'ಭಾರತೀಯರನ್ನು ಸಿಇಒ ಆಗಿ ನೇಮಿಸಿ, ಇಲ್ಲಿನ ಕಾನೂನು ಪಾಲಿಸಿ..' ಚೀನಾ ಮೊಬೈಲ್‌ ಕಂಪನಿಗೆ ಕೇಂದ್ರದ ಆದೇಶ!

Published : Jun 13, 2023, 07:54 PM IST
'ಭಾರತೀಯರನ್ನು ಸಿಇಒ ಆಗಿ ನೇಮಿಸಿ, ಇಲ್ಲಿನ ಕಾನೂನು ಪಾಲಿಸಿ..' ಚೀನಾ ಮೊಬೈಲ್‌ ಕಂಪನಿಗೆ ಕೇಂದ್ರದ ಆದೇಶ!

ಸಾರಾಂಶ

ಯಾವುದೇ ಕಾರಣಕ್ಕೂ ಭಾರತದಲ್ಲಿ ತೆರಿಗೆ ವಂಚನೆಗಳನ್ನು ಮಾಡುವಂತಿಲ್ಲ. ಇಲ್ಲಿನ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಿಯೋಮಿ ಹಾಗೂ ಒಪ್ಪೊದಂಥ ಕಂಪನಿಗಳು ಸ್ಥಳೀಯ ಪಾರ್ಟ್ನರ್‌ಗಳನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಖಡಕ್‌ ಆಗಿ ತಿಳಿಸಿದೆ.

ನವದೆಹಲಿ (ಜೂ.13): ಚೀನಾದ ಮೊಬೈಲ್‌ ಕಂಪನಿಗಳು ದೇಶದಲ್ಲಿ ವ್ಯವಹಾರಗಳನ್ನು ಮುಂದುವರಿಸಬೇಕಾದಲ್ಲಿ ಭಾರತೀಯ ವ್ಯಕ್ತಿಯನ್ನೇ ತಮ್ಮ ಕಂಪನಿಗಳಿಗೆ ಸಿಇಒ ಆಗಿ ನೇಮಿಸಬೇಕು. ಸ್ಥಳೀಯ ವ್ಯವಹಾರಗಳಿಗೆ ಇಲ್ಲಿನ ಸ್ಥಳೀಯರನ್ನೇ ಪಾರ್ಟ್ನರ್‌ ಆಗಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಜೊತೆಗಿನ ಸಭೆಯಲ್ಲಿ ಈ ಮಾಹಿತಿಯನ್ನು ಕಂಪನಿಗಳಿಗೆ ತಿಳಿಸಲಾಗಿದೆ. ಇದರಲ್ಲಿ ಹಾಜರಿದ್ದ ಮೂವರು ಕಾರ್ಯನಿರ್ವಾಹಕ ಅಧಿಕಾರಿಗಳು ಇದನ್ನು ಖಚಿತಪಡಿಸಿದ್ದಾರೆ. ಅವರು ಹೇಳಿರುವ ಪ್ರಕಾರ, ಚೀನಾದ ಕಂಪನಿಗಳು ತನ್ನ ಪ್ರಮುಖ ಹುದ್ದೆಯಾದ ಕಾರ್ಯ ನಿರ್ವಾಹಕ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಹಾ ಅಧಿಕಾರಿಗಳು, ಮುಖ್ಯ ಹಣಕಾಸು ಅಧಿಕಾರಿಗಳು ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಗಳಂಥ ಪ್ರಮುಖ ಸ್ಥಾನಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳೇ ಇರಬೇಕು ಎಂದು ಕೇಂದ್ರ ಸರ್ಕಾರ ನಿರೀಕ್ಷೆ ಮಾಡಿದೆ. ಅದರೊಂದಿಗೆ ಭಾರತೀಯ ಗುತ್ತಿಗೆ ತಯಾರಕರನ್ನು ನೇಮಿಸಲು, ಭಾರತೀಯ ವ್ಯವಹಾರಗಳೊಂದಿಗೆ ಜಂಟಿ ಉದ್ಯಮಗಳ ಮೂಲಕ ಘಟಕ ಮಟ್ಟಕ್ಕೆ ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಸ್ಥಳೀಯ ವಿತರಕರನ್ನು ನೇಮಿಸಿಕೊಳ್ಳಲು ಸರ್ಕಾರವು ಅವರಿಗೆ ನಿರ್ದೇಶಿಸಿದೆ. ಭಾರತದಲ್ಲಿ ಮಾರಾಟವಾಗುವ ಚೀನಾ ಕಂಪನಿಗಳ ಮೊಬೈಲ್‌ಗಳ ವಿತರಕರು ಕೂಡ ಚೀನಾದವರೇ ಆಗಿದ್ದಾರೆ ಎನ್ನುವ ಕಾರಣಕ್ಕೆ ಈ ಸೂಚನೆ ನೀಡಲಾಗಿದೆ.

ಈ ಅಧಿಕಾರಿಗಳು ತಿಳಿಸಿರುವ ಮಾಹಿತಿ ಪ್ರಕಾರ, ಭಾರತದಲ್ಲಿ ತೆರಿಗೆ ತಪ್ಪಿಸದಂತೆ ಮತ್ತು ಕಾನೂನನ್ನು ಅನುಸರಿಸುವಂತೆ ಚೀನಾದ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸಿದ ಇತ್ತೀಚಿನ ಸಭೆಗಳಲ್ಲಿ, ಉನ್ನತ ಸರ್ಕಾರಿ ಅಧಿಕಾರಿಗಳು ಶಿಯೋಮಿ, ಒಪ್ಪೋ, ರಿಯಲ್‌ಮೀ ಮತ್ತು ವಿವೋ ಸೇರಿದಂತೆ ಚೀನಾದ ಕಂಪನಿಗಳೊಂದಿಗೆ ಈ ಸಮಸ್ಯೆಗಳನ್ನು ಚರ್ಚಿಸಿದ್ದಾರೆ. ತಯಾರಕರ ಲಾಬಿ ಗುಂಪು ಐಸಿಇಎ, ತಯಾರಕರನ್ನು ಪ್ರತಿನಿಧಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಭೆಗಳು ಹಲವಾರು ಚೀನೀ ಸ್ಮಾರ್ಟ್‌ಫೋನ್ ತಯಾರಕರು ತೆರಿಗೆ ವಂಚನೆಗಾಗಿ ತನಿಖೆಗೆ ಒಳಪಟ್ಟಿರುವ ಸಮಯದಲ್ಲಿ ಮತ್ತು ಸಾವಿರಾರು ಕೋಟಿ ಮೌಲ್ಯದ ಅಕ್ರಮ ಹಣ ರವಾನೆ ಆರೋಪದ ಸಮಯದಲ್ಲಿ ನಡೆದಿವೆ.  ಸರ್ಕಾರದೊಂದಿಗೆ ಲಾಬಿ ಮಾಡುವುದರ ಜೊತೆಗೆ, ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಆನ್‌ಲೈನ್ ರಿಯಾಯಿತಿಯು ಸಂಭವಿಸದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ.

 

Xiaomi 5551 ಕೋಟಿ ರೂ. ಜಪ್ತಿ ತಡೆಗೆ ಕರ್ನಾಟಕ ಹೈಕೋರ್ಟ್‌ ನಕಾರ

ಉತ್ಪಾದನಾ ಕಾರ್ಯಾಚರಣೆಗಳ ಜೊತೆಗೆ, ಮಾರಾಟ ಮತ್ತು ಮಾರುಕಟ್ಟೆಗಾಗಿ ಸರ್ಕಾರವು ಭಾರತೀಯ ಈಕ್ವಿಟಿ ಪಾಲುದಾರರನ್ನು ಹುಡುಕುತ್ತಿದೆ. ಪ್ರಸ್ತುತ ಭಾರತದಲ್ಲಿ ಚೀನೀ ಸ್ಮಾರ್ಟ್‌ಫೋನ್ ಕಂಪನಿಗಳ ಸಂಪೂರ್ಣ ಸ್ವಾಮ್ಯದ ಕಾರ್ಯಾಚರಣೆಗಳಿವೆ.

Xiaomi ಬಳಿ 5,551 ಕೋಟಿ ವಶಪಡಿಸಿಕೊಂಡ ED: ವಿದೇಶಿ ವಿನಿಮಯ ಪ್ರಾಧಿಕಾರ ಸ್ಪಷ್ಟ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ