ಕುಸಿದ ಚಿನ್ನದ ದರ: ನವೆಂಬರ್‌ ಆಗಲಿದೆಯೇ ಶುಭ ಸುದ್ದಿಗಳ ಆಗರ?

By Web Desk  |  First Published Nov 2, 2019, 3:50 PM IST

ನವೆಂಬರ್ ಆರಂಭದಲ್ಲಿ ಕುಸಿದ ಚಿನ್ನದ ದರ| ಮಾರುಕಟ್ಟೆಯಲ್ಲಿ ಹಾವು-ಏಣಿ ಆಟ ಆಡುತ್ತಿದ್ದ ಚಿನ್ನದ ದರ| ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ ಚಿನ್ನದ ದರ| ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.27ರಷ್ಟು ಇಳಿಕೆ| ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 38,475 ರೂ.| ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯಲ್ಲಿ ಶೇ.0.30ರಷ್ಟು ಇಳಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಒಂದು ಔನ್ಸ್’ಗೆ 1,512.54  ಡಾಲರ್| 


ನವದೆಹಲಿ(ನ.02): ಅಕ್ಟೋಬರ್‌ನಲ್ಲಿ ಹಾವು-ಏಣಿ ಆಟ ಆಡುತ್ತಿದ್ದ ಚಿನ್ನದ ದರ, ನವೆಂಬರ್‌ ಆರಂಭದಲ್ಲಿ ಗಮನಾರ್ಹ ಇಳಿಕೆ ಕಾಣುವ ಮೂಲಕ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದೆ.

ಚಿನ್ನದ ದರದಲ್ಲಿ ಕುಸಿತ: ದೀಪಾವಳಿ ಖರೀದಿಗೆ ಇರಲಿ ಧಾವಂತ!

Tap to resize

Latest Videos

undefined

ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ ಚಿನ್ನದ ಬೆಲೆ ಶೇ.0.27ರಷ್ಟು ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 38,475 ರೂ. ಆಗಿದೆ. ಈ ಹಿಂದೆ 10 ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗಿತ್ತು. 

ನಿರಂತರವಾಗಿ ಇಳಿಯುತ್ತಲೇ ಇದೆ ಚಿನ್ನ: ಅಳೆದು ತೂಗಿ ಕೊಂಡರೆ ಚೆನ್ನ!

ಅದರಂತೆ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಇಳಿಕೆ ಕಂಡಿದ್ದು, ಶೇ.0.30ರಷ್ಟು ದರದಲ್ಲಿ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 46,635ರೂ. ಆಗಿದೆ.

2 ಸಾವಿರ ರೂ. ಇಳಿದ ಬಂಗಾರ: 10 ಗ್ರಾಂ ಗೆ ಟೊಟಲ್ ಬೆಲೆ ಎಷ್ಟಂದ್ರ?

ಇನ್ನುಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಶೇ.0.32 ರಷ್ಟು ಇಳಿಕೆಯಾಗಿದೆ. ಚಿನ್ನದ ದರ ಒಂದು ಔನ್ಸ್’ಗೆ 1,512.54  ಡಾಲರ್ ಆಗಿದೆ.

3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲದಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಶೇ.0.24ರಷ್ಟು ಇಳಿಕೆ ಕಂಡಿದೆ. ಒಂದು ಔನ್ಸ್ ಬೆಳ್ಳಿ ಬೆಲೆ 17.57 ಡಾಲರ್ ಆಗಿದೆ.

ಹೊಸ ತಿಂಗಳ ಭರ್ಜರಿ ಶುಭಾರಂಭ: ಇಳಿದ ಚಿನ್ನ, ಬೆಳ್ಳಿ ಬೆಲೆ!

ಈ ನಿರಂತರ ಇಳಿಕೆ ಆಭರಣ ಪ್ರೀಯರಲ್ಲಿ ಸಂತಸ ಮೂಡಿಸಿದ್ದಲ್ಲದೇ, ದೇಶೀಯ ಮಾರುಕಟ್ಟೆಯ ಚೈತನ್ಯಕ್ಕೂ ಕಾರಣವಾಗಿದೆ.

ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!