ಶುಭ ಗುರುವಾರ: ಸಿಕ್ಕಾಪಟ್ಟೆ ಇಳಿದಿದೆ ಪೆಟ್ರೋಲ್ ದರ!

Published : Nov 08, 2018, 10:42 AM IST
ಶುಭ ಗುರುವಾರ: ಸಿಕ್ಕಾಪಟ್ಟೆ ಇಳಿದಿದೆ ಪೆಟ್ರೋಲ್ ದರ!

ಸಾರಾಂಶ

ಪೆಟ್ರೋಲ್, ಡೀಸೆಲ್ ದರದಲ್ಲಿ ಗಣನೀಯ ಇಳಿಕೆ! ದೇಶದ ಮಹಾನಗರಗಳಲ್ಲಿ ಗಣನೀಯವಾಗಿ ಇಳಿದ ತೈಲದರ! ಮತ್ತೆ ಪೈಸೆಗಳ ಲೆಕ್ಕಾಚಾರದಲ್ಲಿ ಇಳಿದಿದೆ ತೈಲದರ! ಸತತವಾಗಿ ಇಳಿಯುತ್ತಿರುವ ದರ ಕಂಡು ಜನ ಫುಲ್ ಖುಷ್

ನವದೆಹಲಿ(ನ.8): ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂ. ಆಗಿದೆ.
 
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ 21 ಪೈಸೆಯಷ್ಟು ಕಡಿಮೆಯಾಗಿದೆ. ಅದರಂತೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 20 ಪೈಸೆ ಪೆಟ್ರೋಲ್ ದರ ಕಡಿಮೆಯಾಗಿದ್ದು, ಲೀಟರ್ ಗೆ 83.72 ರೂ. ಆಗಿದೆ. 

ಇದೇ ವೇಳೆ ಡಿಸೇಲ್ ದರ 18 ಪೈಸೆಗಳಷ್ಟು ಕಡಿಮೆಯಾಗಿ 72.89 ರೂ. ಆಗಿದೆ. ಮುಂಬೈನಲ್ಲಿ 76.38 ರೂ. ದರ ನಿಗದಿಯಾಗಿದೆ. ಅದರಂತೆ ಪ.ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ 80.13 ರೂ. ಆಗಿದ್ದು, ಡೀಸೆಲ್ ದರ 74.75 ರೂ. ಆಗಿದೆ.

ಅದರಂತೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲದ ದರ 81.24 ರೂ. ಮತ್ತು ಡೀಸೆಲ್ ದರ 77.05 ರೂ. ಆಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 79.05 ರೂ. ಮತ್ತು ಡೀಸೆಲ್ ದರ 73.46 ರೂ.ಆಗಿದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ನಾನು ಠಾಕೂರ್ ನನಗೆ ಆ ಬಗ್ಗೆ ಗರ್ವ ಇದೆ: ವಿವಾದದ ಬಳಿಕ ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದ HDFC ಉದ್ಯೋಗಿ
BHEL OFS: ಬಿಎಚ್‌ಇಎಲ್‌ನಿಂದ ಹೊರಬರುತ್ತಿದೆಯಾ ಕೇಂದ್ರ ಸರ್ಕಾರ? 4,500 ಕೋಟಿ ಸಂಗ್ರಹಕ್ಕೆ ಬಿಗ್ ಪ್ಲಾನ್..