ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಕುಸಿದ ಅದಾನಿ,ಅಂಬಾನಿ ಸ್ಥಾನ; ಮುಗಿಯಿತಾ ಭಾರತದ ಶ್ರೀಮಂತರ ದರ್ಬಾರ್‌?

By Suvarna News  |  First Published Feb 23, 2023, 6:32 PM IST

ಕೆಲವೇ ಕೆಲವು ತಿಂಗಳ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಪಾರುಪತ್ಯ ಸಾಧಿಸಿದ ಗೌತಮ್ ಅದಾನಿ ಹೆಸರು ಈಗ ಟಾಪ್ 25ರಲ್ಲೂ ಕಾಣಿಸುತ್ತಿಲ್ಲ. ಇನ್ನು ಭಾರತದ ಇನ್ನೊಬ್ಬ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕೂಡ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಗೆ ಜಾರಿದ್ದಾರೆ. 


ನವದೆಹಲಿ (ಫೆ.23): ಉದ್ಯಮಿ ಗೌತಮ್ ಅದಾನಿಗೆ ಒಂದರ ಮೇಲೊಂದರಂತೆ ಹೊಡೆತಗಳು ಬೀಳುತ್ತಲೇ ಇದ್ದು, ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಕೆಲವೇ ತಿಂಗಳುಗಳ ಹಿಂದೆ ಭಾರತ ಮಾತ್ರವಲ್ಲ, ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಗಳಿಸಿದ್ದ ಗೌತಮ್ ಅದಾನಿ ಹೆಸರು ಈಗ ವಿಶ್ವದ 25  ಶ್ರೀಮಂತರ ಪಟ್ಟಿಯಲ್ಲೂ ಕಾಣಿಸುತ್ತಿಲ್ಲ. ಅಷ್ಟೇ ಅಲ್ಲ, ಭಾರತದ ಇನ್ನೊಬ್ಬ ಶ್ರೀಮಂತ ಮುಖೇಶ್ ಅಂಬಾನಿ ಕೂಡ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕೆಳಗೆ ಜಾರುತ್ತಿದ್ದಾರೆ. ಹಿಂಡೆನ್ ಬರ್ಗ್ ವರದಿ ಬಳಿಕ ಅದಾನಿ ಸಾಮ್ರಾಜ್ಯದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಈ ಬಿರುಗಾಳಿ ಅದಾನಿಯ ಶ್ರೀಮಂತಿಕೆಯನ್ನು ಕರಗಿಸುತ್ತಿದೆ. ಬುಧವಾರ ಅದಾನಿ ನಿವ್ವಳ ಸಂಪತ್ತು 45 ಬಿಲಿಯನ್ ಡಾಲರ್ ಗಿಂತಲೂ ಕಡಿಮೆಯಿದ್ದ ಹಿನ್ನೆಲೆಯಲ್ಲಿ ಫೋರ್ಬ್ಸ್ ಹಾಗೂ ಬ್ಲೂಮ್ ಬರ್ಗ್ ಪ್ರಕಟಿಸುವ ವಿಶ್ವದ ಶ್ರೀಮಂತರ ಪಟ್ಟಿಗಳಲ್ಲಿ ಅದಾನಿ ಸ್ಥಾನಗಳು ಕ್ರಮವಾಗಿ 26 ಹಾಗೂ 29ಕ್ಕೆ ಕುಸಿದಿವೆ. ಇತ್ತ ಮುಖೇಶ್ ಅಂಬಾನಿ ಕೂಡ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಜಾರಿದ್ದಾರೆ. ಈ ಇಬ್ಬರ ನಿವ್ವಳ ಆದಾಯದಲ್ಲಿ ಕುಸಿತವಾಗಿದೆ. ಆದರೆ, ಅಂಬಾನಿಗೆ ಹೋಲಿಸಿದ್ರೆ ಅದಾನಿ ಆದಾಯದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಕೆಲವೇ ತಿಂಗಳ ಹಿಂದೆ ವಿಶ್ವದ ಶ್ರೀಮಂತ ಉದ್ಯಮಿಗಳು ಕುಸಿತ ಹಾದಿಯಲ್ಲಿದ್ದರೆ, ಗೌತಮ್ ಅದಾನಿ ಸಂಪತ್ತಿನಲ್ಲಿ ಭಾರೀ ಹೆಚ್ಚಳವಾಗುವ ಮೂಲಕ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಅದಾನಿ ಎರಡನೇ ಸ್ಥಾನಕ್ಕೇರಿದ್ದರು ಕೂಡ.

ಹಿಂಡೆನ್ ಬರ್ಗ್ ವರದಿ ಬಳಿಕ ಅದಾನಿ ಸಂಪತ್ತಿನಲ್ಲಿ ಇಳಿಕೆ
ಜನವರಿ 24ರಂದು ಅಮೆರಿಕ ಮೂಲದ ಹಿಂಡೆನ್ ಬರ್ಗ್ 100 ಪುಟಗಳ ವರದಿಯಲ್ಲಿ ವಂಚನೆ ಆರೋಪ ಮಾಡಿದ ಬಳಿಕ ಅದಾನಿ ಸಂಪತ್ತಿನಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅಷ್ಟೇ ಅಲ್ಲ, ಅದಾನಿ ಸಮೂಹದ ಷೇರುಗಳು ಕೂಡ ಭಾರೀ ಇಳಿಕೆ ದಾಖಲಿಸಿವೆ. ಕಳೆದ ಸೆಪ್ಟೆಂಬರ್ ನಲ್ಲಿ ಅದಾನಿ ಅವರ ಒಟ್ಟು ಸಂಪತ್ತು 150 ಬಿಲಿಯನ್ ಡಾಲರ್ ಸಮೀಪ ತಲುಪಿತ್ತು. ಪರಿಣಾಮ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನಕ್ಕೇರಿದ್ದರು. ಈ ಸ್ಥಾನ ತಲುಪಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಕೂಡ ಗಳಿಸಿದ್ದರು. ಆದರೆ, ಈ ವರ್ಷ ಅದಾನಿ ಗ್ರಹಚಾರ ಸರಿಯಿದ್ದಂತೆ ಕಾಣುತ್ತಿಲ್ಲ. ಸೋಲಿನ ಮೇಲೆ ಸೋಲುಗಳು ಎದುರಾಗುತ್ತಿವೆ. 

Tap to resize

Latest Videos

ಫೇಸ್‌ಬುಕ್‌, ಇನ್ಸ್ಟಾ ಬ್ಲೂ ಬ್ಯಾಡ್ಜ್‌ಗೂ ಶುಲ್ಕ: ಚಂದಾ ಪಾವತಿಸಿದವರಿಗೆ ಖಾತೆ ನಕಲು ತಡೆ ಸೇರಿ ಹಲವು ಸವಲತ್ತು..!

ಕರಗುತ್ತಿದೆ ಅದಾನಿ ಸಂಪತ್ತು
ಅಮೆರಿಕ ಮೂಲದ ಹಿಂಡೆನ್ ಬರ್ಗ್ 100 ಪುಟಗಳ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಗೌತಮ್ ಅದಾನಿ ಸಂಪತ್ತು ಕರಗಲು ಪ್ರಾರಂಭಿಸಿದೆ. ಪರಿಣಾಮ ಅದಾನಿ ಸಂಪತ್ತು 42.7 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ. ಪರಿಣಾಮ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ, ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಅದಾನಿ, ಈಗ 29ನೇ ಸ್ಥಾನಕ್ಕೆ ಜಾರಿದ್ದಾರೆ. ಮುಖೇಶ್ ಅಂಬಾನಿ ಅವರಿಗೆ ಹೋಲಿಸಿದರೆ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ 14 ಪಟ್ಟು ಇಳಿಕೆಯಾಗಿದೆ.  ಈ ವರ್ಷ ಸಂಪತ್ತಿನಲ್ಲಿ ಇಳಿಕೆ ದಾಖಲಿಸುತ್ತಿರುವ ಉದ್ಯಮಿಗಳಲ್ಲಿ ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನಗಳಲ್ಲಿದ್ದಾರೆ. ಇನ್ನು ಅದಾನಿ ಸಮೂಹದ ಷೇರುಗಳು ಬುಧವಾರ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಭಾರೀ ಕುಸಿತ ಕಂಡಿವೆ. ಅದಾನಿ ಸಮೂಹದ ಎಲ್ಲ 10 ಷೇರುಗಳು ನಷ್ಟದ ಜೊತೆಗೆ ಹಳದಿ ಪಟ್ಟಿಯಲ್ಲಿ ಸಿಲುಕಿವೆ.

ಶೀಘ್ರದಲ್ಲೇ ಮತ್ತಷ್ಟು ಉದ್ಯೋಗಿಗಳ ವಜಾಕ್ಕೆ ಫೇಸ್ಬುಕ್ ಮೆಟಾ ಚಿಂತನೆ...!

12ನೇ ಸ್ಥಾನದಲ್ಲಿ ಮುಖೇಶ್ ಅಂಬಾನಿ
ಭಾರತೀಯ ಷೇರು ಮಾರುಕಟ್ಟೆಯಲ್ಲಿನ ಕುಸಿತ ಮುಖೇಶ್ ಅಂಬಾನಿ ಅವರ ಮೇಲೂ ಪರಿಣಾಮ ಬೀರಿವೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಕೂಡ ನಷ್ಟ ಅನುಭವಿಸಿವೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.2.35ರಷ್ಟು ಇಳಿಕೆ ಕಂಡು 2,337ರೂ.ಗೆ ತಲುಪಿದೆ. ಇದ್ರಿಂದ ಮುಖೇಶ್ ಅಂಬಾನಿ ಅವರ ಸಂಪತ್ತು ಕೂಡ ಕುಸಿದಿದೆ. ಈ ತನಕ ಅಂಬಾನಿ ಅವರ 5.6 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ನಷ್ಟವಾಗಿದೆ. ಪ್ರಸ್ತುತ ಮುಖೇಶ್ ಅಂಬಾನಿ ಅವರ ಇವ್ವಳ ಸಂಪತ್ತು 81.5 ಬಿಲಿಯನ್ ಡಾಲರ್ ಆಗಿದೆ.  ಹೀಗಾಗಿ ಗೌತಮ್ ಅದಾನಿಗೆ ಹೋಲಿಸಿದರೆ ಸದ್ಯ ಮುಖೇಶ್ ಅಂಬಾನಿ ಅವರ ಸಂಪತ್ತು ಎರಡು ಪಟ್ಟು ಹೆಚ್ಚಿದೆ. 

click me!