
ಇಸ್ಲಾಮಾಬಾದ್(ನ.7): ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್ಗಳು ಕಳವು ಮಾಡಿದ್ದಾರೆ.
ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್ ಕ್ರೈಮ್ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
ಪಾಕಿಸ್ತಾನದ ಬಹುತೇಕ ಬ್ಯಾಂಕ್‌ಗಳ ದತ್ತಾಂಶ ಕಳುವಾಗಿರುವ ಕುರಿತು ಮಾಹಿತಿ ಬಂದಿರುವುದಾಗಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಯ ನಿರ್ದೇಶಕ ಮೊಹ್ಮದ್ ಶೋಹಿಬ್ ಒಪ್ಪಿಕೊಂಡಿದ್ದಾರೆ.
ಇನ್ನು ಈ ಪ್ರಕರಣದಿಂದ ಪಾಕಿಸ್ತಾನದಲ್ಲಿ ಸೈಬರ್ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಬಹಿರಂಗಗೊಳಿಸಿದ್ದು, ಇಮ್ರಾನ್ ಖಾನ್ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
ಆದರೆ ಪಾಕಿಸ್ತಾನದ ಪ್ರಮುಖ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ವರದಿಯನ್ನು ಅಲ್ಲಗಳೆದಿದ್ದು, ತನ್ನ ಬ್ಯಾಂಕ್‌ನ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸ್ಪಷ್ಟೀಕರಣ ಬಿಡುಗಡೆ ಮಾಡಿರುವ ಎಸ್‌ಬಿಪಿ, ಬ್ಯಾಂಕ್‌ನ ಎಲ್ಲಾ ಮಾಹಿತಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.