ಹೇ ಭಗವಂತ: ಚಿನ್ನದ ದರ ಇಳಿದು ಏರಿದ್ದು ಯಾಕೆ ಗೊತ್ತಾ?

Published : Feb 05, 2019, 03:46 PM IST
ಹೇ ಭಗವಂತ: ಚಿನ್ನದ ದರ ಇಳಿದು ಏರಿದ್ದು ಯಾಕೆ ಗೊತ್ತಾ?

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿದ ಚಿನ್ನದ ದರ| ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿದ ಪರಿಣಾಮ| ಸ್ಥಳೀಯ ವರ್ತಕರಿಂದ ಚಿನ್ನಕ್ಕೆ ಹೆಚ್ಚಿದ ಬೇಡಿಕೆ| ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಕೆ| ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿದರ ಎಷ್ಟು?

ಬೆಂಗಳೂರು(ಫೆ.05): ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಹೆಚ್ಚಿದ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

ಆದರೆ ಇದಕ್ಕೆ ತದ್ವಿರುದ್ದವಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ವರ್ತಕರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾದ ಪರಿಣಾಮ, ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನ ಇಂದಿನ ಬೆಳಗಿನ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ಬೆಲೆ ಶೇ.0.06ರಷ್ಟು ಏರಿಕೆಯಾಗಿ 33,486 ರೂ.ಆಗಿದೆ. ಅಲ್ಲದೇ ಒಂದು ಕೆಜಿ ಬೆಳ್ಳಿ ಬೆಲೆ ಶೇ.0.20ರಷ್ಟು ಏರಿಕೆಯಾಗಿ  40,698 ರೂ.ಆಗಿದೆ.

ಕೈಗಾರಿಕಾ ಘಟಕಗಳು ಹಾಗೂ ನಾಣ್ಯ ತಯಾರಕರಿಂದ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎನ್ನಲಾಗಿದೆ. ಅದರಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸಾಮರ್ಥ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ದುರ್ಬಲವಾಗುತ್ತಾ ಹೋಗುವುದನ್ನು ಗಮನಿಸಬಹುದು. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ:

22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ-31,250 ರೂ.

22 ಕ್ಯಾರೆಟ್‌ನ 1ಗ್ರಾಂ ಚಿನ್ನದ ಬೆಲೆ-3125 ರೂ.

 

24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ-33,422 ರೂ.

1 ಕೆಜಿ ಬೆಳ್ಳಿ ಬೆಲೆ- 44,100 ರೂ.

ಆಭರಣ ಪ್ರೀಯರೇ ಕೇಳಿದಿರಾ?: ಆಕಾಶಕ್ಕೆ ನೆಗೆದ ಚಿನ್ನದ ದರ!

ಕುಸಿದಿದೆ ಚಿನ್ನದ ದರ: 10 ಗ್ರಾಂ ಚಿನ್ನಕ್ಕೆಷ್ಟು ಬೆಲೆ...!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!
ಅಡೋಬ್‌ನ ಮುಂದಿನ ಸಿಇಒ ಆಗಲಿರುವ ಬೆಂಗಳೂರಿನ ಬಸವನಗುಡಿಯ ಅನಿಲ್‌