ಬೆಲೆ ನೋಡ್ದೆ ಪಾಸ್ತಾ ಆರ್ಡರ್ ಮಾಡಿ ದಂಗಾದ ಗರ್ಲ್ಸ್

By Suvarna News  |  First Published Sep 28, 2023, 5:14 PM IST

ವಿದೇಶಕ್ಕೆ ಹೋಗ್ಲಿ ಇಲ್ಲ ಬೇರೆ ಊರಿಗೆ ಹೋಗ್ಲಿ ಮೊದಲು ನಾವು ಖರೀದಿ ಮಾಡುವ, ತಿನ್ನುವ ವಸ್ತುವಿನ ಬೆಲೆ ಕೇಳಿ ಕೊಳ್ಬೇಕು. ಇಲ್ಲ ಅಂದ್ರೆ ಮುಂದೆ ಕಷ್ಟವಾಗುತ್ತೆ. ಬಿಲ್ ಪಾವತಿ ಮಾಡಲಾಗ್ದೆ ಸುಸ್ತಾಗ್ಬೇಕಾಗುತ್ತೆ. ಈ ಹುಡುಗಿಯರು ಮಾಡಿದ ತಪ್ಪೂ ಇದೆ. 
 


ನಮ್ಮದೇ ಊರಲ್ಲಿ ಒಂದೊಂದು ವಸ್ತುವಿನ ಬೆಲೆಯೂ ನಮಗೆ ಗೊತ್ತಿರುತ್ತೆ. ವ್ಯಾಪಾರಸ್ಥ ಬೆಲೆ ಹೆಚ್ಚು ಮಾಡಿದ್ರೆ, ಮೊನ್ನೆ ಆಗ್ಲೇ ತೆಗೆದುಕೊಂಡ್ವಿ, ಈಗ್ಯಾಕೆ ಇಷ್ಟೊಂದು ಅಂತ ಧಮಕಿ ಹಾಕ್ತೇವೆ. ಅದೇ ನಾವು ಬೇರೆ ಪ್ರದೇಶಕ್ಕೆ ಹೋದಾಗ ನಮ್ಮ ವರ್ತನೆ ಕೂಡ ಬದಲಾಗಿರುತ್ತೆ, ನಮ್ಮನ್ನು ನೋಡಿವ ವ್ಯಾಪಾರಸ್ಥರು ಕೂಡ ತಮ್ಮ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಸ್ಥಳೀಯರಿಗೆ ನೂರು, ಇನ್ನೂರು ಇರುವ ದರ, ಬೇರೆಯವರನ್ನು ಕಂಡಾಗ 500 – 1000 ಆಗಿರುತ್ತೆ. ದೇಶದೊಳಗೇ ಹೀಗೆ ಅಂದ್ಮೇಲೆ ಇನ್ನು ವಿದೇಶದಲ್ಲಿ ಕೇಳ್ಬೇಕಾ? ನಮ್ಮವರಲ್ಲ ಎಂಬ ಸತ್ಯ ವಿದೇಶಿ ವ್ಯಾಪಾರಿಗಳಿಗೆ ಗೊತ್ತಾಗ್ತಿದ್ದಂತೆ ತಲೆಗೊಂದು ದರ ಹೇಳ್ತಾರೆ. ಬರೀ ವಸ್ತುವಿನ ಬೆಲೆ ಮಾತ್ರವಲ್ಲ ಸಾರಿಗೆ, ಆಹಾರದ ಬೆಲೆಯಲ್ಲೂ ನಾವು ಈ ತಾರತಮ್ಯವನ್ನು ನೋಡ್ಬಹುದು. ಇದೇ ಕಾರಣಕ್ಕೆ ನಾವು ಬೇರೆ ಸ್ಥಳಗಳಿಗೆ ಹೋಗುವಾಗ ಹೆಚ್ಚಿನ ಹಣ ಇಟ್ಕೊಂಡು ಹೋಗ್ಬೇಕು. 

ಅಮೆರಿಕಾದ ವಿಸ್ಕಾನ್ಸಿನ್ ನ ಕೆಲ ಸ್ನೇಹಿತೆಯರಿಗೂ ಇದೇ ರೀತಿಯ ಮೋಸವಾಗಿದೆ. ಅವರು ಪಾಸ್ತಾ ಆರ್ಡರ್ ಮಾಡಿದ್ದೇ ತಪ್ಪಾಗಿದೆ. ಒಂದು ಪಾಸ್ತಾ ಬೆಲೆ ನೋಡಿ ಅವರ ತಲೆ ತಿರುಗಿದ್ದಲ್ಲದೆ, ಎಲ್ಲರೂ ಒಂದೇ ಪ್ಲೇಟ್ ನಲ್ಲಿದ್ದ ಪಾಸ್ತಾವನ್ನು ಹಂಚಿ ತಿಂದಿದ್ದಾರೆ. ಬಿಲ್ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ಜೊತೆ ಮಾಡಿದ ವಾದ ಕೂಡ ಪ್ರಯೋಜನಕ್ಕೆ ಬರಲಿಲ್ಲ. 

Tap to resize

Latest Videos

ಇದೊಂದು ಅಭ್ಯಾಸವಿದ್ರೆ ಸಾಕು, ಗಂಡಸರ ಜೇಬು ಖಾಲಿ ಆಗೋದು ಗ್ಯಾರಂಟಿ!

ಪಾಸ್ತಾ (Pasta) ಬೆಲೆ ಕೇಳಿದ್ರೆ ಸುಸ್ತಾಗ್ತೀರಿ : ಟಿಕ್ ಟಾಕ್ (Tiktok) ನಲ್ಲಿ ಅವಳಿ ಸಹೋದರಿಯರು ಘಟನೆಯ ಬಗ್ಗೆ ವಿವರಿಸಿದ್ದಾರೆ. ಅದನ್ನು ಓದಿದ ಬಳಕೆದಾರರು ದಂಗಾಗಿದ್ದಾರೆ. ಈ ಅವಳಿ ಸಹೋದರಿಯರ ಹೆಸರು ಕ್ಯಾಸಿಡಿ ಮತ್ತು ಲೇಹ್ ಆರ್ಮ್‌ಬ್ರಸ್ಟರ್. ಇಬ್ಬರು ತಮ್ಮ ಸ್ನೇಹಿತೆಯರ ಜೊತೆ ಸ್ಪೇನ್‌ನ ಮ್ಯಾಡ್ರಿಡ್‌ ಗೆ ಪ್ರಯಾಣ ಬೆಳೆಸಿದ್ದರು. ಅವರು ಅಲ್ಲಿ ಬೋಟ್ ರೆಸ್ಟೋರೆಂಟ್ ಗೆ ಹೋಗಿದ್ದಾರೆ.  ಪಾಸ್ತಾ ಬೆಲೆ ಮಾಮೂಲಿ ಇರುತ್ತೆ ಎನ್ನುವ ನಂಬಿಕೆಯಲ್ಲಿ ಲೋಬ್ಸ್ಟರ್ ಪಾಸ್ತಾ ಆರ್ಡರ್ ಮಾಡಿದ್ದಾರೆ.

ಒಂದು ಗಂಟೆ ನಂತ್ರ ಪಾಸ್ತಾ ಬಂದಿದೆ. ಅದ್ರ ಜೊತೆ ಬಿಲ್ (Bill) ಕೂಡ ಬಂದಿದೆ. ಬಿಲ್ ನೋಡ್ತಿದ್ದಂತೆ ಇವರೆಲ್ಲ ಅಚ್ಚರಿಗೊಳಗಾಗಿದ್ದಾರೆ. ಪಾಸ್ತಾ ಜೊತೆಗಿದ್ದ ಬಿಲ್ ನಲ್ಲಿ ಪಾಸ್ತಾ ಬೆಲೆ 530 ಡಾಲರ್ ಅಂದ್ರೆ ಸುಮಾರು 44 ಸಾವಿರ ರೂಪಾಯಿ ಇತ್ತು. 

ನದಿಯೇ ಇಲ್ಲದ ದೇಶ ಗೊತ್ತು, ಹಾವು, ಸೊಳ್ಳೆ, ಜೈಲು ದೇವಸ್ಥಾನವೇ ಇಲ್ಲದ ದೇಶವೂ ಇವೆ!

ಒಂದು ಪ್ಲೇಟ್ ಪಾಸ್ತಾಗೆ ಇಷ್ಟೊಂದು ಬೆಲೆಯೇ ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕೇಳಿದ್ದಾರೆ. ಆದ್ರೆ ಸಿಬ್ಬಂದಿ ಬೇರೆಯದೇ ಕಥೆ ಹೇಳಿದ್ದಾರೆ. ಬೆಲೆ ಕಡಿಮೆ ಮಾಡುವಂತೆ ಹೇಳಿದ್ರೂ ಅವರು ಕೇಳಿಲ್ಲ. ಸ್ಥಳೀಯರು ಕೂಡ ಇವರ ಬೆಂಬಲಕ್ಕೆ ಬಂದಿದ್ದರು. ರೆಸ್ಟೋರೆಂಟ್ ಹೆಚ್ಚು ಬೆಲೆ ವಿಧಿಸುತ್ತಿದೆ ಎಂದು ಸ್ಥಳಿಯರು ಕೂಡ ಆರೋಪ ಮಾಡಿದ್ರು. ಎಷ್ಟೇ ಗಲಾಟೆ ಮಾಡಿದ್ರೂ ಪ್ರಯೋಜನ ಆಗಲಿಲ್ಲ. ನಂತ್ರ ಸ್ನೇಹಿತರಲ್ಲಿ ಒಬ್ಬರು 44 ಸಾವಿರ ರೂಪಾಯಿ ಪಾವತಿಸಿ ಪೆಚ್ಚು ಮೊರೆ ಹಾಕಿಕೊಂಡು ಬಂದಿದ್ದಾರೆ.

ಟಿಕ್ ಟಾಕ್ ನಲ್ಲಿ ಅವಳಿ ಸಹೋದರಿಯರು ಎಲ್ಲ ವಿಷ್ಯವನ್ನು ತಿಳಿಸಿದ್ದಾರೆ. ಅವರ ವಿಡಿಯೋಕ್ಕೆ ಜನರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ನೀವು ಮೋಸ ಹೋಗಿದ್ದೀರಿ ಎಂದು ಒಬ್ಬರು ಬರೆದಿದ್ದಾರೆ. ನೀವು ಪಾಸ್ತಾ ಆರ್ಡರ್ ಮಾಡುವ ಮೊದಲು ಬೆಲೆ ಕೇಳಬೇಕಿತ್ತು ಎಂದು ಇನ್ನೊಬ್ಬರು ಹೇಳಿದ್ದಾರೆ. ಪಾಸ್ತಾ ಆರ್ಡರ್ ಮಾಡಿದ್ದು ನಿಮ್ಮ ಜೀವನದ ದೊಡ್ಡ ತಪ್ಪು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಬೇರೆ ದೇಶಕ್ಕೆ ಹೋಗಾದ ಹೆಚ್ಚು ಬಿಲ್ ಪಾವತಿಸಿ ಬಂದ ಘಟನೆ ಇದೇ ಮೊದಲಲ್ಲ. ಅನೇಕ ಬಾರಿ ಇಂಥ ಸುದ್ದಿಗಳು ಕೇಳಿ ಬಂದಿವೆ.  

click me!