ಓಡಾಟಕ್ಕೆ ಪ್ರೈವೇಟ್ ಜೆಟ್, ಮೋಜು-ಮಸ್ತಿಗೆ ಆಪ್ಸರೆಯರು! ಜೂಜಾಟದಿಂದಲೇ ಹಣದ ಹೊಳೆ ಹರಿಸಿದವನ ಕಥೆ ಇದು!
ಈತ ಹುಟ್ಟಿರೋದೇ ಮೋಜು-ಮಸ್ತಿ ಮಾಡೋದಕ್ಕೆ.ಭೂಮಿ ಮೇಲಿರುವ ಸಕಲ ಸುಖವೂ ತನ್ನದಾಗಬೇಕೆಂಬ ಹೆಬ್ಬಯಕೆ ಇವನದು. ದಿನಕ್ಕೊಂದು ಕಾರು ಬದಲಾಯಿಸುವ ಈತನ ಸುತ್ತ ಸದಾ ತುಂಡು ಬಟ್ಟೆ ತೊಟ್ಟ ಚೆಲುವೆಯರ ದಂಡು. ಈತನ ಇನ್ ಸ್ಟ್ರಾಗ್ರಾಂ ಖಾತೆ ತೆರೆದು ನೋಡಿದವರು ಹೊಟ್ಟೆಯುರಿ ಪಡದಿದ್ದರೆ ಹೇಳಿ? ಮೈ ಬಗ್ಗಿಸದೆ ಜೂಟಾಟದ ಮೂಲಕವೇ ಹಣದ ಹೊಳೆ ಹರಿಸಿರುವ ಈತನ ಹೆಸರು ಡ್ಯಾನ್ ಬಿಲ್ಜೇರಿಯನ್. ಈತನ ಕುರಿತ ಆಸಕ್ತಿಕಾರ ಮಾಹಿತಿಗಳು ಇಲ್ಲಿವೆ.
Business Desk:ಈತ ಒಂದು ರೀತಿ ಮಾಡರ್ನ್ ಇಂದ್ರ. ಏಕೆಂದ್ರೆ ಈತನ ಸುತ್ತ ಸದಾ ತುಂಡು ಬಟ್ಟೆ ಸುತ್ತ ಚೆಲುವೆಯರ ದಂಡೇ ಇರುತ್ತೆ. ಅರಮನೆಯಂತಹ ಬಂಗಲೆಗಳು, ತಿರುಗಾಟಕ್ಕೆ ಪ್ರೈವೇಟ್ ಜೆಟ್ (Private Jet) . ಅಷ್ಟೇ ಅಲ್ಲ, ನಾವೆಲ್ಲ ದಿನಕ್ಕೊಂದು ಬಟ್ಟೆ ಬದಲಾಯಿಸಿದ್ರೆ, ಈತ ಪ್ರತಿದಿನ ಕಾರು (Car) ಬದಲಾಯಿಸ್ತಾನಂತೆ. ಅಂದ್ರೆ ಇಂದು ಬಳಸಿದ ಕಾರನ್ನು ನಾಳೆ ಬಳಸಲ್ಲ. ಸದಾ ಮೋಜು -ಮಸ್ತಿ, ಜೂಜಾಟ (Gambling), ಹಾರಾಟವೇ ಈತನ ಬದುಕು. ಈತನ ಐಷಾರಾಮಿ (Lavish) ಜೀವನಶೈಲಿ ನೋಡಿದ್ರೆ ಒಂದುಕ್ಷಣ ಇಂದ್ರನೂ ದಂಗಾಗಬಹುದು! ಈತನ ಇನ್ ಸ್ಟ್ರಾಗ್ರಾಂ ಖಾತೆ ತೆರೆದು ನೋಡಿದ್ರೆ ಐಷಾರಾಮಿ ಜೀವನದ ಅನಾವರಣವಾಗುತ್ತದೆ. ಸದಾ ಇನ್ ಸ್ಟ್ರಾಗ್ರಾಂನಲ್ಲಿ ಸಕ್ರಿಯವಾಗಿರುವ ಈತನಿಗೆ 'ಕಿಂಗ್ ಆಫ್ ಇನ್ ಸ್ಟಾಗ್ರಾಂ' (King of Instagram) ಎಂಬ ಬಿರುದು ಕೂಡ ಇದೆ. ಈ ಬಿಂದಾಸ್ ಸಿರಿವಂತನ ಹೆಸರು ಡ್ಯಾನ್ ಬಿಲ್ಜೇರಿಯನ್ (Dan Bilzerian).ಹಾಗಾದ್ರೆ ಈತ ಯಾರು? ಹಿನ್ನೆಲೆ ಏನು? ಇಷ್ಟು ಶ್ರೀಮಂತಿಕೆ ಗಳಿಸಿದ್ದು ಹೇಗೆ?
ಯಾರೀ ಕುಬೇರ?
ಡ್ಯಾನ್ ಬಿಲ್ಜೇರಿಯನ್ (Dan Bilzerian) ಒಬ್ಬ ವೃತ್ತಿಪರ ಜೂಜುಗಾರ (gambler).ಒಂದರ್ಥದಲ್ಲಿ ಜೂಜು ಸಾಮ್ರಾಜ್ಯದ ದೊರೆ. ಪೋಕರ್ (Poker) ಎಂಬ ಜೂಜಾಟದ ಮೂಲಕವೇ ಈತ ಕೋಟಿಗಟ್ಟಲೆ ಸಂಪಾದಿಸಿದ್ದಾನೆ. ಪೋಕರ್ ಆಟದಲ್ಲಿ ಈತನಿಗೆ ಸರಿಸಾಟಿಯಾಗಿ ನಿಲ್ಲೋರೇ ಇಲ್ಲ. ಈ ಜೂಜಾಟದಲ್ಲಿ ಈತ ಎಷ್ಟು ನಿಷ್ಣಾತನೆಂದ್ರೆ ಒಂದೇ ರಾತ್ರಿಯಲ್ಲಿ 10.8 ಮಿಲಿಯನ್ ಡಾಲರ್ ಗಳಿಸಿದ್ದೂ ಇದೆ. ಇದೇ ಕಾರಣಕ್ಕೆ ಈತನನ್ನು 'ಕಿಂಗ್ ಆಫ್ ಫೋಕರ್' (King of poker) ಎಂದು ಕೂಡ ಕರೆಯುತ್ತಾರೆ. ಇನ್ನು ಈತ ನಟ ಕೂಡ ಹೌದು. ಅದರ್ ವುಮೆನ್ (Other Woman), ದಿ ಇಕ್ವಾಲಿಸರ್ (The Equalizer) ಸೇರಿದಂತೆ ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾನೆ.
Sovereign Gold Bond:ಚಿನ್ನದ ಮೇಲಿನ ಹೂಡಿಕೆಗೆ ಒಳ್ಳೆಯ ಅವಕಾಶ; ಸೋಮವಾರ ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ
ಹುಟ್ಟು ಶ್ರೀಮಂತ
ಅಂದಹಾಗೇ ಡ್ಯಾನ್ ಬಿಲ್ಜೇರಿಯನ್ ಜೂಜಾಟದ ಮೂಲಕವೇ ಕೋಟಿಗಟ್ಟಲೆ ಹಣ ಸಂಪಾದಿಸಿರಬಹುದು. ಆದ್ರೆ ಈತನಿಗೆ ಅಪ್ಪನಿಂದ ಬಳುವಳಿಯಾಗಿ ಬಂದ ಸಂಪತ್ತು ಕೂಡ ಕಡಿಮೆಯೇನಿಲ್ಲ. ಅಪ್ಪ ಗಳಿಸಿಟ್ಟ ಹಣದೊಂದಿಗೆ ಜೂಜಾಟದ ಸಂಪಾದನೆ ಈತನ ಖಜಾನೆಯನ್ನು ಮತ್ತಷ್ಟು ತುಂಬಿಸಿದೆ. ಈತನ ತಂದೆ ಟೆರ್ರಿ ಸ್ಟೆಫ್ಫನ್ (Terri Steffen) ಉದ್ಯಮಿಯಾಗಿದ್ದು, ಅಗರ್ಭ ಶ್ರೀಮಂತರಾಗಿದ್ದರು. ಮನೆಯಲ್ಲಿ ಸಿರಿತನವಿದ್ದರೂ ಡ್ಯಾನ್ ಬಿಲ್ಜೇರಿಯನ್ ಗೆ ಅಪ್ಪ-ಅಮ್ಮನ ಪ್ರೀತಿಯ ಕೊರತೆಯಿತ್ತು. ಇದೇ ಕಾರಣಕ್ಕೆ ಈತ ಸೂಕ್ತ ಮಾರ್ಗದರ್ಶನವಿಲ್ಲದೆ ತನ್ನಿಷ್ಟದಂತೆ ಬೆಳೆದು ಜೂಜು, ಡ್ರಗ್ಸ್, ಸೆಕ್ಸ್ ಚಟಕ್ಕೆ ಅಂಟಿಕೊಂಡ ಎಂದು ಹೇಳಲಾಗಿದೆ. 1980 ರಲ್ಲಿ ಡಿಸೆಂಬರ್ 7 ರಂದು ಫ್ಲೋರಿಡಾದಲ್ಲಿ ಜನಿಸಿದ ಡ್ಯಾನ್, ಜೂಜಾಟಕ್ಕೆ ಇಳಿದ ಪ್ರಾರಂಭದ ದಿನಗಳಲ್ಲಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಆದರೆ, ನಂತರ ಅದರಿಂದಲೇ ಲೆಕ್ಕವಿಲ್ಲದಷ್ಟು ಹಣವನ್ನು ಸಂಪಾದಿಸಿದ್ದ ಕೂಡ. ಅಂದ ಹಾಗೇ ಡ್ಯಾನ್ ಗೆ ಪೋಕರ್ ಪರಿಚಯಿಸಿದ್ದು ಆತನ ಅಣ್ಣಆಡಂ (Adam).
ಡ್ಯಾನ್ ಅನೇಕ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದರು ಕೂಡ ಪದವಿ ಪಡೆಯಲು ಸಾಧ್ಯವಾಗಲಿಲ್ಲ. ಆ ಬಳಿಕ ಆತ ಫ್ಲಾರಿಡ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಂಡು ಬ್ಯುಸಿನೆಸ್ ಹಾಗೂ ಕ್ರಿಮಿನಾಲಜಿಯಲ್ಲಿ ಓದಿದ್ದ.
ಭಾರತದಿಂದ ಕುವೈತ್‌ಗೆ 192 ಟನ್ ಸಗಣಿ ರಫ್ತು!
200 ಮಿಲಿಯನ್ ಡಾಲರ್ ಒಡೆಯ
2022ರ ಜೂನ್ ಗೆ ಅನ್ವಯಿಸುವಂತೆ ಡ್ಯಾನ್ ಬಿಲ್ಜೇರಿಯನ್ ಒಟ್ಟು ಸಂಪತ್ತು 200 ಮಿಲಿಯನ್ ಡಾಲರ್. 2009ರಲ್ಲಿ ಡ್ಯಾನ್ ಮೊದಲ ಬಾರಿಗೆ ಪೋಕರ್ ಆಡಲು ಪ್ರಾರಂಭಿಸಿದ್ದ. ಈತ 'ಲೋನ್ ಸರ್ವೈವರ್ ' ಎಬ ಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದ. 2016ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸೋದಾಗಿ ಘೋಷಿಸುವ ಮೂಲಕ ಡ್ಯಾನ್ ಜಗತ್ತಿನ ಗಮನ ಸೆಳೆದಿದ್ದ ಕೂಡ. ಈತ ಲಾಸ್ ಏಂಜೆಲಿಸ್ ನಲ್ಲಿ 12 ಬೆಡ್ ರೂಮ್ ಗಳ ಭವ್ಯ ಬಂಗಾಲೆ ಹೊಂದಿದ್ದಾನೆ. ಈತನ ಬಳಿಕ ಸಿಕ್ಕಾಪಟ್ಟೆ ಕಾರುಗಳಿವೆ. ಜೊತೆಗೆ ಮಿಲಿಟರಿ ಟ್ರಕ್ ಕೂಡ ಇದೆ.