Post Office Saving Scheme: ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಎಫ್ ಡಿಗಿಂತ ಅಧಿಕ ಬಡ್ಡಿ, ತೆರಿಗೆ ಉಳಿತಾಯ!

Published : Jul 12, 2022, 08:22 PM IST
Post Office Saving Scheme: ಅಂಚೆ ಕಚೇರಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಎಫ್ ಡಿಗಿಂತ ಅಧಿಕ ಬಡ್ಡಿ, ತೆರಿಗೆ ಉಳಿತಾಯ!

ಸಾರಾಂಶ

ಮಧ್ಯಮ ವರ್ಗದ ಜನರು ರಿಸ್ಕ್ ಕಡಿಮೆ ಇರುವ ಹಾಗೂ ಉತ್ತಮ ರಿಟರ್ನ್ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.ಅಂಥವರಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಅತ್ಯುತ್ತಮ ಆಯ್ಕೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿದರದ ಜೊತೆಗೆ ತೆರಿಗೆ ಉಳಿತಾಯದ ಪ್ರಯೋಜನವೂ ಸಿಗುತ್ತದೆ.   

Business Desk:ಕಡಿಮೆ ಅವಧಿಯ ಜೊತೆಗೆ ತೆರಿಗೆ ಪ್ರಯೋಜನ (Tax Benefits) ನೀಡುವಂತಹ ಯೋಜನೆಗಳಲ್ಲಿ (Schemes) ಹೂಡಿಕೆ (Invest) ಮಾಡಲು ಬಯಸೋರಿಗೆ  ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿಯ (Post office) ಈ  ಉಳಿತಾಯ ಯೋಜನೆ (Saving Scheme) 5 ವರ್ಷಗಳ ಅವಧಿಯದ್ದಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ್ರೆ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. 

ಏನಿದು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ?
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC) ಸಣ್ಣ ಉಳಿತಾಯ ಯೋಜನೆಗಳಲ್ಲಿ (Small saving schemes) ಒಂದಾಗಿದೆ. ಅಪಾಯವಿಲ್ಲದ ಉಳಿತಾಯಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. 5 ವರ್ಷಗಳ ಕಿರು ಅವಧಿಗೆ ಹೂಡಿಕೆ ಮಾಡಲು ಬಯಸೋರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ತೆರಿಗೆ ಪ್ರಯೋಜನಗಳು ಕೂಡ ಸಿಗುತ್ತವೆ. ಇನ್ನು 5 ವರ್ಷಗಳ ಬ್ಯಾಂಕ್ ಎಫ್ ಡಿ ಗೆ ಶೇ.5.5 ಬಡ್ಡಿದರವಿದ್ರೆ, ಎನ್ ಎಸ್ ಸಿಯಲ್ಲಿನ (NSC) ಹೂಡಿಕೆಗೆ  ವಾರ್ಷಿಕ ಶೇ.6.8ರಷ್ಟು ಬಡ್ಡಿದರ (Interest rate) ನೀಡಲಾಗುತ್ತಿದೆ.  ಸಣ್ಣ ಹಾಗೂ ಮಧ್ಯಮ ಆದಾಯದ ಹೂಡಿಕೆದಾರರಿಗೆ ಸುರಕ್ಷಿತ ಹಾಗೂ ಕಡಿಮೆ ಅಪಾಯದ ಹೂಡಿಕೆಗೆ ಎನ್ ಎಸ್ ಸಿ (NSC) ಅತ್ಯುತ್ತಮ ಆಯ್ಕೆ. 

Dollar Vs Rupee: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ದುರ್ಬಲ;ಶೀಘ್ರದಲ್ಲೇ 80ರ ಗಡಿ ದಾಟಲಿದೆಯಾ?

ಈ ಯೋಜನೆ ವಿಶೇಷತೆಗಳು
ರಾಷ್ಟ್ರೀಯ ಉಳಿತಾಯ ಯೋಜನೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದಕ್ಕೆ ಪ್ರತಿ ತಿಂಗಳು ಹಣ ತುಂಬಬೇಕಾದ ಅಗತ್ಯವಿಲ್ಲ. ಬದಲಿಗೆ ಇದಕ್ಕೆ ಒಮ್ಮೆಗೆ ದೊಡ್ಡ ಮೊತ್ತವನ್ನು ಪಾವತಿಸಿದರೆ ಸಾಕು. ಎನ್ ಎಸ್ ಸಿ ಯೋಜನೆಯಲ್ಲಿ ಮಾಡಿದ ಠೇವಣಿಗೆ ಆದಾಯ ತೆರಿಗೆ ಕಾಯ್ದೆ (Income Tax Act) ಸೆಕ್ಷನ್  80ಸಿ ( section 80C) ಅಡಿಯಲ್ಲಿ ತೆರಿಗೆ ಕಡಿತದ (tax deduction) ಸೌಲಭ್ಯವಿದೆ. 

ಬಡ್ಡಿದರ
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಸಾರ್ವಜನಿಕ ಭವಿಷ್ಯ ನಿಧಿ (PPF) ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸರ್ಕಾರ ಬದಲಾವಣೆ ಮಾಡಿಲ್ಲ. ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರವನ್ನು (Repo rate) ಏರಿಕೆ ಮಾಡಿದ್ದು, ವಿವಿಧ ಬ್ಯಾಂಕುಗಳು ಕೂಡ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡದೆ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿರಿಸಿದೆ.  ಹೀಗಾಗಿ ಎನ್ ಎಸ್ ಸಿಯಲ್ಲಿನ ಠೇವಣಿಗೆ  ಶೇ.6.8ರಷ್ಟು ಬಡ್ಡಿದರವಿದೆ.

ಕನಿಷ್ಠ ಹೂಡಿಕೆ ಎಷ್ಟು?
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯಡಿಯಲ್ಲಿ ಖಾತೆ ತೆರೆಯಲು ಕನಿಷ್ಠ  1,000ರೂ. ಹೂಡಿಕೆ (Invest) ಮಾಡಬೇಕು. ಆ ಬಳಿಕ ಇನ್ನಷ್ಟು ಹೂಡಿಕೆ ಮಾಡುತ್ತ ಬರಬಹುದು. ಆದ್ರೆ ಈ ಯೋಜನೆಯಡಿಯಲ್ಲಿ ಗರಿಷ್ಠ ಠೇವಣಿಗೆ  ಮಿತಿಯಿಲ್ಲ. 

ಯಾರು ಈ ಖಾತೆ ತೆರೆಯಬಹುದು?
-ವಯಸ್ಕ ವ್ಯಕ್ತಿ ತನಗಾಗಿ ಅಥವಾ ಅಪ್ರಾಪ್ತರ ಪರವಾಗಿ ಎನ್ ಎಸ್ ಸಿ (NSC) ಖಾತೆ ತೆರೆಯಬಹುದು.
-10 ವರ್ಷ ಪೂರ್ಣಗೊಂಡ ಅಪ್ರಾಪ್ತರಿಗೆ ಕೂಡ ಖಾತೆ ತೆರೆಯಲು ಅವಕಾಶ ನೀಡಲಾಗಿದೆ.
-ಈ ಯೋಜನೆಯಡಿಯಲ್ಲಿ ಖಾತೆಗಳನ್ನು ತೆರೆಯಲು ಯಾವುದೇ ಮಿತಿಯಿಲ್ಲ.

ಮೆಚ್ಯುರಿಟಿ ಯಾವಾಗ?
ಠೇವಣಿ ಪ್ರಾರಂಭಿಸಿದ ದಿನಾಂಕದಿಂದ 5 ವರ್ಷಗಳು ಪೂರ್ಣಗೊಂಡ ಬಳಿಕ ಠೇವಣಿ ಮೆಚ್ಯುರ್ ಆಗುತ್ತದೆ.

ಸಾಲ ಸೌಲಭ್ಯ
ಈ ಯೋಜನೆ ಆಧಾರವಾಗಿರಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. 

Bank FD Interest Rates:ಎಫ್ ಡಿ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತಿವೆ ಈ 4 ಬ್ಯಾಂಕುಗಳು!

5 ವರ್ಷಗಳಲ್ಲಿ 80,000ರೂ. ಬಡ್ಡಿ
ಈಗಾಗಲೇ ತಿಳಿಸಿರುವಂತೆ ಎನ್ ಎಸ್ ಸಿಗೆ ವಾರ್ಷಿಕ ಶೇ.6.8 ಬಡ್ಡಿದರವಿದೆ. ಅಂದ್ರೆ 1000ರೂ. ಹೂಡಿಕೆ ಮಾಡಿದ್ರೆ 5 ವರ್ಷಗಳ ಬಳಿಕ 1389.49ರೂ. ಸಿಗುತ್ತದೆ. ನೀವು ಈ ಯೋಜನೆಯಲ್ಲಿ 2 ಲಕ್ಷ ರೂ. ಹೂಡಿಕೆ ಮಾಡಿದ್ರೆ 5 ವರ್ಷಗಳ ಬಳಿಕ 77,899ರೂ. ಬಡ್ಡಿ ಸಿಗುತ್ತದೆ. ಅಂದ್ರೆ ಒಟ್ಟು 2.77ಲಕ್ಷ ರೂ. ರಿಟರ್ನ್ ಸಿಗುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು