ಮತ್ತೆ ಇಳಿಯಿತು ಬೆಳ್ಳಿ, ಬಂಗಾರ: ಕಷ್ಟವಾಗದು ಸಿಂಗಾರ!

Published : Nov 25, 2019, 02:20 PM IST
ಮತ್ತೆ ಇಳಿಯಿತು ಬೆಳ್ಳಿ, ಬಂಗಾರ: ಕಷ್ಟವಾಗದು ಸಿಂಗಾರ!

ಸಾರಾಂಶ

ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ ಕುಸಿತ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.40ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 37,746 ರೂ.| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.80ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,135 ರೂ.| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್’ಗೆ 1,461.02 ಡಾಲರ್|

ನವದೆಹಲಿ(ನ.25): ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಇಂದು ದೇಶೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ. 

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.40ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 37,746 ರೂ. ಆಗಿದೆ. 

ಫೆವರಿಟ್ ಬಂಗಾರ ಇಳಿದಿದೆ: ಖರೀದಿ ಭರದಿಂದ ಸಾಗಿದೆ!

ಈ ಮೂಲಕ ಕಳೆದ ಐದು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ.

ಕಳೆದ ಐದು ದಿನಗಳ ಹಿಂದಿನ ದರಕ್ಕೆ ಹೋಲಿಸಿರೆ ಚಿನ್ನದ ದರದಲ್ಲಿ ಒಟ್ಟು 500 ರೂ. ಇಳಿಕೆ ಕಂಡಿದೆ. 

ಭಲೇ ಭಲೇ: ಕಡಿಮೆಯಾಯ್ತು ಚಿನ್ನ, ಬೆಳ್ಳಿ ಬೆಲೆ!

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಶೇ0.80ರಷ್ಟು ದರ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 44,135 ರೂ. ಆಗಿದೆ.

ಇನ್ನುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಶೇ.0.1 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಒಂದು ಔನ್ಸ್’ಗೆ 1,461.02 ಯುಎಸ್ ಡಾಲರ್ ಆಗಿದೆ.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Rules Change: ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್‌ ಕಾರ್ಡ್‌ನಲ್ಲಿ ಬದಲಾವಣೆ
Gold ETF: ಗೋಲ್ಡ್ ಇಟಿಎಫ್ ಅಂದ್ರೇನು? ಜನರು ಮುಗಿಬಿದ್ದು ಇದ್ರಲ್ಲಿ ಹೂಡಿಕೆ ಮಾಡ್ತಿರೋದು ಯಾಕೆ?