ತೆರಿಗೆ ಭಾರ ಇಳಿಕೆ ಮಾಡಿದ ಬಳಿಕ ಎರಡೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ 4 ಸಾವಿರ ಇಳಿಕೆ!

By Santosh Naik  |  First Published Jul 24, 2024, 6:42 PM IST

Gold Rate Today ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 15 ರಿಂದ 6ಕ್ಕೆ ಇಳಿಕೆ ಮಾಡಿದ ಬಳಿಕ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಎರಡೇ ದಿನದಲ್ಲಿ ಚಿನ್ನದ ದರದಲ್ಲಿ 4 ಸಾವಿರ ರೂಪಾಯಿ ಇಳಿಕೆಯಾಗಿದೆ.


ನವದೆಹಲಿ (ಜು.24): ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕ (ಆಮದು ತೆರಿಗೆ) ಕಡಿತದ ನಂತರ, 2 ದಿನಗಳಲ್ಲಿ ಚಿನ್ನದ ಬೆಲೆ 4000 ರೂ. ಮತ್ತು ಬೆಳ್ಳಿ 3600 ರೂಪಾಯಿ ಇಳಿಕೆಯಾಗಿದೆ. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 15% ರಿಂದ 6% ಕ್ಕೆ ಇಳಿಸಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿಯ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಇಂದು ಚಿನ್ನದ ಬೆಲೆ ದೇಶದಲ್ಲಿ ಸರಾಸರಿ 408 ರೂಪಾಯಿ ಇಳಿಕೆಯಾಗಿದೆ. ಇದರಿಂದ 10 ಗ್ರಾಮ್‌ ಚಿನ್ನದ ಬೆಲೆ ದೇಶಲ್ಲಿ 69194 ರೂಪಾಯಿ ಆಗಿದೆ. ಬಜೆಟ್‌ ದಿನದಂದು ಆಮದು ಸುಂಕ ಕಡಿಮೆ ಮಾಡುವ ಘೋಷಣೆ ಮಾಡಿದ ಬೆನ್ನಲ್ಲಿಯೇ ಚಿನ್ನದ ಬೆಲೆಯಲ್ಲಿ 3600 ರೂಪಾಯಿ ಇಳಿಕೆಯಾಗಿತ್ತು. ಬೆಳ್ಳಿ ಬೆಲೆಯಲ್ಲೂ ಇಂದು 22 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 84,897 ರೂಪಾಯಿ ಇದೆ. ಸೋಮವಾರ ಬೆಳ್ಳಿ ಬೆಲೆಯಲ್ಲಿ 3600 ರೂಪಾಯಿ ಇಳಿಕೆಯಾಗಿತ್ತು. ಜುಲೈ 22 ರಂದು ಚಿನ್ನದ ಬೆಲೆ 10 ಗ್ರಾಮ್‌ಗೆ 73,218 ರೂಪಾಯಿ ಇದ್ದರೆ, ಬೆಳ್ಳಿ ಬೆಲೆ ಕೆಜಿಗೆ 88196 ರೂಪಾಯಿ ಆಗಿತ್ತು.

ದೇಶದಲ್ಲಿ ಕ್ಯಾರೆಟ್‌ ಲೆಕ್ಕಾಚಾರದಲ್ಲಿ ಚಿನ್ನದ ಬೆಲೆಯ ಸರಾಸರಿ ನೋಡೋದಾದರೆ, 24 ಕ್ಯಾರಟ್‌ನ 10 ಗ್ರಾಮ್‌ ಚಿನ್ನಕ್ಕೆ 69194 ರೂಪಾಯಿ ಇದ್ದರೆ, 22 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 63,382 ರೂಪಾಯಿ ಆಗಿದೆ. ಇನ್ನು 18 ಕ್ಯಾರಟ್‌ನ 10 ಗ್ರಾಂ ಚಿನ್ನಕ್ಕೆ 51,896 ರೂಪಾಯಿ ಆಗಿದೆ.

Tap to resize

Latest Videos

undefined

ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ, ಬೆಲೆ ಹೆಚ್ಚು ಕಡಿಮೆಯಾಗುವುದಿಲ್ಲ: ಕಮಾಡಿಟಿ ಎಕ್ಸ್ಪರ್ಟ್‌ ಅಜಯ್ ಕೇಡಿಯಾ ಪ್ರಕಾರ, ಈ ಬಾರಿಯ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು 15% ರಿಂದ 6% ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಅದರ ಬೆಲೆಯಲ್ಲಿ ಕುಸಿತ ಕಾಣುತ್ತಿದೆ. ಆದರೆ ಕಸ್ಟಮ್ ಸುಂಕ ಕಡಿತದ ನಂತರ ಮುಂದಿನ ದಿನಗಳಲ್ಲಿ ಚಿನ್ನದ ಬೇಡಿಕೆ ಇನ್ನಷ್ಟು ವೇಗವಾಗಿ ಹೆಚ್ಚಲಿದೆ ಎಂದಿದ್ದಾರೆ. ಈಗ ಚಿನ್ನ, ಬೆಳ್ಳಿ ಕುಸಿದಿದ್ದರೂ ಸುಂಕ ಹೊಂದಾಣಿಕೆ ಎನ್ನಬಹುದು. ಸ್ವಲ್ಪ ದಿನ ಚಿನ್ನ ಬಿದ್ದರೂ ಮತ್ತೆ ಚೇತರಿಸಿಕೊಳ್ಳುತ್ತದೆ. ಅಮೆರಿಕದ ಚುನಾವಣೆ ಮತ್ತು ಜಾಗತಿಕ ಉದ್ವಿಗ್ನತೆಯನ್ನು ಪರಿಗಣಿಸಿದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೆಚ್ಚು ಕಡಿಮೆಯಾಗುವುದಿಲ್ಲ. ಖರೀದಿಸಲು ಇದು ಉತ್ತಮ ಅವಕಾಶ ಎಂದು ಹೇಳಿದ್ದಾರೆ.

ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ 5,500 ರೂ.ಗೂ ಹೆಚ್ಚು ಏರಿಕೆ: ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ 10 ಗ್ರಾಂಗೆ 5,842 ರೂಪಾಯಿ ಏರಿಕೆಯಾಗಿದೆ. ವರ್ಷದ ಆರಂಭದಲ್ಲಿ 63,352 ರೂಪಾಯಿ ಇದ್ದ ಚಿನ್ನ, ಈಗ ಪ್ರತಿ 10 ಗ್ರಾಂಗೆ 69,194 ರೂಪಾಯಿ ಆಗಿದೆ. ಮತ್ತೊಂದೆಡೆ, ವರ್ಷದ ಆರಂಭದಲ್ಲಿ ಬೆಳ್ಳಿ ಕೆಜಿಗೆ 73,395 ರೂಪಾಯಿ ಇದ್ದರೆ,  ಇದೀಗ ಪ್ರತಿ ಕೆಜಿಗೆ 84,897 ರೂ.ಗೆ ತಲುಪಿದೆ. ಅಂದರೆ, ಈ ವರ್ಷ ಬೆಳ್ಳಿ 11,502 ರೂಪಾಯಿ ಏರಿಕೆಯಾಗಿದೆ.

'ನಿಮಿ'ಗೆ ಹಾಡು ಡಾನ್ಸ್ ಮಾತ್ರ ಬರುತ್ತೆ: ವಿತ್ತ ಸಚಿವರ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಆಕ್ಷೇಪಾರ್ಹ ಹೇಳಿಕೆ

ಚಿನ್ನದ ಬೆಲೆಯನ್ನು ಪರಿಶೀಲಿಸಿ ಖರೀದಿ ಮಾಡಿ: ಅನೇಕ ಮೂಲಗಳಿಂದ (ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್‌ನ ವೆಬ್‌ಸೈಟ್‌ನಂತಹ) ಚಿನ್ನದ ಸರಿಯಾದ ತೂಕ ಮತ್ತು ಖರೀದಿಸಿದ ದಿನದಂದು ಅದರ ಬೆಲೆಯನ್ನು ಪರಿಶೀಲನೆ ಮಾಡಿ ಕೊಂಡುಕೊಳ್ಳಿ. ಚಿನ್ನದ ಬೆಲೆ 24 ಕ್ಯಾರೆಟ್, 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಪ್ರಕಾರ ಬದಲಾಗುತ್ತದೆ. 24 ಕ್ಯಾರೆಟ್ ಚಿನ್ನವನ್ನು ಶುದ್ಧ ಚಿನ್ನವೆಂದು ಪರಿಗಣಿಸಲಾಗುತ್ತದೆ, ಆದರೆ ಇದು ತುಂಬಾ ಮೃದುವಾದ ಕಾರಣದಿಂದ ಇದರಿಂದ ಆಭರಣವನ್ನು ತಯಾರಿಸಲಾಗುವುದಿಲ್ಲ.

ಬಜೆಟ್‌ ಡೇ ಎಂದು ಫೋಟೋ ಹಂಚಿಕೊಂಡ ನಿಖಿಲ್‌ ಕಾಮತ್‌, ಜನ ನೋಡಿದ್ದೇ ಬೇರೆ!

click me!