ದೀಪಾವಳಿ ಸಂಭ್ರಮ ಮುಗಿದ ಬೆನ್ನಲ್ಲೇ ಚಿನ್ನದ ದರ ಇಳಿಕೆ, ಹೀಗಿದೆ ನ. 17ರ ರೇಟ್!

By Suvarna NewsFirst Published Nov 17, 2020, 2:29 PM IST
Highlights

ದೀಪಾವಳಿಗೆ ತೆರೆ| ಹಬ್ಬ ಮುಗಿದ ಬೆನ್ನಲ್ಲೇ ಇಳಿಕೆ ಕಂಡ ಚಿನ್ನ| ಚಿನ್ನದ ದರದಲ್ಲಿ ಬರೋಬ್ಬರಿ 100 ರೂಪಾಯಿ ಇಳಿಕೆ| ಇಲ್ಲಿದೆ ನೊಡಿ ಇಂದಿನ ಗೋಲ್ಡ್ ರೇಟ್

ಬೆಂಗಳೂರು(ನ.17) ಭಾರತದಲ್ಲಿ ಅತಿ ಹೆಚ್ಚು ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬ ಕೊನೆಗೊಂಡಿದೆ. ಪಟಾಕಿ ಸಿಡಿಸಿ ನಲಿದವರು ಇನ್ನು ನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಿದೆ. ರಜೆಯ ಮೂಡ್‌ನಲ್ಲಿದ್ದ ಮಕ್ಕಳು ಮತ್ತೆ ತರಗತಿ, ಪಾಠ ಎಂದು ಓದಿನ ಕಡೆ ಗಮನ ಕೊಡಬೇಕಿದೆ. ಅಯ್ಯೋ ಇಷ್ಟು ಬೇಗ ದೀಪಾವಳಿ ಮುಗಿದೇ ಬಿಟ್ಟಿತಾ ಎಂದು ಮುಖ ಸಪ್ಪಗೆ ಮಾಡಿಕೊಳ್ಳುವವರಿಗೆ ಸದ್ಯ ಚಿನ್ನದ ಬೆಲೆ ಕೊಂಚ ಖುಷಿ ಕೊಟ್ಟಿದೆ. ಹೌದು ಕೊರೋನಾ ನಡುವೆ ಏರಿದ್ದ ಚಿನ್ನದ ರೇಟ್ ಹಬ್ಬ ಮುಗಿಯುತ್ತಿದ್ದಂತೆಯೇ ಕುಸಿದಿದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 100 ರೂ. ಕುಸಿದು 47,600 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 100 ರೂ. ಇಳಿಕೆಯಾಗಿ 51,930 ರೂಪಾಯಿ ಆಗಿದೆ. 

ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ!

ಇನ್ನು ಇತ್ತ ಬೆಳ್ಳಿ ದರ ಕೊಂಚ ಏರಿದೆ. ಒಂದು ಕೆ. ಜಿ. ಬೆಳ್ಳಿ ದರ 890ರೂ. ಏರಿಕೆಯಾಗಿ, 64,500ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

click me!