ಚಿನ್ನದ ದರವೆಷ್ಟು ಅಂತೀರಾ? ಇಲ್ಲಿದೆ ಸೆ. 07ರ ಬೆಲೆ!

By Suvarna News  |  First Published Sep 7, 2020, 12:15 PM IST

ಏರಿಳಿಕೆ ಆಟವಾಡುತ್ತಿದೆ ಚಿನ್ನ| ಇನ್ನೂ ದುಬಾರಿಯಾಗುವ ಮುನ್ನ ಖರೀದಿಸಿದ್ರೆ ನಿಮಗೇ ಲಾಭ| ಬಂಗಾರ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ| ಇಲ್ಲಿದೆ ಸೆ. 07, 2020ರ ದರ.


ಬೆಂಗಳೂರು(ಸೆ. 07): ಕಳೆದೆರಡು ದಿನಗಳಿಂದ ಕೊಂಚ ಕೊಂಚವಾಗಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ತಜ್ಞರ ಮಾತು ನಿಜವಾಗಿದೆ. ಕೊರೋನಾತಂಕ ನಡುವೆ ಚಿನ್ನ ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆಯಾದರೂ ದರ ಮಾತ್ರ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಹೂಡಿಕೆದಾರರು ಚಿನ್ನದಲ್ಲಿ ಹಣ ತೊಡಗಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಸದ್ಯ ಸೆ. 6ರ ಚಿನ್ನದ ದರ ಹೀಗಿದೆ ನೋಡಿ

ಹೌದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 48,170 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  10 ರೂಪಾಯಿ ಏರಿಕೆ ಕಂಡಿದ್ದು, 52,540 ರೂಪಾಯಿ ಆಗಿದೆ. 

Latest Videos

undefined

ಇನ್ನು ಬೆಳ್ಳಿ ದರದಲ್ಲೂ 10 ರೂಪಾಯಿ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 67,220 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!