ಪಾಕ್‌ನಲ್ಲಿ ಒಂದು ತೊಲ ಬಂಗಾರದ ಬೆಲೆಗೆ ಸಿಗುತ್ತೆ ಕಾರ್

By Suvarna News  |  First Published Aug 17, 2023, 1:08 PM IST

ಪಾಕಿಸ್ತಾನದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಮಧ್ಯೆ ಬಂಗಾರ ಕೂಡ ಗಗನಕುಸುಮವಾಗಿದೆ. ಅಲ್ಲಿನ ಚಿನ್ನದ ಬೆಲೆ ಕೇಳಿದ್ರೆ ಜನರು ಕಂಗಾಲಾಗ್ತಾರೆ. ಬಂಗಾರದ ಸಹವಾಸವೇ ಬೇಡ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.    
 


ಭಾರತದಲ್ಲಿ ಏನೆಲ್ಲವೆಂದ್ರೂ ಪ್ರತಿ ಮನೆಯಲ್ಲಿ ಸ್ವಲ್ಪ ಬಂಗಾರ ಇರ್ಲೇಬೇಕು ಎನ್ನುವ ಅಲಿಖಿತ ನಿಯಮವಿದೆ. ಬಂಗಾರವನ್ನು ಜನರು ಆಪತ್ಬಾಂದವ ಎಂದೇ ನಂಬುತ್ತಾರೆ. ಅಷ್ಟೇ ಅಲ್ಲ ಯಾವುದೇ ಸಮಾರಂಭವಿರಲಿ ಚಿನ್ನ ಧರಿಸಿಲ್ಲವೆಂದ್ರೆ ಆ ಸಮಾರಂಭ, ಹಬ್ಬಕ್ಕೆ ಕಳೆ ಬರೋದಿಲ್ಲ. ಭಾರತದ ಮಹಿಳೆಯರ ಮೈಮೇಲೆ ಚೂರುಪಾರಾದ್ರೂ ಬಂಗಾರ ಇರ್ಬೇಕು. ಈಗಿನ ದಿನಗಳಲ್ಲಿ ಬಂಗಾರದ ಬೆಲೆ ಕೈಗೆಟುಕದ ಸ್ಥಿತಿಯಲ್ಲಿದೆ. 22 ಕ್ಯಾರೆಟ್ ನ 10 ಗ್ರಾಂ ಬಂಗಾರದ ಬೆಲೆ ಬೆಂಗಳೂರಿನಲ್ಲಿ 54,100 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 59,950 ರೂಪಾಯಿ ಇದೆ. ಚಿನ್ನದ ಬೆಲೆ ಭಾರತದ ಬೇರೆ ಬೇರೆ ಭಾಗಗಳಲ್ಲಿ ಅಲ್ಪಸ್ವಲ್ಪ ಭಿನ್ನವಾಗಿರುತ್ತದೆ. ಆದ್ರೆ ಪಾಕಿಸ್ತಾನದ ಕಥೆ ಭಯಾನಕವಾಗಿದೆ.

ನಮ್ಮ ನೆರೆ ದೇಶ ಪಾಕಿಸ್ತಾನ (Pakistan) ದಲ್ಲಿ ಕೂಡ ಬಂಗಾರಕ್ಕೆ ಬೇಡಿಕೆ ಹೆಚ್ಚಿದೆ. ಜನರು ಬಂಗಾರ (Gold) ಖರೀದಿಗೆ ಹೆಚ್ಚು ಮಹತ್ವ ನೀಡ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ನೀವು, ಭಾರತದ ದೇಶದ ಬಂಗಾರದ ಬೆಲೆಯ ನಾಲ್ಕು ಪಟ್ಟು ಹೆಚ್ಚು ಹಣ ನೀಡಿ ಬಂಗಾರ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಲೆ ಕೇಳಿದ್ರೆ ಬೆವರು ಬರುತ್ತೆ ಅಂದ್ಮೇಲೆ ಅಲ್ಲಿ ಬಂಗಾರ ಖರೀದಿ ಮಾಡೋದು ಕನಸಿನ ಮಾತೇ ಆಗಿದೆ. ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಏರಿಕೆ : ಇಂಟರ್ ಬ್ಯಾಂಕ್ (Interbank ) ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಎದುರು ಪಾಕಿಸ್ತಾನಿ ರೂಪಾಯಿ ಮೌಲ್ಯ ಶೇಕಡಾ 1.04 ರಷ್ಟು ಕುಸಿದಿರುವುದರಿಂದ ಪಾಕಿಸ್ತಾನದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಆಲ್-ಪಾಕಿಸ್ತಾನ್ ಸರ್ರಾಫಾ ಜೆಮ್ಸ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆಗಳು 2,22,900 ರೂಪಾಯಿಗೆ ಏರಿದೆ. 10 ಗ್ರಾಂ  ಚಿನ್ನದ ಬೆಲೆ 18947 ರೂಪಾಯಿಗೆ ಬಂದು ನಿಂತಿದೆ. 

Tap to resize

Latest Videos

ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ,ಇದು ಮೇಕ್ ಇನ್ ಇಂಡಿಯಾದ ಫಲಶ್ರುತಿ!

ಒಂದು ತೊಲ ಚಿನ್ನಕ್ಕೆ ನೀವು ಆಲ್ಟೊ ಕಾರ್ ಖರೀದಿಸ್ಬಹುದು : ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಸರಿಯಾಗಿ ಲೆಕ್ಕ ಹಾಕಿದ್ರೆ ನಿಮಗೆ ಇದು ಅರಿವಿಗೆ ಬರುತ್ತದೆ. ಭಾರತದಲ್ಲಿ ಹೊಸ ಮಾದರಿಯ ಆಲ್ಟೊ ಕಾರಿನ ಬೆಲೆ 3.5 ಲಕ್ಷದಿಂದ ಪ್ರಾರಂಭವಾಗುತ್ತದೆ.  ನಾವು ಆಲ್ಟೊದ ಹಳೆಯ ಮಾಡೆಲ್ ಬಗ್ಗೆ ಮಾತನಾಡೋದಾದ್ರೆ ನೀವು ಅವುಗಳನ್ನು 2.5 ಲಕ್ಷ ರೂಪಾಯಿಗೆ ಖರೀದಿ ಮಾಡ್ಬಹುದಿತ್ತು. ಇಷ್ಟೇ ಅಲ್ಲ  2 ಲಕ್ಷಕ್ಕಿಂತ ಕಡಿಮೆ ಬೆಲೆಗೆ  1-2 ವರ್ಷ ಹಳೆಯ ಆಲ್ಟೊ ಕಾರು ಸಿಗಲಿದೆ.  ನೀವು ಸೆಕೆಂಡ್ ಹ್ಯಾಂಡ್ ಮಾರುತಿ ಸ್ವಿಫ್ಟ್ ಅಥವಾ ಇತರ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿ ಮಾಡ್ತಿದ್ದರೆ ನಿಮಗೆ ಅದು 1. ರಿಂದ 2.5 ಲಕ್ಷ ರೂಪಾಯಿಯಲ್ಲಿ ಸಿಗುತ್ತದೆ. ಪಾಕಿಸ್ತಾನದಲ್ಲಿ ಒಂದು ತೊಲ ಚಿನ್ನದ ಬೆಲೆ 2.22 ಲಕ್ಷ ಆಗಿದ್ದು ನೀವು ಈ ಬೆಲೆಯಲ್ಲಿ  ಆರಾಮವಾಗಿ ಕಾರನ್ನು ಖರೀದಿ ಮಾಡ್ಬಹುದು. 

ಮೋದಿ ಮನ್ ಕೀ ಬಾತ್ ಐಡಿಯಾ : ಬಾಳೆ ದಿಂಡಿನಿಂದ ರಸವಾಯ್ತು ಬದುಕು !

1 ತೊಲ ಚಿನ್ನ ಮತ್ತು 10 ಗ್ರಾಂ ಚಿನ್ನದ ನಡುವಿನ ವ್ಯತ್ಯಾಸವೇನು? : ತೊಲ ಬಂಗಾರ ಹಾಗೂ 10 ಗ್ರಾಂ ಬಂಗಾರದ ಮಧ್ಯೆ ವ್ಯತ್ಯಾಸವಿದೆ. ಆದ್ರೆ ಪ್ರಸ್ತುತ ಹೆಚ್ಚಿನ ಸ್ಥಳಗಳಲ್ಲಿ ಒಂದು ತೊಲ ಚಿನ್ನವು 10 ಗ್ರಾಂ ಚಿನ್ನಕ್ಕೆ ಸಮಾನ ಎಂದೇ ಭಾವಿಸಿದ್ದಾರೆ. ಆದರೆ ಇಂದಿಗೂ ಹಲವೆಡೆ ತೊಲ ತೂಗುವ ಅರ್ಥವೇ ಭಿನ್ನವಾಗಿದೆ. ಭಾರತೀಯ ಮತ್ತು ದಕ್ಷಿಣ ಏಷ್ಯಾದ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ. ಒಂದು ತೊಲದ ತೂಕ 11.66 ಗ್ರಾಂ ಆಗಿರುತ್ತದೆ. ಟೋಲಾ ಬ್ರಿಟೀಷ್ ಇಂಡಿಯಾದ ಆಳ್ವಿಕೆಯಲ್ಲಿ ಇದ್ರ ಪರಿಚಯವಾಯ್ತು.  
 

click me!