ಬಾ ಚಿನ್ನ ಸಂತೆಗೆ: ಚಿನ್ನದ ದರ ಇಳಿದಿದೆ ಒಮ್ಮೆಗೆ!

Published : Nov 08, 2018, 11:23 AM IST
ಬಾ ಚಿನ್ನ ಸಂತೆಗೆ: ಚಿನ್ನದ ದರ ಇಳಿದಿದೆ ಒಮ್ಮೆಗೆ!

ಸಾರಾಂಶ

ಹಬ್ಬದ ಸಂದರ್ಭದಲ್ಲಿ ಇಳಿದ ಚಿನ್ನದ ದರ! 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆ! ಬೆಳ್ಳಿ ಬೆಲೆಯಲ್ಲೂ ಕೂಡ 300 ರೂ. ಇಳಿಕೆ! ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಏರಿಕೆ! ಆಭರಣ ಪ್ರಿಯರ ಖರೀದಿ ಭರಾಟೆ ಜೋರು  

ನವದೆಹಲಿ(ನ.8): ದೀಪಾವಳಿ ಸಂದರ್ಭದಲ್ಲಿ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು, 10 ಗ್ರಾಂ. ಶುದ್ಧ ಚಿನ್ನದ ದರದಲ್ಲಿ 210 ರೂ. ಇಳಿಕೆ ಕಂಡಿದೆ. 

ಅದರಂತೆ ಬೆಳ್ಳಿ ಬೆಲೆಯಲ್ಲೂ ಕೂಡ 300 ರೂ. ಇಳಿಕೆ ಕಂಡಿದ್ದು, ಇದಕ್ಕೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.51 ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲೂ ಶೇ.0.17 ರಷ್ಟು ಏರಿಕೆ ಕಂಡು, 14.77 ಅಮೆರಿಕನ್ ಡಾಲರ್​ ಆಗಿದೆ.  

99.9 ಪರಿಶುದ್ಧ 10 ಗ್ರಾಂ. ಬಂಗಾರದ ಬೆಲೆಯಲ್ಲಿ 210 ರೂ. ಇಳಿಕೆ ಕಾಣುವ ಮೂಲಕ  ಚಿನ್ನದ ದರ 32,400 ರೂ. ಅದರಂತೆ 99.5 ಪರಿಶುದ್ಧ 10 ಗ್ರಾಂ. ಬಂಗಾರಕ್ಕೆ 32,250 ರೂ.ಆಗಿದೆ. 

ನಿರಂತರವಾಗಿ ಏರಿಕೆ ಕಾಣುತ್ತಿದ್ದ ಬಂಗಾರ ಇಳಿಕೆ ಕಂಡಿರುವುದರಿಂದ, ಆಭರಣ ಪ್ರಿಯರ ಖರೀದಿ ಭರಾಟೆ ಜೋರಾಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!
India Latest News Live: 2026ರ ಐಪಿಎಲ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ! ಮಹತ್ವದ ಅಪ್‌ಡೇಟ್ಸ್ ಹಂಚಿಕೊಂಡ ಬೆಂಗಳೂರು ಫ್ರಾಂಚೈಸಿ