ಆಸ್ಪ್ರೇಲಿಯ, ಸ್ವಿಜರ್ಲೆಂಡ್, ನೆದರ್ಲೆಂಡ್, ಫಿನ್ಲೆಂಡ್, ಫಾನ್ಸ್ ಜತೆ ಒಪ್ಪಂದ| ಈ ನಿಟ್ಟಿನಲ್ಲಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಕಾರ್ಯತತ್ಪರ| ಕರ್ನಾಟಕ ರಾಷ್ಟ್ರದ ಬೃಹತ್ ಸಾಫ್ಟ್‌ವೇರ್ ಆಶ್ರಯ| ಕರ್ನಾಟಕ ರಾಷ್ಟ್ರದ ಬೃಹತ್ ಸಾಫ್ಟ್‌ವೇರ್ ಟೆಕ್ನಾಲಜಿ ಹಬ್|
ಬೆಂಗಳೂರು(ನ.16): ವಿಶ್ವದ ಗಮನ ಸೆಳೆದು ರಾಜ್ಯದಲ್ಲಿ ಐಟಿ ಕ್ಷೇತ್ರವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗಿರುವ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ವಿವಿಧ ದೇಶಗಳೊಂದಿಗೂ ಉತ್ತಮ ಬಾಂಧವ್ಯದೊಂದಿಗೆ ಐಟಿ ಕ್ಷೇತ್ರದ ವೃದ್ಧಿ ಪ್ರಯತ್ನ ಆರಂಭಿಸಿದ್ದಾರೆ.
ನ.19ರಿಂದ ಆರಂಭವಾಗಲಿರುವ ಬೆಂಗಳೂರು ಟೆಕ್ ಶೃಂಗಸಭೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಶಕ್ತಿ ಪ್ರದರ್ಶಿಸಲು ಸಜ್ಜಾಗಿರುವ ಸಚಿವರು ಆಸ್ಪ್ರೇಲಿಯಾ, ಸ್ವಿಜರ್ಲೆಂಡ್, ನೆದರ್ಲೆಂಡ್, ಫಿನ್ಲೆಂಡ್, ಫಾನ್ಸ್ ಸೇರಿದಂತೆ ಇತರೆ ರಾಷ್ಟ್ರಗಳೊಂದಿಗೆ ಜಾಗತಿಕ ಆವಿಷ್ಕಾರ ಒಪ್ಪಂದ (ಜಿಐಎ) ಬಲಗೊಳಿಸುವಲ್ಲಿ ಕಾರ್ಯನಿರತರಾಗಿದ್ದಾರೆ.
undefined
1997ನೇ ಇಸವಿಯಲ್ಲಿ ಐಟಿ ನೀತಿಯನ್ನು ಘೋಷಿಸುವುದರೊಂದಿಗೆ ಕರ್ನಾಟಕ ರಾಜ್ಯವು ದೇಶದ ಮೊಟ್ಟಮೊದಲ ರಾಜ್ಯಗಳಲ್ಲಿ ಒಂದಾಗಿತ್ತು. ಈ ಕಾರ್ಯನೀತಿಯು ರಾಜ್ಯದಲ್ಲಿನ ಮಾಹಿತಿ ತಂತ್ರಜ್ಞಾನ ಕೈಗಾರಿಕೋದ್ಯಮ ಬೆಳವಣಿಗೆಯ ವೇಗವರ್ಧಿಸಿತು. ರಾಜ್ಯದಲ್ಲಿ ಐಟಿ ಕ್ಷೇತ್ರವು ಬೃಹತ್ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಉದ್ಯಮದಲ್ಲಿ ಒಂದಾಗಿ ಹೊರಹೊಮ್ಮಿದೆ. ಕರ್ನಾಟಕವು ಭಾರತದ ಐಟಿ ಹಬ್ ಆಗಿದ್ದು, ರಾಜ್ಯದ ರಾಜ್ಯ ಬೆಂಗಳೂರು ವಿಶ್ವದ ನಾಲ್ಕನೇ ಅತಿ ಬೃಹತ್ ತಂತ್ರಜ್ಞಾನ ಕ್ಲಸ್ಟರ್ ಆಗಿರುತ್ತದೆ. 2018-19ನೇ ಸಾಲಿನಲ್ಲಿ ಒಟ್ಟು 77.80 ಬಿಲಿಯನ್ ಡಾಲರ್‌ನಷ್ಟು(ಸುಮಾರು .6 ಲಕ್ಷ ಕೋಟಿ) ವಿದ್ಯುನ್ಮಾನ ಮತ್ತು ಕಂಪ್ಯೂಟರ್ ತಂತ್ರಾಂಶ ರಫ್ತುಗಳೊಂದಿಗೆ ರಾಜ್ಯವು ಭಾರತದ ಅತ್ಯಂತ ದೊಡ್ಡ ತಂತ್ರಾಂಶ ರಫ್ತುದಾರವಾಗಿದೆ. ಸುಮಾರು ಶೇ.80ರಷ್ಟುಫಾರ್ಚುನ್ 500 ಕಂಪನಿಗಳ ಜಾಗತಿಕ ನಾವೀನ್ಯತಾ ಕೇಂದ್ರಗಳನ್ನು ಹೊಂದಿರುವ ಬೆಂಗಳೂರು, ಪ್ರತಿಭೆಗಳಿಗೆ ಆಕರ್ಷಕವಾದ ನೆಚ್ಚಿನ ತಾಣವಾಗಿ ಮುಂದುವರೆಯುವಂತೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ದ್ವಿತೀಯ ಸ್ತರದ ನಗರಗಳ ಐಟಿ ಕಂಪನಿಗಳಿಗೆ ಹೇರಳ ರಿಯಾಯಿತಿ: ಡಿಸಿಎಂ
ಫಾನ್ಸ್ ದೇಶವು ಕರ್ನಾಟಕದೊಂದಿಗೆ ಒಪ್ಪಂದವನ್ನು ಮುಂದುವರಿಸಿಕೊಂಡು ಅಭಿವೃದ್ಧಿಯ ನಿಟ್ಟಿನಲ್ಲಿ ಕೈ ಜೋಡಿಸಲು ನಿರ್ಧರಿಸಿದೆ. ಹೀಗಾಗಿ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಂಡು 2017ರಲ್ಲಿ ಮಾಡಿಕೊಳ್ಳಕೊಳ್ಳಲಾದ ಒಪ್ಪಂದವನ್ನು ನವೀಕರಣ ಮಾಡಿಕೊಳ್ಳಲಿದೆ. ಬಯೋಟೆಕ್ ಮತ್ತು ಫಿನ್‌ಟೆಕ್ ಕ್ಷೇತ್ರದಲ್ಲಿ ಫಾನ್ಸ್ ಮತ್ತು ಕರ್ನಾಟಕ ರಾಜ್ಯವು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ. ಏರೋಸ್ಪೇಸ್ ಮತ್ತು ರಕ್ಷಣಾ ಇಲಾಖೆಯಲ್ಲಿಯೂ ಒಟ್ಟಾಗಿ ಕಾರ್ಯ ನಿರ್ವಹಿಸಲಿವೆ.
ಫಿನ್ಲೆಂಡ್ ಸಹ ಕರ್ನಾಟಕದೊಂದಿಗಿನ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗಲು ಆಸಕ್ತಿ ಹೊಂದಿದೆ. ಡಾಟಾ ವಿಜ್ಞಾನ ಮತ್ತು ಕೌಶಲ್ಯ, ಸಾರ್ಟ್‌ಆಪ್‌ನಲ್ಲಿ ಅಭಿವೃದ್ಧಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದನ್ನು ಮುಂದುವರಿಸುವ ಅಶ್ವಾಸನೆ ನೀಡಿದೆ. ನೋಕಿಯಾ ಸೇರಿದಂತೆ ಇತರೆ ಕಂಪನಿಗಳು ಬೆಂಗಳೂರಿನಲ್ಲಿ ಸಂಶೋಧನೆ ಕೇಂದ್ರಗಳನ್ನು ಹೊಂದಿದೆ. 5ಜಿ ನತ್ತ ಹೆಚ್ಚಿನ ಗಮನಹರಿಸಿದೆ. ಸಿಜರ್ಲೆಂಡ್ ದೇಶವು ಬಯೋಟೆಕ್, ಔಷಧಾಲಯ ವಲಯ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಕರ್ನಾಟಕದ ಜತೆ ಕಾರ್ಯ ನಿರ್ವಹಿಸಲಿದೆ.
ನೆದರ್ಲೆಂಡ್ ರಾಷ್ಟ್ರವು ಕರ್ನಾಟಕದೊಂದಿಗೆ ಸೈಬರ್ ಭದ್ರತೆ ವಿಚಾರಕ್ಕೆ ಸಂಬಂಧಪಟ್ಟಂತೆ ಒಪ್ಪಂದ ಮಾಡಿಕೊಂಡಿದೆ. ಆಗ್ರಿ ಟೆಕ್ ಕ್ಷೇತ್ರದಲ್ಲಿಯೂ ಸಹ ನೆದರ್ಲೆಂಡ್ ಮತ್ತು ಕರ್ನಾಟಕ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದು, ಒಪ್ಪಂದ ಮಾಡಿಕೊಂಡಿದೆ. ಮೂರು ವರ್ಷದ ಹಿಂದೆ ಕೆಲವು ಕಂಪನಿಗಳು ಚೆನ್ನೈನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿವೆ. ಇಲ್ಲಿನ ಮೂಲಸೌಕರ್ಯದಿಂದಾಗಿ ಹಲವು ಕಂಪನಿಗಳು ರಾಜ್ಯಕ್ಕೆ ಬರಲು ಆಸಕ್ತಿ ತೋರಿವೆ. ಆಸ್ಪ್ರೇಲಿಯಾ ಸಹ ಹಲವು ಕರ್ನಾಟಕದೊಂದಿಗೆ ಹಲವು ಕ್ಷೇತ್ರದಲ್ಲಿ ಒಪ್ಪಂದ ಮಾಡಿಕೊಂಡಿದ್ದು, ಅದನ್ನು ಮುಂದುವರಿಸಲು ಇಚ್ಛಿಸಿದೆ. ವಿದೇಶ ಕಂಪನಿಗಳು ಕರ್ನಾಟಕ ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಶ್ರಮದ ಪ್ರತಿಫಲಕ್ಕೆ ಸಾಕ್ಷಿಯಾಗಿದೆ.
ನ.19ರಿಂದ ಬೆಂಗಳೂರು ಟೆಕ್ ಶೃಂಗ: ಮಹತ್ವದ 12 ಒಪ್ಪಂದಗಳಿಗೆ ಸಹಿ
ಐಟಿ ಕ್ಷೇತ್ರಕ್ಕೆ ರಾಜ್ಯದ ಕೊಡುಗೆ
* ವಿಶ್ವದಲ್ಲಿನ 4ನೇ ಅತ್ಯುತ್ತಮ ತಂತ್ರಜ್ಞಾನ ಕ್ಲಸ್ಟರ್ ಬೆಂಗಳೂರಿನಲ್ಲಿದೆ
* ರಾಜ್ಯದ ಆಂತರಿಕ ಉತ್ಪನ್ನಕ್ಕೆ ಶೇ.25ರಷ್ಟುಕೊಡುಗೆ
* ರಾಷ್ಟ್ರೀಯ ರಫ್ತುಗಳಲ್ಲಿ ಕರ್ನಾಟಕದ ಪಾಲು ಅಂದಾಜು ಶೇ.40ರಷ್ಟಿದೆ
* 400ಕ್ಕೂ ಹೆಚ್ಚಿನ ಫಾರ್ಚುನ್ ಗ್ಲೋಬಲ್ 500 ಕಂಪನಿಗಳು ತಮ್ಮ ಐಟಿ ಸೇವೆಗಳನ್ನು ಕರ್ನಾಟಕದಲ್ಲಿ ಹೊರಗುತ್ತಿಗೆ ನೀಡುತ್ತಿವೆ
ರಾಜ್ಯದ ಐಟಿ ವಿಕಾಸ
ಭಾರತದ ಮೂರನೇ ಒಂದು ಭಾಗದಷ್ಟು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಘಟಕಗಳಿಗೆ ಆಶ್ರಯವಾಗಿರುವ ಕರ್ನಾಟಕವು ರಾಷ್ಟ್ರದ ಬೃಹತ್ ಸಾಫ್ಟ್‌ವೇರ್ ಆಶ್ರಯವಾಗಿರುವ ಕರ್ನಾಟಕವು ರಾಷ್ಟ್ರದ ಬೃಹತ್ ಸಾಫ್ಟ್‌ವೇರ್ ಟೆಕ್ನಾಲಜಿ ಹಬ್ ಆಗಿದೆ. ರಾಜ್ಯದಲ್ಲಿ ಐಟಿ ಚಟುವಟಿಕೆಯು ಹೆಚ್ಚಾಗಿ ಬೆಂಗಳೂರಿನಲ್ಲಿಯೇ ಕೇಂದ್ರಿಕೃತವಾಗಿದೆ. ಆದಾಗ್ಯೂ ಇತ್ತೀಚಿನ ವರ್ಷದಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನಿಂದಾಚೆಗೂ ಈ ಬೆಳವಣಿಗೆಯನ್ನು ಕಲ್ಪಿಸುತ್ತಿದೆ. ಬೆಂಗಳೂರು ಹೊರತುಪಡಿಸಿ ಇತರೆ ನಗರದಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತು ನೀಡಿ ಹೆಚ್ಚಿನ ಬಂಡಾವಳ ಹೂಡಿಕೆ ಮತ್ತು ಉದ್ಯೋಗಾವಕಾಶ ಸಾಮರ್ಥ್ಯಗಳನ್ನು ನಿರೀಕ್ಷಿಸುತ್ತಿವೆ.
ಕರ್ನಾಟಕವು ಸುಮಾರು 52 ವಿಶ್ವವಿದ್ಯಾಲಯಗಳು, 5235 ಪದವಿಪೂರ್ವ ಕಾಲೇಜುಗಳು, 535 ತಾಂತ್ರಿಕ ಸಂಸ್ಥೆಗಳು, 234 ಎಂಜಿನಿಯರಿಂಗ್ ಕಾಲೇಜುಗಳು ಮತ್ತು 299 ಪಾಲಿಟೆಕ್ನಿಕ್‌ಗಳು, 57 ವೈದ್ಯಕೀಯ ಕಾಲೇಜುಗಳು ಮತ್ತು 38 ದಂತ ವೈದ್ಯಕೀಯ ಕಾಲೇಜುಗಳನ್ನು ಹೊಂದಿದ್ದು, ರಾಜ್ಯದ ವಿವಿಧೆಡೆ ಸ್ಥಾಪಿತವಾಗಿವೆ.