ಅನೇಕರು ಇಂದು ಏನು ದುಡಿಮೆ ಮಾಡೋದು? ಹೇಗೆ ದುಡಿಯೋದು ಎಂದು ಯೋಚನೆ ಮಾಡುತ್ತಿರುತ್ತಾರೆ. ಆದರೆ 74 ವರ್ಷದ ಅಜ್ಜಿ ಮಾತ್ರ ತಿಂಗಳಿಗೆ 5-6 ಲಜ್ಷ ರೂಪಾಯಿ ಹಣ ಗಳಿಸುತ್ತಿದ್ದಾರೆ. ಹೇಗದು?
ಇಂದು ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದು, ಸಾಕಷ್ಟು ಜನರು ಇದನ್ನೇ ಜೀವನೋಪಾಯ ಮಾಡಿಕೊಂಡಿದ್ದಾರೆ. ಕೆಲಸ ಮಾಡುವ ಹಠ, ಶ್ರದ್ಧೆಯೊಂದಿದ್ದರೆ ಏನು ಬೇಕಿದ್ರೂ ಮಾಡಬಹುದು ಎಂದು 74 ವರ್ಷದ ಅಜ್ಜಿ ತೋರಿಸಿಕೊಟ್ಟಿದ್ದಾರೆ.
1.78 ಮಿಲಿಯನ್ ಸಬ್‌ಸ್ಕ್ರೈಬರ್ಸ್
ಮಹಾರಾಷ್ಟ್ರದ ಅಹಲ್ಯಾನಗರದ ಸುಮನ್ ಧಮಾನೆಗೆ ಇಂಟರ್‌ನೆಟ್ ಜ್ಞಾನ ಇಲ್ಲ. ಆದರೂ ಡಿಜಿಟಲ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿರೋದನ್ನು ಮೆಚ್ಚಲೇಬೇಕು. ಇವರನ್ನು ಜನರು ಪ್ರೀತಿಯಿಂದ ‘ಆಪ್ಲಿ ಆಜಿ’ ಎಂದು ಕರೆಯುತ್ತಾರೆ. ಯೂಟ್ಯೂಬ್ ಲೋಕದಲ್ಲಿ ಇವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಯೂಟ್ಯೂಬ್‌ನಲ್ಲಿ ಇವರಿಗೆ 1.78 ಮಿಲಿಯನ್‌ಗಿಂತಲೂ ಹೆಚ್ಚು ಸಬ್‌ಸ್ಕ್ರೈಬರ್ಸ್ ಇದ್ದಾರೆ. ಸುಮನ್ ಅವರು ಅಡುಗೆ ಚಾನೆಲ್ ನಡೆಸುತ್ತಾರೆ. ನಮ್ಮ ದೇಸಿ ಸಾಂಪ್ರದಾಯಿಕ ಆಹಾರಗಳನ್ನು ಇಲ್ಲಿ ಹೇಳಿಕೊಡುತ್ತಾರೆ.
ಮಲ್ಲಿಗೆ ಹೂವಿನ ಡ್ರೆಸ್; ಸ್ಕರ್ಟ್ ಎಳೆದು ಸ್ಟೆಪ್ ಹಾಕಿ ನಶೆ ಏರಿಸಿದ ಕೇತಿಕಾ ಡ್ಯಾನ್ಸ್‌ಗೆ ಯುಟ್ಯೂಬ್ ತತ್ತರ!
ಮೊಮ್ಮಗನಿಂದ ಕಲಿತ ಅಜ್ಜಿ!
ಸುಮನ್ ಧಮಾನೆಗೆ ಇಂಟರ್ನೆಟ್, ಸೋಶಿಯಲ್ ಮೀಡಿಯಾ ಬಗ್ಗೆ ಏನೂ ಗೊತ್ತಿರಲಿಲ್ಲ. ಮೊಮ್ಮಗ ಯಶ್‌ನಿಂದ ಅವರು ಯೂಟ್ಯೂಬ್ ಚಾನೆಲ್ ಶುರು ಮಾಡಿದರು. ಆರಂಭದಲ್ಲಿ ಕ್ಯಾಮೆರಾ ಮುಂದೆ ಮಾತನಾಡಲು ಹಿಂಜರಿಯುತ್ತಿದ್ದ ಸುಮನ್, ಆಮೇಲೆ ಸಖತ್ ಆಗಿ ಮಾತನಾಡಲು ಆರಂಭಿಸಿದರು. ಜನರ ಪ್ರತಿಕ್ರಿಯೆಯಿಂದಲೇ ಅವರು ಇಂದು ಇಷ್ಟೆಲ್ಲ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ.
ಜನರು ಇಷ್ಟಪಡ್ತಾರೆ!
ಸುಮನ್ ಧಮಾನೆ ಅವರು ಯೂಟ್ಯೂಬ್ ಚಾನೆಲ್ ಮೂಲಕ ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಹಣ ಗಳಿಸುತ್ತಿದ್ದಾರೆ. ಸುಮನ್ ವೀಡಿಯೋಗಳು ಹಳೆಯ ಹಾಗೂ ಹೊಸ ಹೊಸ ಅಡುಗೆ ಮಾಡುವ ವಿಧಾನಗಳನ್ನು ತಿಳಿಸಿಕೊಡುತ್ತದೆ. ಈ ಮೂಲಕ ಅಜ್ಜಿ ಮಾಡುತ್ತಿದ್ದ ಅಡುಗೆಯನ್ನು ವೀಕ್ಷಕರು ನೆನಪಿಸಿಕೊಳ್ತಿದ್ದಾರೆ. ತುಂಬ ಸಹಜವಾಗಿ ಅವರು ವಿಡಿಯೋ ಮಾಡುತ್ತಾರೆ. ಈ ವಿಡಿಯೋ ನೋಡಿದವರಿಗೆ ಒಂದು ಆತ್ಮೀಯ ವಾತಾವರಣ ಸಿಗುವುದು. ಇದನ್ನೇ ವೀಕ್ಷಕರೇ ಇಷ್ಟಪಡೋದು.
ಒಟಿಟಿ ಮತ್ತು ಯೂಟ್ಯೂಬ್, ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಮೂಗುದಾರ! ಕೇಂದ್ರದಿಂದ ಮಹತ್ವದ ಹೇಳಿಕೆ
ಎಲ್ಲರಿಗೂ ಮಾದರಿಯಾದ ಅಜ್ಜಿ!
ಜೀವನದಲ್ಲಿ ಏನೂ ಬೇಕಿದ್ರೂ ಮಾಡಬಹುದು, ಕಲಿಯಬಹುದು, ಇದಕ್ಕೆ ವಯಸ್ಸಿಲ್ಲ ಎಂದು 74 ವರ್ಷದ ಸುಮನ್ ಧಮಾನೆ ಸಾಬೀತುಪಡಿಸಿದ್ದಾರೆ. ಇಂದು ನಮಗೆ ಸಾಕಷ್ಟು ಸೌಲಭ್ಯಗಳಿವೆ, ಅದನ್ನು ಹೇಗೆ ಬಳಸಿಕೊಳ್ತೇವೆ ಎನ್ನೋದು ಮುಖ್ಯ ಆಗುತ್ತದೆ. ಈಗ ಈ ಅಜ್ಜಿ ಕೂಡ ಡಿಜಿಟಲ್ ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ, ಈ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿದ್ದಾರೆ. ವಯಸ್ಸಾಯ್ತು, ಹೊಸ ಕೆಲಸ ಮಾಡೋಕಾಗಲ್ಲ, ಈಗ ಆರಂಭಿಸೋಕೆ ಆಗೋದಿಲ್ಲ ಎಂದು ಕೆಲವರು ದೂರುವುದುಂಟು. ಆದರೆ ವಯಸ್ಸು ಎನ್ನೋದು ನಂಬರ್ ಅಷ್ಟೇ ಅಂತ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಕಠಿಣ ಪರಿಶ್ರಮ, ಸಮರ್ಪಣೆ, ಶ್ರದ್ಧೆ ಇದ್ದರೆ ಮಾತ್ರ ಯಾವುದೇ ವಯಸ್ಸಿನಲ್ಲಿಯೂ ಕೂಡ ಯಶಸ್ಸನ್ನು ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇಂದು ಅನೇಕರು ಯುಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಹೆಚ್ಚು ವೀಕ್ಷಣೆ ಸಿಕ್ಕರೆ ದುಡ್ಡು ಸಿಗುವುದು ಎಂದು ಯಾರು ಯಾರನ್ನೋ ಅವಮಾನಿಸುತ್ತಾರೆ, ತಪ್ಪು ಮಾಹಿತಿ ನೀಡುತ್ತಾರೆ, ಡ್ರಾಮಾ ಮಾಡುತ್ತಿದ್ದಾರೆ. ಸಾಕಷ್ಟು ಜನರು ಈ ವೀಕ್ಷಣೆ ಪಡೆಯಲು ಅಡ್ಡದಾರಿ ಹಿಡಿದಿದ್ದೂ ಇದೆ. ಆದರೆ ಈ ಅಜ್ಜಿ ಮಾತ್ರ ತನ್ನಲ್ಲಿರುವ ಕೌಶಲವನ್ನು ಸರಿಯಾಗಿ ಬಳಸಿಕೊಂಡಿರೋದು ಎಲ್ಲರಿಗೂ ಮಾದರಿ ಆಗಿದೆ.