ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ 36 ಸಾವಿರ ಕೋಟಿ, ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಗೆ 7.3 ಸಾವಿರ ಕೋಟಿ

By Kannadaprabha NewsFirst Published Jul 24, 2024, 10:49 AM IST
Highlights

ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ 2023-24ರಲ್ಲಿ 31.5 ಸಾವಿರ ಕೋಟಿ ಹಂಚಿಕೆಯಾಗಿದ್ದರೆ,ಈ ಬಾರಿ 36 ಸಾವಿರ ಕೋಟಿ ನೀಡಲಾಗಿದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಗೆ ಈ ಬಾರಿ 7.3 ಸಾವಿರ ಕೋಟಿಗೆ ಮೀಸಲಿರಿಸಲಾಗಿದೆ.

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ 90,958 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. 2023-24ನೇ ಸಾಲಿನ ಬಜೆಟ್‌ಗಿಂತ ಈ ಬಾರಿಯ ಅನುದಾನ ಪ್ರಮಾಣ ಶೇ. 12.96ರಷ್ಟು ಏರಿಕೆಯಾಗಿದ್ದು, 2023-24ನೇ ಸಾಲಿನಲ್ಲಿ 80, 517 ಕೋಟಿ ಹಣವನ್ನು ಆರೋಗ್ಯ ಇಲಾಖೆಗೆ ನೀಡಿತ್ತು.

ಆರೋಗ್ಯ ವಲಯಕ್ಕೆ ಈ ಬಜೆಟ್‌ನಲ್ಲಿ ಕೇಂದ್ರ ಮತ್ತೊಂದು ಮಹತ್ವದ ಘೋಷೆಣೆ ಮಾಡಿದ್ದು, ಕಸ್ಟಮ್ಸ್ ಸುಂಕದಿಂದ ಮೂರು ವಿಧದ ಕ್ಯಾನ್ಸರ್‌ ಔಷಧಿಗಳ ಮೇಲೆ ವಿನಾಯಿತಿಯನ್ನು ನೀಡಿದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಟ್ರಾಸ್ಟುಜುಮಾಬ್‌ ಡೆರಕ್ಸೆಕ್ಟೆನ್‌, ಒಸಿಮೆರ್ಟಿನಿಬ್ ಮತ್ತು ದ್ರುರ್ವಾಲುಮಾಬ್‌ ಔಷಧಿಗಳಿಗೆ ವಿನಾಯಿತಿ ಸಿಗಲಿದೆ. ಜೊತೆಗೆ ಎಕ್ಸರೇ ಟ್ಯೂಬ್ಸ್ ಮತ್ತು ಫ್ಲಾಟ್‌ ಪಾನೆಲ್‌ ಡೆಟೆಕ್ಟೊರೆಟ್ಸ್‌ಗಳ ಮೇಲಿನಸುಂಕದಲ್ಲಿ ಬದಲಾವಣೆ ತರಲಾಗಿದೆ.

Latest Videos

ಆಯುಷ್‌ ಇಲಾಖೆಗೆ 3,712 ಕೋಟಿ ಅನುದಾನ ಮೀಸಲಿರಿಸಲಾಗಿದೆ. 2023-24ರಲ್ಲಿ 3 ಸಾವಿರ ಕೋಟಿ ಹಂಚಿಕೆಯಾಗಿತ್ತು. ಆರೋಗ್ಯ ಇಲಾಖೆಗೆ ಹಂಚಿಕೆಯಾಗಿರುವ 90 ಸಾವಿರ ಕೋಟಿ ಪೈಕಿ 87.6 ಸಾವಿರ ಕೋಟಿ ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ , ಉಳಿದ ಹಣವನ್ನು ಆರೋಗ್ಯ ಸಂಶೋಧನೆಗೆ ಮೀಸಲಿರಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2023-24ರ ಬಜೆಟ್‌ನಲ್ಲಿ 77.6 ಸಾವಿರ ಕೋಟಿ ಹಂಚಿಕೆಯಾಗಿತ್ತು. ಕೇಂದ್ರ ಪ್ರಾಯೋಜಿತ ಯೋಜನೆಗಳ ಪೈಕಿ, ರಾಷ್ಟ್ರೀಯ ಆರೋಗ್ಯ ಮಿಷನ್‌ಗೆ 2023-24ರಲ್ಲಿ 31.5 ಸಾವಿರ ಕೋಟಿ ಹಂಚಿಕೆಯಾಗಿದ್ದರೆ,ಈ ಬಾರಿ 36 ಸಾವಿರ ಕೋಟಿ ನೀಡಲಾಗಿದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಗೆ ಈ ಬಾರಿ 7.3 ಸಾವಿರ ಕೋಟಿಗೆ ಮೀಸಲಿರಿಸಲಾಗಿದೆ.

ದೇಶದಲ್ಲಿ ಉದ್ಯೋಗ ಹೆಚ್ಚಳಕ್ಕೆ ನಿರ್ಮಲಾ ಸೀತಾರಾಮನ್ ಮೂರು ಹೊಸ ಸ್ಕೀಂ ಘೋಷಣೆ

ರಾಷ್ಟ್ರೀಯ ಟೆಲಿ ಮೆಂಟೆಲ್ ಆರೋಗ್ಯ ಕಾರ್ಯಕ್ರಮಕ್ಕೆ ಬಜೆಟ್‌ನಲ್ಲಿ ಕಳೆದ ಬಾರಿಗಿಂತ ಅನುದಾನ ಹೆಚ್ಚಳವಾಗಿದ್ದು, ಈ ಬಾರಿ 90 ಕೋಟಿ ನೀಡಲಾಗಿದೆ. ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಕಾರ್ಯಕ್ರಮಗಳಿಗೆ 2023ರ ಬಜೆಟ್‌ನಷ್ಟೇ 200 ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಆರೋಗ್ಯ ಸ್ವಾಯತ್ತ ಸಂಸ್ಥೆಗಳಿಗೆ 2023-24ರಲ್ಲಿ 17.25 ಸಾವಿರ ಕೋಟಿ ನೀಡಲಾಗಿತ್ತು. ಈ ಬಾರಿ 18 ಸಾವಿರ ಕೋಟಿಗೆ ಹಂಚಿಕೆ ಆಗಿದೆ. ನವದೆಹಲಿಯ ಏಮ್ಸ್‌ ಸಂಸ್ಥೆಗೆ 4.5 ಸಾವಿರ ಕೋಟಿ ಹಂಚಿಕೆಯಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ(ಐಸಿಎಂಆರ್‌) 2.7 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ.

ಬಜೆಟ್‌ನಲ್ಲಿ ಸುಂಕ ಇಳಿಕೆ ಬೆನ್ನಲ್ಲೇ ಮತ್ತಷ್ಟು ಜೇಬಿಗೆ ಹಿತವಾದ ಬಂಗಾರ; ಇಂದಿನ ಚಿನ್ನ, ಬೆಳ್ಳಿ ದರ ಇಲ್ಲಿದೆ

click me!