲ್ಲಿಕೆ ಮಾಡಬೇಕು.
ಉದ್ಯಮಿಗಳ ಟ್ರಾನ್ಸಾಕ್ಷನ್ ಲಿಮಿಟ್ ಮೀರಿದ್ದರೂ ಐಟಿಆರ್ ಸಲ್ಲಿಕೆ ಕಡ್ಡಾಯವಾಗಿದೆ. ಬ್ಯೂಸಿನೆಸ್ ಟರ್ನ್ಓವರ್ 60 ಲಕ್ಷ ರೂಪಾಯಿ ಅಥವಾ ಫ್ರೊಫೆಶನಲ್ ರೆಸಿಪ್ಟ್ 10 ಲಕ್ಷ ರೂಪಾಯಿ ಮೀರಿದರೆ ಐಟಿಆರ್ ಸಲ್ಲಿಕೆ ಮಾಡಬೇಕು.
ವಿದ್ಯುತ್ ಬಿಲ್ ಪ್ರತಿ ತಿಂಗಳು ಮಾಡಬೇಕು. ಆದರೆ ನಿಮ್ಮ ಆದಾಯ 2.5 ಲಕ್ಷ ಅಥವಾ 3 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೂ ನಿಮ್ಮ ವಿದ್ಯುತ್ ಬಿಲ್ ನಿಗದಿತ ಮಿತಿಗಿಂತ ಹೆಚ್ಚಿದ್ದರೆ ಐಟಿಆರ್ ಸಲ್ಲಿಕೆ ಕಡ್ಡಾವಾಗಿದೆ. ವಾರ್ಷಿಕವಾಗಿ ನಿಮ್ಮ ವಿದ್ಯುತ್ ಬಿಲ್ 1 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಐಟಿಆರ್ ಸಲ್ಲಿಕೆ ಮಾಡಬೇಕು. ಈ ವೇಳೆ ನಿಮ್ಮ ವಿದ್ಯುತ್ ಬಳಕೆಯ ಲೆಕ್ಕ ನೀಡಬೇಕು.
Income Tax Return: ಹೊಸ, ಹಳೆ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ?
ಅವಧಿ ಮುಗಿದ ಬಳಿಕ ಐಟಿಆರ್ ಸಲ್ಲಿಕೆ ಮಾಡಿದರೆ ಕನಿಷ್ಠ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಮೇಲಿನ 8 ಟ್ರಾನ್ಸಾಕ್ಷನ್‌ನಲ್ಲಿ ಯಾವೂದೂ ಇಲ್ಲದಿದ್ದರೆ, ನಿಮ್ಮ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಐಟಿಆರ್ ಸಲ್ಲಿಕೆ ಮಾಡಬೇಕಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.