ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?

By Web Desk  |  First Published Nov 25, 2019, 8:48 AM IST

ಚಿನ್ನದ ಬೆಲೆ ಅಂಗಡಿಯಿಂದ ಅಂಗಡಿಗೆ ಬದಲಾಗುತ್ತಲೇ ಇರುತ್ತದೆ. ದೇಶದಲ್ಲಿ ಎಲ್ಲಿಯೂ ಸ್ಟ್ಯಾಂಡರ್ಡ್ ಬಿಲ್ಲಿಂಗ್ ವಿನ್ಯಾಸವಿಲ್ಲ. ಹಾಗಾಗಿ, ಚಿನ್ನದ ಬೆಲೆಯನ್ನು ಸ್ವತಃ ನೀವೇ ಲೆಕ್ಕ ಹಾಕುವುದಾದರೆ ಹೇಗೆ ಹಾಕಬೇಕು ಎಂದು ಇಲ್ಲಿದೆ...


ಭಾರತೀಯರಿಗೆ ಚಿನ್ನವೆಂದರೆ ಅಚ್ಚುಮೆಚ್ಚು. ಚಿನ್ನದಲ್ಲೇ ಅಂತಸ್ತು ಅಳೆವ ಮನಸ್ಥಿತಿಯವರು ಇಲ್ಲಿ ಹೆಚ್ಚು. ಅದೇ ಕಾರಣಕ್ಕೆ ಚಿನ್ನ ಮಾಡಿಸುವ ಹುಚ್ಚೂ ಹೆಚ್ಚು. ಮನೆಯಲ್ಲಿ ಹಬ್ಬವಿರಲಿ, ಮದುವೆ, ನಾಮಕರಣ ಇನ್ನಿತರೆ ಕಾರ್ಯಕ್ರಮಗಳಿರಲಿ, ಎಲ್ಲಕ್ಕೂ ಚಿನ್ನ ಖರೀದಿಸಿದರೇನೇ ಸಮಾಧಾನ, ಅದೇ ಅತಿ ಬೆಲೆ ಬಾಳುವ ಉಡುಗೊರೆ ಎಂಬ ನಂಬಿಕೆ. ಚಿನ್ನದೊಂದಿಗೆ ಪರಂಪರಾಗತ ಸಂಬಂಧ, ಭಾವನಾತ್ಮಕ ಬಂಧ, ವ್ಯವಹಾರ ಭಾವ ಎಲ್ಲವನ್ನೂ ಇಲ್ಲಿ ಕಾಣಬಹುದು. ಅದರಲ್ಲೂ ಕೆಲ ಮಹಿಳೆಯರಂತೂ ಒಂದು ಜೊತೆ ಚಿನ್ನದ ಬಳೆಯನ್ನೋ, ಸರವನ್ನೋ ಮಾಡಿಸುವ ಕನಸಲ್ಲೇ ಬದುಕಿಡೀ ಕೂಡಿಟ್ಟು ಸವೆಸುತ್ತಾರೆ. 

ಕಷ್ಟಕಾಲಕ್ಕಾಗುತ್ತದೆ ಎಂದು ತೆಗೆದುಕೊಂಡವರೂ ಚಿನ್ನವನ್ನೂ ಕಷ್ಟಕಾಲದಲ್ಲಿ ತೆಗೆಯುವುದಿಲ್ಲ. ಕಾರಣ, ಅಪ್ಪ ಕೊಡಿಸಿದ್ದು, ಗಂಡ ಕೊಡಿಸಿದ್ದು, ಅಜ್ಜಿಯಿಂದ ಬಂದಿದ್ದು ಇನ್ನಿತರೆ ಸೆಂಟಿಮೆಂಟ್ಸ್. ಜೊತೆಗೆ, ಚಿನ್ನ ಕೊಲ್ಳುವಾಗ ಇರುವ ರೇಟು, ಅದನ್ನು ಮಾರಾಟ ಮಾಡುವಾಗ ಸಿಗುವುದಿಲ್ಲ ಎಂಬ ಯೋಚನೆ ಬೇರೆ. 

Tap to resize

Latest Videos

undefined

ಬೈ ಎಲೆಕ್ಷನ್ ಬಿಸಿ ನಡುವೆ ಮಹಾಲಕ್ಷ್ಮೀಗೆ ಭಾರೀ ಮೊತ್ತದ ಚಿನ್ನದ ಹಾರ, ಕಾರಣ?

ಲೆಕ್ಕ ಹಾಕೋದು ತಲೆನೋವಾ?

ಬಹುತೇಕ ಭಾರತೀಯರು ಚಿನ್ನ ಖರೀದಿಸುವಾಗ ಅದರ ಬೆಲೆಯನ್ನು ಲೆಕ್ಕ ಹಾಕುವುದಿಲ್ಲ. ಅಂಗಡಿಯವರು ಹೇಳಿದ್ದನ್ನು ಒಪ್ಪಿಕೊಂಡು ಹಣ ಕೊಟ್ಟು ಬರುತ್ತಾರೆ. ಏಕೆಂದರೆ ಚಿನ್ನದ ಬೆಲೆ ಲೆಕ್ಕ ಹಾಕುವಾಗ ಹರಳುಗಳು, ಮೇಕಿಂಗ್ ಚಾರ್ಜಸ್, ಚಿನ್ನದ ಬೆಲೆ, ಜಿಎಸ್‌ಟಿ ಸೇರಿದಂತೆ ಬಹಳಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದು ಹೆಚ್ಚಿನವರಿಗೆ ತಲೆನೋವಿನ ವಿಚಾರವಾದ್ದರಿಂದ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ಚಿನ್ನದ ಫೈನಲ್ ಬೆಲೆ ಲೆಕ್ಕ ಹಾಕುವುದು ಹೇಗೆ ಎಂಬುದನ್ನು ತಿಳಿದುಕೊಂಡರೆ ಪೆಗ್ಗು ಬಿದ್ದೆನೇನೋ ಎಂಬ ಕೊರಗು ಇರುವುದಿಲ್ಲ. ಹೇಗೆ ಲೆಕ್ಕ ಹಾಕಬೇಕು ಇಲ್ಲಿದೆ ನೋಡಿ. 

ಚಿನ್ನದ ಅಂತಿಮ ಬೆಲೆ ಅರಿಯಲು 22 ಕ್ಯಾರಟ್ ಗೋಲ್ಡ್‌ನ ಬೆಲೆಗೆ ತೂಕವನ್ನು ಗುಣಿತ ಮಾಡಿ, ತಯಾರಿಕೆ ವೆಚ್ಚ ಹಾಗೂ ಜಿಎಸ್‌ಟಿ ಶೇ.3ರಷ್ಟನ್ನು ಸೇರಿಸಬೇಕು. ಈ ಫಾರ್ಮುಲಾದಿಂದ ಚಿನ್ನದ ಬೆಲೆ ತಿಳಿಯುತ್ತದೆ. ಇದರ ಜೊತೆಗೆ ಮಾರಾಟಗಾರರ ವಂಚನೆಗೆ ಸಿಲುಕದಂತೆ ನೋಡಿಕೊಳ್ಳಲು ಇನ್ನಷ್ಟು ಸಂಗತಿಗಳನ್ನು ತಲೆಯಲ್ಲಿಟ್ಟುಕೊಳ್ಳಬೇಕು. ಅವೆಂದರೆ, ಚಿನ್ನದ ಪ್ಯೂರಿಟಿ, ತೂಕ, ಬಿಐಎಸ್ ಹಾಲ್‌ಮಾರ್ಕ್ ಹಾಗೂ ತಯಾರಿಕಾ ವೆಚ್ಚ.

1. 24 ಕ್ಯಾರೆಟ್ ಎಂದರೆ...

ಚಿನ್ನದ ಶುದ್ಧತೆಯನ್ನು ಕ್ಯಾರಟ್ ಮತ್ತು ಸೂಕ್ಷ್ಮತೆಯಲ್ಲಿ ಅಳೆಯಲಾಗುತ್ತದೆ. 24 ಕ್ಯಾರೆಟ್ ಚಿನ್ನವು ಚಿನ್ನದ ಶುದ್ಧ ರೂಪವಾಗಿದೆ ಮತ್ತು ಇದರಲ್ಲಿ 100 ಪ್ರತಿಶತದಷ್ಟು ಚಿನ್ನವಿರುತ್ತದೆ. ಅದರಲ್ಲಿ ಯಾವುದೇ ಮಿಶ್ರಲೋಹವನ್ನು ಬೆರೆಸಲಾಗಿರುವುದಿಲ್ಲ. ಇದು ಚಿನ್ನದ 24/24 ಭಾಗಗಳನ್ನು ಹೊಂದಿರುತ್ತದೆ. 22 ಕ್ಯಾರೆಟ್ ಚಿನ್ನವೆಂದರೆ, ಆಭರಣವು ಹೆಚ್ಚು ಕಾಲ ಬಾಳಿಕೆ ಬರುವಂತೆ 22 ಭಾಗ ಚಿನ್ನಕ್ಕೆ ಶೇ.2ರಷ್ಟು ಇತರೆ ಲೋಹವನ್ನು ಬೆರೆಸಲಾಗಿರುತ್ತದೆ. ಏಕೆಂದರೆ 24 ಕ್ಯಾರೆಟ್ ಚಿನ್ನವು ಬಹಳ ಮೃದುವಾಗಿರುತ್ತದೆ. ಇದರಿಂದ ತಯಾರಿಸಿದ ಆಭರಣ ಗಟ್ಟಿ ಬರುವುದಿಲ್ಲ. ಇದಕ್ಕಾಗಿಯೇ ಬೆಳ್ಳಿ, ಸತು ಅಥವಾ ತಾಮ್ರದಂತಹ ಲೋಹಗಳನ್ನು ಬೆರೆಸಲಾಗುತ್ತದೆ. 

SSLC ಓದಿ ಮದುವೆಯಾಗುವ ವಧುಗೆ ಸರ್ಕಾರದಿಂದ 10 ಗ್ರಾಂ ಚಿನ್ನ!

2. ಹರಳುಗಳ ತೂಕ

ಗಮನಿಸಬೇಕಾದ ಒಂದು ಪ್ರಮುಖ ವಿಷಯವೆಂದರೆ ನಿಮ್ಮ ಆಭರಣವನ್ನು ಪುನಾ ಮಾರಾಟ ಮಾಡಲು ಅಥವಾ ಎಕ್ಸ್‌ಚೇಂಜ್ ಮಾಡಲು ನೀವು ಬಯಸಿದರೆ, ಆಭರಣದಲ್ಲಿರುವ ಹರಳುಗಳ ತೂಕವನ್ನು ವಜಾಗೊಳಿಸಿ ಕೇವಲ ಚಿನ್ನದ ತೂಕವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಚಿನ್ನ ಖರೀದಿಸುವಾಗ ಕೂಡಾ ಆಭರಣದ ತೂಕದಲ್ಲಿ ವಜ್ರ ಅಥವಾ ಇತವೆ ಹರಳುಗಳ ತೂಕ ವಜಾಗೊಳಿಸಿ ಚಿನ್ನದ ತೂಕವನ್ನು ಪ್ರತ್ಯೇಕವಾಗಿಯೇ ಲೆಕ್ಕ ಹಾಕಲಾಗುತ್ತದೆ. 

3. ಮೇಕಿಂಗ್ ಚಾರ್ಜಸ್

ಆಭರಣಗಳ ತಯಾರಿಕೆ ಶುಲ್ಕವು ನೀವು ಖರೀದಿಸುತ್ತಿರುವ ಚಿನ್ನದ ಆಭರಣದ ವಿನ್ಯಾಸವನ್ನು ಅವಲಂಬಿಸಿರುತ್ತದೆ. ಏಕೆಂದರೆ ಪ್ರತಿಯೊಂದು ಆಭರಣಕ್ಕೂ ವಿಭಿನ್ನ ಶೈಲಿಯಲ್ಲಿ ಕಟ್ಟಿಂಗ್ ಹಾಗೂ ಫಿನಿಶಿಂಗ್ ನೀಡಬೇಕಾಗುತ್ತದೆ. ಅಲ್ಲದೆ, ಇವುಗಳ ಜೊತೆಗೆ, ವಿನ್ಯಾಸದಲ್ಲಿ ಎಷ್ಟು ಸ್ಪಷ್ಟ ವಿವರಗಳು ಬೇಕಾಗುತ್ತವೆ ಎಂಬುದರ ಮೇಲೆ ಕೂಡಾ ಇದು ಬದಲಾಗುತ್ತದೆ.

ತಮಾಷೆ ಅಲ್ಲ! ಇದು ವಜ್ರ ಖಚಿತ ಟಾಯ್ಲೆಟ್‌!

4. ಹಾಲ್‌ಮಾರ್ಕ್

ಹಾಲ್‌ಮಾರ್ಕ್ ಹಾಕಿದ ಚಿನ್ನಾಭರಣಗಳು ಬಿಐಎಸ್ ಲೋಗೋ ಹೊಂದಿರುತ್ತವೆ. ಇದು ಲೈಸೆನ್ಸ್ ಹೊಂದಿದ ಪ್ರಯೋಗಾಲಯದಲ್ಲಿ ಚಿನ್ನದ ಪ್ಯೂರಿಟಿ ಪರೀಕ್ಷೆ ಪಾಸಾಗಿದೆ ಎಂಬುದನ್ನು ತೋರಿಸುತ್ತದೆ. bis.gov.in ವೆಬ್‌ಸೈಟ್ ಪ್ರಕಾರ, ಬಿಐಎಸ್ ಭಾರತದಲ್ಲಿ ಚಿನ್ನದ ಶುದ್ಧತೆ ಪರೀಕ್ಷಿಸುವ ಸರ್ಕಾರಿ ಅನುಮೋದನೆ ಹೊಂದಿರುವ ಏಕೈಕ ಏಜೆನ್ಸಿಯಾಗಿದೆ. 

click me!