ಗೌತಮ್ ಅದಾನಿ ಹೊಸ ಉದ್ಯಮ: ಯಾರಿಗಾಗಿ ಈ ಉದ್ಯೋಗ ಉತ್ತಮ?

By Web DeskFirst Published Jul 11, 2019, 5:16 PM IST
Highlights

ಮೋದಿ ಸರ್ಕಾರದ ನಿರ್ಧಾರದಿಂದ ಗೌತಮ್ ಅದಾನಿ ಫುಲ್ ಖುಷ್| ಹೊಸ ಉದ್ಯಮಕ್ಕೆ ಕಾಲಿಡಲಿದೆ ಅದಾನಿ ಗ್ರೂಪ್| ಡೇಟಾ ಸಂಗ್ರಹಣೆ ಸೇವಾ ಕ್ಷೇತ್ರಕ್ಕೆ ಅದಾನಿ ಲಗ್ಗೆ| ಭಾರತದ ಸರ್ಕಾರದ ಸ್ಥಳೀಯವಾಗಿ ಡೇಟಾ ಸಂಗ್ರಹಣ ನೀತಿಯ ಫಲ| ಗೂಗಲ್, ಅಮೆಜಾನ್‌ಗೆ ಡೇಟಾ ಸಂಗ್ರಹಣೆಗೆ ನೆರವಾಗಲು ಅದಾನಿ ಸಿದ್ಧ| 700 ಬಿಲಿಯನ್ ರೂ. ಹಣ ಹೂಡಿಕೆ ಮಾಡಲು ಮುಂದಾದ ಅದಾನಿ|

ಅಹಮದಾಬಾದ್(ಜು.11): ಭಾರತದ ಸುಪ್ರಸಿದ್ಧ ಉದ್ಯಮಿ, ಅದಾನಿ ಗ್ರೂಪ್ ಸಂಸ್ಥಾಪಕ ಗೌತಮ್ ಅದಾನಿ ಹೊಸದೊಂದು ವಾಣಿಜ್ಯ ಉದ್ಯಮಕ್ಕೆ ಎಂಟ್ರಿ ಕೊಡುತ್ತಿದ್ದು, ಇದು ದೇಶದ ಉದ್ಯಮ ವಲಯದಲ್ಲಿ ಭಾರೀ ಸಂಚಲ ಮೂಡಿಸುವ ಸಾಧ್ಯತೆ ಹೆಚ್ಚಾಗಿದೆ.

ಹೌದು, ಗೂಗಲ್ ಮತ್ತು ಅಮೆಜಾನ್ ಸಂಸ್ಥೆಯ ಡೇಟಾ ಸಂಗ್ರಹಣಾ ಸೇವೆಗೆ ಮುಂದಾಗಿರುವ ಅದಾನಿ, ಇದಕ್ಕಾಗಿ 700 ಬಿಲಿಯನ್ ರೂ. ಹಣ ಹೂಡಿಕೆಗೆ ಸಿದ್ಧರಾಗಿದ್ದಾರೆ.

ಭಾರತದ ಸರ್ಕಾರದ ಸ್ಥಳೀಯವಾಗಿ ಡೇಟಾ ಸಂಗ್ರಹಣ ನೀತಿಯನ್ವಯ, ವಿದೇಶಿ ಕಂಪನಿಗಳು ಇದೀಗ ಸ್ಥಳೀಯವಾಗಿ ತಮ್ಮ ಮಾಹಿತಿ ಸಂಗ್ರಹಿಸಬೇಕಿದೆ. ಇದಕ್ಕಾಗಿ ಡೇಟಾ ಸಂಗ್ರಹಣೆಗಾಗಿ ಈ ಕಂಪನಿಗಳು ದೇಶೀಯ ಹೊರ ಗುತ್ತಿಗೆ ಕಂಪನಿಗಳ ಮೊರೆ ಹೋಗಬೇಕಿದೆ.

ಆದರೆ ಭಾರತದಲ್ಲಿ ಇಂತಹ ಕಂಪನಿಗಳ ಅಭಾವವಿದ್ದು, ಇದಕ್ಕಾಗಿ ಅದಾನಿ ಡೇಟಾ ಸಂಗ್ರಹಣೆ ಸೇವಾ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ. ದಕ್ಷಿಣ ಭಾರತದಲ್ಲಿ ಹೊಸ ತಂತ್ರಜ್ಞಾನ ಆಧಾರಿತ ಸಂಸ್ಥೆಗಳನ್ನು ತೆರೆಯಲು ಅದಾನಿ ಸಂಸ್ಥೆ ನಿರ್ಧರಿಸಿದೆ.

ಈ ಮೂಲಕ ಗೂಗಲ್ ಮತ್ತು ಅಮೆಜಾನ್‌ನಂತಹ ದೆಐತ್ಯ ಸಂಸ್ಥೆಗಳ ಡೇಟಾ ಸಂಗ್ರಹಣೆ ಸೇವೆಗೆ ಅದಾನಿ ಮುಂದಡಿ ಇಡಲಿದ್ದಾರೆ.

click me!