ಚಿನ್ನದ ಬೆಲೆ ಹೆಚ್ಚಾಗುತ್ತಿದೆ. ಹೇಗೆ ಚಿನ್ನ ಖರೀದಿ ಮಾಡೋದು ಅಂತ ಕೆಲವರು ಯೋಚನೆ ಮಾಡ್ತಿದ್ದಾರೆ. ಹೀಗಿರುವಾಗ ಇನ್ನೊಂದು ಲೋಹದ ರೇಟ್ ಹೆಚ್ಚಾಗಲಿದ್ದು, ಆಸ್ತಿಯಾಗಿ ಮಾರ್ಪಡಲಿದೆಯಂತೆ.
ಇತ್ತೀಚೆಗೆ ಚಿನ್ನದ ರೇಟ್ ಕೇಳಿದರೆ ಆ ಕಡೆ ತಲೆ ಹಾಕಿ ಮಲಗೋಕೂ ಕೂಡ ಭಯ ಆಗುವ ಹಾಗೆ ಆಗಿದೆ. ಈಗಲೇ ಚಿನ್ನವು 10 ಗ್ರಾಂಗೆ 90,000 ರೂಪಾಯಿಗಳನ್ನು ದಾಟಿದೆ. ಭೌಗೋಳಿಕ ಹಾಗೂ ರಾಜಕೀಯ ಉದ್ವಿಗ್ನತೆ, ಹಣದುಬ್ಬರ, ಆರ್ಥಿಕ ಅಸ್ಥಿರತೆಯಿಂದಾಗಿ ಚಿನ್ನದ ದರ ಹೆಚ್ಚುತ್ತಿದೆ. ಈಗ ಬೆಳ್ಳಿ ದರ ಹೆಚ್ಚಾಗುತ್ತಿದೆ.
‘ಬಡವರ ಚಿನ್ನ’
ಬೆಳ್ಳಿಯು ಕೂಡ ಇತ್ತೀಚೆಗೆ ಕೆಜಿಗೆ 1 ಲಕ್ಷ ರೂಪಾಯಿಗಳನ್ನು ದಾಟಿದೆ. ಹೂಡಿಕೆದಾರರು, ವಿಶ್ಲೇಷಕರು ಈಗ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದಾರೆ. ವಿತ್ತೀಯ ಮತ್ತು ಕೈಗಾರಿಕಾ ಲೋಹವಾಗಿರುವ ಬೆಳ್ಳಿಯು, ಮುಂಬರುವ ತಿಂಗಳುಗಳಲ್ಲಿ ಚಿನ್ನವನ್ನು ಮೀರಿಸುವುದು ಎನ್ನಲಾಗಿದೆ. ‘ಬಡವರ ಚಿನ್ನ’ ಎಂದು ಅನೇಕರು ಬೆಳ್ಳಿಯನ್ನು ಕರೆಯುತ್ತಾರೆ. ಸ್ಥೂಲ ಆರ್ಥಿಕ ಪ್ರಚೋದನೆಗಳು, ಕೈಗಾರಿಕಾ ಬೇಡಿಕೆ, ವಿತ್ತೀಯ ಮೂಲಭೂತ ಅಂಶಗಳಿಂದ ದೊಡ್ಡ ಆಸ್ತಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಏರಿಳಿತ ಆಟದಲ್ಲಿ ಇಂದು ಇಳಿಕೆಯಾದ ಚಿನ್ನ ಮತ್ತು ಬೆಳ್ಳಿ ಬೆಲೆ; 22 & 24 ಕ್ಯಾರಟ್ 1 ಗ್ರಾಂ ಬಂಗಾರ ದರ ಎಷ್ಟು?
ಅತ್ಯುತ್ತಮ ಆಸ್ತಿ!
ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿಯ ಬೆಲೆ ಕಡಿಮೆಯಿದೆ. ಅನೇಕರು ಈ ಬೆಲೆ ಬದಲಾಗಲಿದೆ ಎಂದು ನಂಬುತ್ತಾರೆ. ಜಾಗತಿಕವಾಗಿ ಕೇಂದ್ರೀಯ ಬ್ಯಾಂಕುಗಳು ದುರಾಸೆಗೆ ಬೀಳುತ್ತಿದ್ದಂತೆ, ಹೈಟೆಕ್, ನವೀಕರಿಸಬಹುದಾದ ವಲಯಗಳಿಂದ ಬೇಡಿಕೆ ಹೆಚ್ಚುತ್ತದೆ. ಆಗ ಬೆಳ್ಳಿ 2025ರ ಅತ್ಯುತ್ತಮ ಆಸ್ತಿಯಾಗಿ ಹೊರಹೊಮ್ಮುತ್ತದೆ.
ರಾಬರ್ಟ್ ಕಿಯೋಸಾಕಿ ಏನಂತಾರೆ?
ರಾಬರ್ಟ್ ಕಿಯೋಸಾಕಿ ಎನ್ನುವವರು, “ಬೆಳ್ಳಿ ಅತ್ಯಂತ ಬಿಸಿ ಹೂಡಿಕೆ" ಎಂದು ಕರೆದಿದ್ದರು. ಅವರು ಹೇಳಿದಂತೆ ಈ ವರ್ಷ ಬೆಳ್ಳಿ ದರ ಹೆಚ್ಚಾಗಿದೆ. ಇದು ಪ್ರಸ್ತುತ ಪ್ರತಿ ಔನ್ಸ್‌ಗೆ ಸುಮಾರು $34 ರಿಂದ $70 ಗುರಿ ಹೊಂದಿದೆ. ಬೆಳ್ಳಿಯು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ 60% ರಷ್ಟು ಕಡಿಮೆಯಾಗಿದೆ ಎಂದಿದ್ದಾರೆ. ಇದರಿಂದ ಎಲ್ಲ ರೀತಿಯ ಹೂಡಿಕೆದಾರರು ಕೂಡ ಇಲ್ಲಿ ಪ್ರವೇಶ ಮಾಡ್ತಾರೆ.
ಬೆಲೆ ಇಳಿಕೆಯಾಗಿರೋ ಇಂದು ಎಷ್ಟಿದೆ ಚಿನ್ನ-ಬೆಳ್ಳಿ ದರ? ಸುವರ್ಣವಕಾಶ ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ
ಕಿಯೋಸಾಕಿ ಎಕ್ಸ್ ಖಾತೆಯಲ್ಲಿ “ಜಗತ್ತಿನಲ್ಲಿ ಬಹುತೇಕ ಎಲ್ಲರೂ ಕನಿಷ್ಠ ಒಂದು ಔನ್ಸ್ ಬೆಳ್ಳಿಯನ್ನು ಖರೀದಿಸಬಲ್ಲರು" ಎಂದು ಇತ್ತೀಚೆಗೆ ಪೋಸ್ಟ್ ಮಾಡಿದ್ದಾರೆ. ಚಿನ್ನ, ಬೆಳ್ಳಿ, ಬಿಟ್‌ಕಾಯಿನ್‌ಗಳಲ್ಲಿ ಬೆಳ್ಳಿ ಮಾತ್ರ ಅತ್ಯುತ್ತಮ ಅಲ್ಪಾವಧಿಯ ಹೂಡಿಕೆ ಎಂದು ಹೇಳಿದ್ದಾರೆ. ಕೈಗಾರಿಕಾ ಪ್ರಸ್ತುತತೆ, ಶುದ್ಧ ಇಂಧನ ತಂತ್ರಜ್ಞಾನ, ಹಣದುಬ್ಬರ ಕಾರಣದಿಂದ ಬೆಳ್ಳಿ ದರ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.
“ನಕಲಿ ಕಾಗದದ ಹಣದ ಮೌಲ್ಯ ಕಡಿಮೆ ಆಗುತ್ತಿರುವುದರಿಂದ ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್ ಮಾತ್ರ ಬೆಲೆಯಲ್ಲಿ ಏರುತ್ತಿರುವಂತೆ ಕಾಣುತ್ತಿದೆ. ಮುಂದಿನ 10-15 ವರ್ಷಗಳವರೆಗೆ ನಾನು ಒಂದು ಆಸ್ತಿಯನ್ನು ಆರಿಸಿಕೊಳ್ಳಬೇಕು ಅಂದ್ರೆ, ಅದು ಬೆಳ್ಳಿ ಆಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ಹೆಚ್ಚು ಬೆಳ್ಳಿ ಖರೀದಿಸ್ತೀನಿ!
ಜಾಗತಿಕ ಹೂಡಿಕೆ ಅನುಭವಿ ಜಿಮ್ ರೋಜರ್ಸ್ ಕೂಡ ಹೀಗೆ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ, ರೋಜರ್ಸ್ ಅವರು, "ಬೆಳ್ಳಿ ಇನ್ನೂ ಅದರ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಸುಮಾರು 40% ರಷ್ಟು ಕಡಿಮೆಯಾಗಿದೆ. ನಾನು ಇತ್ತೀಚೆಗೆ ಸ್ವಲ್ಪ ಬೆಳ್ಳಿ ಖರೀದಿಸಿದೆ, ಶೀಘ್ರದಲ್ಲೇ ಹೆಚ್ಚು ಖರೀದಿ ಮಾಡ್ತೀನಿ” ಎಂದು ಹೇಳಿದ್ದಾರೆ.