Google:ಅಮೆರಿಕದಲ್ಲಿ ಉದ್ಯೋಗಿಗಳ ವೇತನ ಹೊಂದಾಣಿಕೆಗೆ ಮುಂದಾದ ಗೂಗಲ್!

By Suvarna NewsFirst Published Dec 13, 2021, 8:44 PM IST
Highlights

*ಅಮೆರಿಕದಲ್ಲಿ ಹಣದುಬ್ಬರ ಶೇ.7ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ
*ಉದ್ಯೋಗಿಗಳ ಕಾರ್ಯದಕ್ಷತೆ ಆಧಾರದಲ್ಲಿ ಹೊಂದಾಣಿಕೆ
*ಜನವರಿಯಿಂದ ಜಾರಿಗೆ ಬರೋ ಸಾಧ್ಯತೆ
 

ನ್ಯೂಯಾರ್ಕ್ (ಡಿ.13): ಅಮೆರಿಕದಲ್ಲಿ(US) ಹಣದುಬ್ಬರ ಶೇ.7ಕ್ಕೆ ತಲುಪಿರೋ ಹಿನ್ನೆಲೆಯಲ್ಲಿ ಗೂಗಲ್(Google) ಸಂಸ್ಥೆ ತನ್ನ ಕಾರ್ಯನಿರ್ವಾಹಕರ (executive) ವೇತನದಲ್ಲಿ(Salary) ಹೊಂದಾಣಿಕೆ ಮಾಡಲು ಕ್ರಮಗಳನ್ನು ಕೈಗೊಳ್ಳುತ್ತಿರೋ ಬಗ್ಗೆ ವರದಿಯಾಗಿದೆ. ಅಮೆರಿಕದಲ್ಲಿ ಹಣದುಬ್ಬರ (Inflation) 1990ರ ಬಳಿಕ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ. 

ಸಿಎನ್ ಬಿಸಿ(CNBC) ತನಗೆ ದೊರೆತಿರೋ ಗೂಗಲ್ ಮೀಟಿಂಗ್ ನ ಧ್ವನಿ ಸುರುಳಿ ಹಾಗೂ ಮೆಮೋ(Memo) ಆಧರಿಸಿ ಈ ಸುದ್ದಿಯನ್ನು ವರದಿ ಮಾಡಿದೆ. ಆದ್ರೆ ವೇತನದಲ್ಲಿನ ಈ ಹೊಂದಾಣಿಕೆ ಅಮೆರಿಕದ ಎಲ್ಲ ಭಾಗದಲ್ಲೂ ಏಕರೂಪದಲ್ಲಿರೋದಿಲ್ಲ. 2020ರಲ್ಲಿ ಕಂಪನಿಯ ಯೋಜನೆಗಳ ಕುರಿತು ಚರ್ಚಿಸಲು ಗೂಗಲ್ ವಿಶೇಷ ಸಭೆ ಆಯೋಜಿಸಿತ್ತು. ಈ ಆಡಿಯೋನಲ್ಲಿ ಸಿಇಒ(CEO) ಸುಂದರ್ ಪಿಚೈ (Sundar Pichai)'ಅಮೆರಿಕದ ಹಣದುಬ್ಬರ ಶೇ.7ಕ್ಕೆ ಏರಿಕೆಯಾಗಿದ್ದು, ಕೆಲವು ಕಂಪನಿಗಳು ವೇತನ ಹೊಂದಾಣಿಕೆಗೆ ಮುಂದಾಗಿವೆ. ಹೀಗಾಗಿ ಗೂಗಲ್ ಗೂ ಇಂಥ ಯಾವುದಾದ್ರೂ ಯೋಚನೆ ಇದೆಯಾ?' ಎಂದು ಪ್ರಶ್ನಿಸುತ್ತಿರೋದು ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಗೂಗಲ್ ಉಪಾಧ್ಯಕ್ಷ ಫ್ರಾಂಕ್ ವ್ಯಾಗ್ನರ್ (Frank Wagner),'ಕಂಪನಿಯ ಉನ್ನತ ಮ್ಯಾನೇಜರ್ ಗಳು ಈ ಸಂಬಂಧ ಮ್ಯಾನೇಜರ್ ಗಳಿಗೆ ಪತ್ರ ನೀಡಲಿದ್ದು, ಮುಂದಿನ ವರ್ಷಕ್ಕೆ ಪರಿಹಾರದ ಹಣವನ್ನು ಹೆಚ್ಚಿಸೋದಾಗಿ ತಿಳಿಸಿದರು. ಇನ್ನು ಹೆಚ್ಚುತ್ತಿರೋ ಹಣದುಬ್ಬರದ ನಡುವೆ ವೇತನ ಹೊಂದಾಣಿಕೆ ಸಂಬಂಧ ಕಂಪನಿ ಕೈಗೊಳ್ಳಲಿರೋ ಕ್ರಮಗಳ ಬಗ್ಗೆಯೂ ಪತ್ರದಲ್ಲಿ ವಿವರಿಸಲಾಗೋದು ಎಂದು ಅವರು ತಿಳಿಸಿದ್ದಾರೆ. ಗೂಗಲ್ ವೇತನದಲ್ಲಿ ಹೆಚ್ಚಳ ಮಾಡಲಿದ್ದು, ಪ್ರತಿಯೊಬ್ಬರಿಗೂ ಚಿಕ್ಕ ಮೊತ್ತದಲ್ಲಿ ವೇತನ ಹೆಚ್ಚಳ ಮಾಡಲು ಬಯಸೋದಿಲ್ಲ. ಬದಲಿಗೆ ಅವರ ಕಾರ್ಯದಕ್ಷತೆಯನ್ನು ಗಮನಿಸಿ ಅದಕ್ಕೆ ಹೆಚ್ಚಿನ ವೇತನ ಪಾವತಿಸಲಾಗೋದು ಎಂದು ವ್ಯಾಗ್ನರ್ ಹೇಳಿದ್ದಾರೆ. ವೇತನ ಹೊಂದಾಣಿಕೆ ಎಂದ ಮಾತ್ರಕ್ಕೆ ಅದು ಹೆಚ್ಚಳವೆಂದೇ ಭಾವಿಸಬೇಕಾಗಿಲ್ಲ ಕಡಿತವೂ ಆಗಿರಬಹುದು. ಉದ್ಯೋಗಿಗಳ ಕಾರ್ಯದಕ್ಷತೆಯನ್ನು ನೋಡಿ ನಿರ್ಧರಿಸೋದ್ರಿಂದ ವೇತನದಲ್ಲಿ ವ್ಯತ್ಯಾಸವಾಗೋದು ನಿಚ್ಚಳ. 

LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

ಕೊರೋನಾದ ಹೊಸ ರೂಪಾಂತರಿ ಒಮಿಕ್ರಾನ್(Omicron) ಪ್ರಕರಣಗಳು ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಗೂಗಲ್ ಮುಂದಿನ ವರ್ಷ ಜನವರಿಗೆ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸಿಕೊಳ್ಳೋ ತನ್ನ ನಿರ್ಧಾರವನ್ನು ಮುಂದೂಡಿತ್ತು. ಇದಕ್ಕೂ ಮುನ್ನ ಗೂಗಲ್ ಜನವರಿ 10ರ ಬಳಿಕ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು. ಆದ್ರೆ ಅಮೆರಿಕ ಸರಕಾರದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರೋ ನೂರಾರು ಉದ್ಯೋಗಿಗಳು ಕಂಪನಿಯ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಗೂಗಲ್ ತನ್ನ ನಿಲುವು ಬದಲಾಯಿಸಿತ್ತು.  ಜಗತ್ತಿನಾದ್ಯಂತ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮರಳಿ ವಾಪಸ್ ಕಚೇರಿಗೆ ತರಲು ಯೋಜನೆ ರೂಪಿಸಿದ್ದವು. ಬಹುತೇಕ ಕಂಪನಿಗಳು ಜನವರಿಯಿಂದ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದವು. ಆದ್ರೆ ಒಮಿಕ್ರಾನ್ ವೈರಸ್ ಪ್ರಕರಣಗಳು ಹೆಚ್ಚಿಸ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೆಲವು ಕಂಪನಿಗಳು ಸದ್ಯಕ್ಕೆ ಮುಂದೂಡಿವೆ. 

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ಭಾರತದಲ್ಲಿ ವರ್ಕ್ ಫ್ರಂ ಹೋಮ್ ಕಾನೂನು ಜಾರಿಗೆ ಸಿದ್ಧತೆ
ಕೊರೊನಾ ನಂತರ ವರ್ಕ್ ಫ್ರಂ ಹೋಮ್ (work from home) ಪಾಲಿಸಿ ಜಾರಿಗೆ ಬಂದಿತ್ತು. ಆದರೆ ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು (employees) ಹೆಚ್ಚು ಕೆಲಸ ಮಾಡ್ತಿದ್ದಾರೆ. ಇದು ಅವರ ಒತ್ತಡವನ್ನು ಹೆಚ್ಚಿಸಿದೆ.  ಮನೆಯಲ್ಲಿಯೇ ಕೆಲಸ ಮಾಡುವುದು ನಿಂದ ಹಿಂಸೆಯಾಗ್ತಿದೆ ಎನ್ನುವವರಿಗೆ ಖುಷಿ ಸುದ್ದಿಯೊಂದಿದೆ. ಕೇಂದ್ರ ಸರಕಾರ (Cental government) ಶೀಘ್ರದಲ್ಲೇ ಮನೆಯಿಂದಲೇ ಕಛೇರಿ ಕೆಲಸ ಮಾಡುತ್ತಿರುವ ವಿಚಾರವಾಗಿ  ಕಾನೂನು (law) ಒಂದನ್ನು ರಚಿಸಲಿದೆ. ಇದರಲ್ಲಿ ಕಂಪನಿಯು (Company) ತನ್ನ ಉದ್ಯೋಗಿ ಮನೆಯಿಂದ ಕೆಲಸ ಮಾಡುವಾಗ (WFH)  ಯಾವ ರೀತಿಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗುವುದು. 

click me!