MTR ಜೊತೆ ಒಪ್ಪಂದ ಮಾಡಿಕೊಂಡಿರುವ ಓರ್ಕ್ಲಾ ಇದೀಗ ಈಸ್ಟರ್ನ್ ಕಾಂಡಿಮೇಟ್ಸ್ ಸ್ವಾಧಿನ ಪಡಿಸಿಕೊಂಡಿದೆ. ಈ ಮೂಲಕ ಎರಡು ಪ್ರಮುಖ ಭಾರತೀಯ ಬ್ರ್ಯಾಂಡ್ ಕಂಪನಿಗಳು ಒಗ್ಗೂಡಿದೆ. ಈ ಮಹತ್ವದ ಬೆಳವಣಿಗೆಯ ಹೆಚ್ಚಿನ ವಿವರ ಇಲ್ಲಿದೆ.
ಸೆಪ್ಟೆಂಬರ್ (ಸೆ.06): ಓಕ್ರ್ಲಾ, ಈಸ್ಟ್ರನ್ ಕಾಂಡಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್(“ಈಸ್ಟ್ರನ್) ಶೇ.67.8ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ಕ್ರಮದಿಂದ ಓರ್ಕ್ಲಾ ಭಾರತದಲ್ಲಿ ತನ್ನ ಮಾರಾಟವನ್ನು ದುಪ್ಪಟ್ಟುಗೊಳಿಸಲಿದೆ. ಓಕ್ರ್ಲಾ ಈಗಾಗಲೇ ಭಾರತದ ಬ್ರಾಂಡೆಡ್ ಆಹಾರ ಮಾರುಕಟ್ಟೆಯಲ್ಲಿ ಖ್ಯಾತ MTR ಬ್ರಾಂಡ್‍ನೊಂದಿಗೆ ಸದೃಢ ಸ್ಥಾನವನ್ನು ಹೊಂದಿದ್ದು ಇದು 2007ರಲ್ಲಿ ಓಕ್ರ್ಲಾ ಸ್ವಾಧೀನಪಡಿಸಿಕೊಂಡ ದಿನದಿಂದಲೂ ಐದು ಪಟ್ಟು ವಹಿವಾಟು ಹೆಚ್ಚಿಸಿದೆ. ಇಂದು ಈ ವಹಿವಾಟನ್ನು ಪ್ರಕಟಿಸಿದ್ದು ಓಕ್ರ್ಲಾ ತನ್ನ ಸ್ಥಾನವನ್ನು ಭಾರತದಲ್ಲಿ ಮುಂಚೂಣಿಯ ಬ್ರಾಂಡೆಡ್ ಫುಡ್ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಯಲಿದೆ.
ಓಕ್ರ್ಲಾ ತನ್ನ ಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆ MTR ಮೀರನ್ ಕುಟುಂಬದ ಸದಸ್ಯರಿಂದ ಈಸ್ಟ್ರನ್‍ನಲ್ಲಿ ಶೇ.41.8ರಷ್ಟು ಮಾಲೀಕತ್ವದ ಪಾಲು ಕೊಳ್ಳಲು ಸಹಿ ಹಾಕಿದೆ ಮತ್ತು ಮೆಕ್‍ಕಾರ್ಮಿಕ್ ಇನ್‍ಗ್ರೆಡಿಯೆಂಟ್ಸ್ ಎಸ್.ಇ. ಏಷ್ಯಾ ಪಿಟಿಇ ಲಿಮಿಟೆಡ್(“ಮೆಕ್‍ಕಾರ್ಮಿಕ್”) ಹೊಂದಿರುವ ಇಡೀ ಮಾಲೀಕತ್ವದ ಪಾಲು ಸ್ವಾಧೀನಪಡಿಸಿಕೊಳ್ಳಲು ಒಪ್ಪಂದಗಳಿಗೆ ಸಹಿ ಹಾಕಿದೆ. ಈಸ್ಟ್ರನ್ ಪ್ರಸ್ತುತ ಮೀರನ್ ಕುಟುಂಬ(ಶೇ.74) ಮತ್ತು ಮೆಕ್‍ಕಾರ್ಮಿಕ್(ಶೇ.26ರಷ್ಟು) ಮಾಲೀಕತ್ವ ಹೊಂದಿದೆ.
ಈ ವಹಿವಾಟುಗಳನ್ನು ಪೂರ್ಣಗೊಳಿಸಿದ ನಂತರ ಈಸ್ಟ್ರನ್ ಅನ್ನು ಓಕ್ರ್ಲಾದ ಸಂಪೂರ್ಣ ಮಾಲೀಕತ್ವದ ಅಧೀನ MTRಗೆ ವಿಲೀನಗೊಳಿಸುವ ಉದ್ದೇಶದೊಂದಿಗೆ ವಿಲೀನ ಅರ್ಜಿಯನ್ನು ಸಲ್ಲಿಸಲಾಗುತ್ತದೆ. ಈ ವಿಲೀನದಿಂದ ಎರಡು ಪ್ರಮುಖ ಭಾರತೀಯ ಬ್ರಾಂಡ್‍ಗಳ ಒಗ್ಗೂಡಲಿದೆ. ಭಾರತದ ಬ್ರಾಂಡೆಡ್ ಫುಡ್ ಮಾರುಕಟ್ಟೆಯಲ್ಲಿ ಈಸ್ಟ್ರನ್ ಮತ್ತು MTR ಮಸಾಲೆಗಳು ಮತ್ತು ಪ್ಯಾಕೇಜ್ ಆಹಾರ ವಿಭಾಗಗಳಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲಿದೆ.
ಓಕ್ರ್ಲಾಗೆ ಪ್ರಮುಖ ಭೌಗೋಳಿಕತೆಗಳಲ್ಲಿ ನಮ್ಮ ಹೆಜ್ಜೆ ಗುರುತನ್ನು ಸದೃಢಗೊಳಿಸಲು ಗಮನಾರ್ಹ ಹೆಜ್ಜೆಯಾಗಿದೆ. ಈಸ್ಟ್ರನ್ ಮತ್ತು ಎಂಟಿಆರ್ ಜೊತೆ ಸೇರಿಕೊಳ್ಳುವುದು ಸ್ಥಳೀಯ ಬ್ರಾಂಡ್‍ಗಳನ್ನು ಆಧರಿಸಿದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಸದೃಢ ವೇದಿಕೆ ಸೃಷ್ಟಿಸಲಿದೆ. ಎಂಟಿಆರ್ ಓಕ್ರ್ಲಾಗೆ ಮಹತ್ತರ ಯಶೋಗಾಥೆಯಾಗಿದೆ. ನಾವು ಮೀರನ್ ಸೋದರರನ್ನು ನಮ್ಮ ಪಾಲುದಾರರಾಗಿ ಈ ಪ್ರಯಾಣ ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇವೆ ಎಂದು ಓಕ್ರ್ಲಾದ ಅಧ್ಯಕ್ಷ ಮತ್ತು ಸಿಇಒ ಜಾನ್ ಇವರ್ ಸೆಮ್ಲಿಟ್ಸ್ ಹೇಳಿದರು.