ಎಸ್‌ಬಿಐನಿಂದ 30000 ನೌಕರರಿಗೆ ವಿಆರ್‌ಎಸ್?| ಯೋಜನೆ ಸಿದ್ಧ, ಅಂಗೀಕಾರ ಬಾಕಿ| 25 ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ಅನ್ವಯ| ವಾರ್ಷಿಕ 1662 ಕೋಟಿ ರು. ಉಳಿತಾಯ
ನವದೆಹಲಿ(ಸೆ.07): ವೆಚ್ಚ ಕಡಿತಗೊಳಿಸುವ ಉದ್ದೇಶದಿಂದ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತನ್ನ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಇದರಡಿ, 30190 ನೌಕರರು ವಿಆರ್‌ಎಸ್ ಪಡೆಯಲು ಅರ್ಹತೆ ಹೊಂದಿದ್ದಾರೆ.
ಎಸ್‌ಬಿಐನಲ್ಲಿ 2020ರ ಮಾಚ್‌ರ್‍ಗೆ ಅನುಗುಣವಾಗಿ 2.49 ಲಕ್ಷ ನೌಕರರು ಇದ್ದಾರೆ. ವಿಆರ್‌ಎಸ್ ಯೋಜನೆ ಸಿದ್ಧವಾಗಿದ್ದು, ನಿರ್ದೇಶಕ ಮಂಡಳಿಯ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಡಿ.1ರಿಂದ ಫೆಬ್ರವರಿ ಅಂತ್ಯದವರೆಗೆ ಯೋಜನೆ ಲಭ್ಯವಿರಲಿದೆ. 25 ವರ್ಷ ಸೇವಾವಧಿ ಪೂರ್ಣಗೊಳಿಸಿದ ಅಥವಾ 55 ವರ್ಷ ಮೇಲ್ಪಟ್ಟನೌಕರರು ವಿಆರ್‌ಎಸ್ ಪಡೆಯಲು ಅರ್ಹರು.
undefined
ಈ ಯೋಜನೆಯಿಂದ ಬ್ಯಾಂಕಿಗೆ 1662 ಕೋಟಿ ರು. ವಾರ್ಷಿಕ ಉಳಿತಾಯವಾಗುವ ಅಂದಾಜಿದೆ. ವಿಆರ್‌ಎಸ್‌ಗೆ ಒಪ್ಪುವವರಿಗೆ ಅವರ ಬಾಕಿ ಸೇವಾವಧಿಗೆ ಶೇ.50ರಷ್ಟುಎಕ್ಸ್‌ಗ್ರೇಷಿಯಾ ನೀಡಲಾಗುತ್ತದೆ. ಇದಲ್ಲದೆ ಗ್ರಾಚ್ಯುಯಿಟಿ, ಪಿಂಚಣಿ, ಪಿಎಫ್ ಹಾಗೂ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತವೆ. ಎರಡು ವರ್ಷಗಳು ಕಳೆದ ಬಳಿಕ ಮಾತ್ರ ಬೇರೆ ಬ್ಯಾಂಕಿನನಲ್ಲಿ ಉದ್ಯೋಗಕ್ಕೆ ಸೇರಬಹುದಾಗಿದೆ.
ಬ್ಯಾಂಕಿನ ವಿಆರ್‌ಎಸ್ ಪ್ರಸ್ತಾವಕ್ಕೆ ನೌಕರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ದೇಶದಲ್ಲಿ ಕೊರೋನಾದಿಂದ ಸಂಕಷ್ಟವಿದೆ. ಇಂತಹ ಸಂದರ್ಭದಲ್ಲಿ ವಿಆರ್‌ಎಸ್ ಪ್ರಸ್ತಾವ ಇಡುವುದು ಆಡಳಿತ ಮಂಡಳಿಯ ನೌಕರ ವಿರೋಧಿ ಧೋರಣೆ ಎಂದು ಕಿಡಿಕಾರಿವೆ.