Drone service in e-commerce:ಸರಕು ಸಾಗಣೆಗೆ ಬೆಂಗಳೂರಿನ ಸ್ಟಾರ್ಟ್ ಅಪ್ ಅಭಿವೃದ್ಧಿಪಡಿಸಿರೋ ಡ್ರೋನ್

By Suvarna NewsFirst Published Dec 13, 2021, 7:13 PM IST
Highlights

*150 ಕೆ.ಜಿ. ಸರಕನ್ನು 150 ಕಿ.ಮೀ. ದೂರ ಸಾಗಿಸೋ ಸಾಮರ್ಥ್ಯ
*ಹಿಮಾಲಯದಂತಹ ಪರ್ವತ ಪ್ರದೇಶದಲ್ಲೂ ಕಾರ್ಯನಿರ್ವಹಿಸಬಲ್ಲದು
*ಸ್ಪೈಸ್ ಜೆಟ್ ಸಹಭಾಗಿತ್ವದಲ್ಲಿ ನ್ಯೂ ಸ್ಪೇಸ್ ರಿಸರ್ಚ್ ಹಾಗೂ ಟೆಕ್ನಾಲಜೀಸ್ ಸಂಸ್ಥೆ ಅಭಿವೃದ್ಧಿಪಡಿದೆ

ನವದೆಹಲಿ (ಡಿ.13): ಇನ್ನು ಎರಡು ವರ್ಷಗಳಲ್ಲಿ ಮೊದಲ ಮೇಡ್ ಇನ್ ಇಂಡಿಯಾ (Made-in-India) ಹೆವಿ ಲಿಫ್ಟ್ (heavy lift) ಡ್ರೋನ್ ಗಳು(drones) ದೇಶದ ಇ-ಕಾಮರ್ಸ್(e-commerce)ಮಾರುಕಟ್ಟೆಯಲ್ಲಿ ಕಾರ್ಯಾರಂಭ ಮಾಡಲಿವೆ. ಎಚ್ಎಲ್ -150(HL-150) ಹೆಸರಿನ ಈ ಡ್ರೋನ್ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ (startup ) ನ್ಯೂ ಸ್ಪೇಸ್ ರಿಸರ್ಚ್ ಹಾಗೂ ಟೆಕ್ನಾಲಜೀಸ್ (New Space Research & Technologies) ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ (SpiceJet) ಸಹಭಾಗಿತ್ವದಲ್ಲಿ ವಿನ್ಯಾಸಗೊಳಿಸಿದೆ. ಸ್ಪೈಸ್ ಜೆಟ್ ಡ್ರೋನ್ ಡೆಲಿವರಿ ಸರ್ವೀಸ್ ಪ್ರಯೋಗಗಳನ್ನು ಕೈಗೊಳ್ಳಲು ಅನುಮತಿ ಪಡೆದ ದೇಶದ ಏಕೈಕ ವಿಮಾನಯಾನ ಸಂಸ್ಥೆಯಾಗಿದೆ. 

ಈ ಡ್ರೋನ್ ವಿಶೇಷತೆಗಳೇನು?
ನ್ಯೂ ಸ್ಪೇಸ್ ಸಿದ್ಧಪಡಿಸಿರೋ HL-150 ಡ್ರೋನ್ ಗಳು ಇ-ಕಾಮರ್ಸ್ ಕಾರ್ಯಗಳಿಗಾಗಿ ಜಗತ್ತಿನಾದ್ಯಂತ ವಿವಿಧ ಸಂಸ್ಥೆಗಳು ಸಿದ್ಧಪಡಿಸಿರೋ ಡ್ರೋನ್ ಗಳಿಗಿಂತ ವಿಭಿನ್ನವಾಗಿವೆ. ಪ್ರಸ್ತುತ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರೋ ಡ್ರೋನ್ ಗಳು 1-5ಕೆ.ಜಿ. ತೂಕದ ವಸ್ತುಗಳನ್ನು ಮಾತ್ರ ಸಾಗಣೆ ಮಾಡುತ್ತಿವೆ.  ಆದ್ರೆ HL-150 ಡ್ರೋನ್ ಗಳು 150 ಕೆ.ಜಿ. ಸರಕುಗಳನ್ನು 150 ಕಿ.ಮೀ. ದೂರದ ತನಕ ಸಾಗಣೆ ಮಾಡೋ ಸಾಮರ್ಥ್ಯ ಹೊಂದಿವೆ. ಪ್ರಸ್ತುತ ಇ-ಕಾಮರ್ಸ್ ಸಂಸ್ಥೆಗಳು ಸಾಗಣೆ ಮಾಡಲು 72 ಗಂಟೆಗಳನ್ನು ತೆಗೆದುಕೊಳ್ಳೋ ದೂರವನ್ನು ಈ ಡ್ರೋನ್ ಗಳು 8ರಿಂದ 12 ಗಂಟೆಗಳ ಅವಧಿಯಲ್ಲಿ ಕ್ರಮಿಸಬಲ್ಲವು. ಇವು ಗಂಟೆಗೆ 100 ಕಿ.ಮೀ. ಸಾಗಬಲ್ಲ ಸಾಮರ್ಥ್ಯ ಹೊಂದಿವೆ. ಕಠಿಣ ಹವಾಮಾನದಲ್ಲೂ ಇವು ಕಾರ್ಯನಿರ್ವಹಿಸೋ ಸಾಮರ್ಥ್ಯ ಹೊಂದಿವೆ. ಹಿಮಾಲಯದಂತಹ ಎತ್ತರದ ಪ್ರದೇಶದಲ್ಲಿ ಕೂಡ ಈ ಡ್ರೋನ್ ಗಳು ಕಾರ್ಯನಿರ್ವಹಿಸಬಲ್ಲವು. 

LPG subsidy: ನಿಮ್ಮ ಅಕೌಂಟ್ ಗೆ LPG ಸಬ್ಸಿಡಿ ಕ್ರೆಡಿಟ್ ಆಗ್ತಿದ್ಯಾ?

BVLOS ಮೀರಿ ಡ್ರೋನ್ ಪ್ರಾಯೋಗಿಕ ಹಾರಾಟ 
ಬಿಯಾಂಡ್ ವಿಷ್ಯುವಲ್ ಲೈನ್ ಆಫ್ ಸೈಟ್ (BVLOS) ಮೀರಿ ಡ್ರೋನ್ ಹಾರಾಟದ ಪರೀಕ್ಷೆ ನಡೆಸೋ ಸಂಬಂಧ ಕಳೆದ ವರ್ಷ ಸ್ಫೈಸ್ ಎಕ್ಸ್ ಪ್ರೆಸ್ ನೇತೃತ್ವದ ಒಕ್ಕೂಟವು ನಾಗರಿಕ ವಿಮಾನಯಾನದ ಡೈರೆಕ್ಟರ್ ಜನರಲ್ (DGCA) ಅವರಿಗೆ ಪ್ರಸ್ತಾವನೆಯೊಂದನ್ನು ಸಲ್ಲಿಸಿತ್ತು. ಡಿಜಿಸಿಎ ಈ ಬಗ್ಗೆ ಆಸಕ್ತಿ ತೋರಿಸಿ ಇಂಥ ಪ್ರಯೋಗವೊಂದನ್ನು ನಡೆಸುವಂತೆ ಒಕ್ಕೂಟಕ್ಕೆ ಆಹ್ವಾನೆ ನೀಡಿತ್ತು ಕೂಡ. BVLOS ಪ್ರಯೋಗ ಪರೀಕ್ಷೆ ಹಾಗೂ ನಿಯಂತ್ರಣ ಸಮಿತಿ ( Experiment Assessment and Monitoring Committee) ಶಿಫಾರಸುಗಳ ಆಧಾರದಲ್ಲಿ ಪ್ರಾಯೋಗಿಕ BVLOS ಡ್ರೋನ್ ಹಾರಾಟ ನಡೆಸಲು ಸ್ಪೈಸ್ ಎಕ್ಸ್ ಪ್ರೆಸ್ ಗೆ ನಿಯಂತ್ರಕರಿಂದ 2020ರ ಮೇನಲ್ಲಿ ಅಧಿಕೃತ ಅನುಮತಿ ಸಿಕ್ಕಿತ್ತು.  'BVLOS ಪ್ರಯೋಗ ಪರೀಕ್ಷೆ ಹಾಗೂ ನಿಯಂತ್ರಣ ಸಮಿತಿ ( Experiment Assessment and Monitoring Committee) ಶಿಫಾರಸುಗಳ ಆಧಾರದಲ್ಲಿ ಥ್ರೋಟಲ್ ಏರೋ ಸ್ಪೇಸ್ 100 ಗಂಟೆಗಳ ಯಶಸ್ವಿ ಹಾರಾಟವನ್ನು ಪೂರ್ಣಗೊಳಿಸಿದೆ' ಎಂದು ಸ್ಪೈಸ್ ಜೆಟ್ ಏರ್ ಲೈನ್ಸ್ ತಿಳಿಸಿದೆ. 

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ಡ್ರೋನ್ ಗೆ ಸಂಬಂಧಿಸಿ ಸ್ಪೈಸ್ ಜೆಟ್ ಒಪ್ಪಂದ 
ಲಸಿಕೆಗಳು( Vaccines),ಜೀವ ರಕ್ಷಕ ಔ‍ಷಧಗಳು (life-saving medicines) ಹಾಗೂ ಅಗತ್ಯ ಸರಕುಗಳ (essential goods) ಸಾಗಣೆಗೆ (transport) ಸ್ಪೈಸ್ ಜೆಟ್ (SpiceJet) ವಿಮಾನಯಾನ ಸಂಸ್ಥೆ ಡ್ರೋನ್ (drone) ಸೇವೆ ಪ್ರಾರಂಭಿಸಲಿದೆ.  ಸಂಸ್ಥೆ ಈಗಾಗಲೇ ಥ್ರೋಟ್ಟಲ್ ಏರೋಸ್ಪೇಸ್ (Throttle Aerospace) ಹಾಗೂ ಏಯೋಲಾಜಿಕ್ (Aeologic)ಜೊತೆಗೆ ಉನ್ನತ ತಂತ್ರಜ್ಞಾನ (high-end technology) ಹೊಂದಿರೋ  ನಿರ್ದಿಷ್ಟ ಉದ್ದೇಶಕ್ಕೆ ಬಳಸಬಹುದಾದ 50ಕ್ಕೂ ಹೆಚ್ಚು  ಡ್ರೋನ್ ಗಳು  ಹಾಗೂ ಡ್ರೋನ್ ಸಾಫ್ಟ್ ವೇರ್ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದೆ.  0-5 ಕೆ.ಜಿ., 5-10ಕೆ.ಜಿ. ಹಾಗೂ 10-25ಕೆ.ಜಿ.  ಸೇರಿದಂತೆ ವಿವಿಧ ಸಾಮರ್ಥ್ಯದ ನಿರ್ದಿಷ್ಟ ಉದ್ದೇಶಕ್ಕೆ ಬಳಸಬಹುದಾದ ಡ್ರೋನ್ ಗಳನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿರೋದಾಗಿ ಸ್ಪೇಸ್ ಜೆಟ್  ತಿಳಿಸಿದೆ. ಈ ಡ್ರೋನ್ ಗಳು ಭಾರತದ ಪೂರೈಕೆ ಸರಪಳಿ(supply chain)ಸಾಮರ್ಥ್ಯವನ್ನು ಬದಲಾಯಿಸುವಷ್ಟು ಶಕ್ತವಾಗಿವೆ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

click me!