FD ಬಡ್ಡಿದರ ಹೆಚ್ಚಿಸಿದ ಎಚ್ ಡಿಎಫ್ ಸಿ ಬ್ಯಾಂಕ್; ಹಿರಿಯ ನಾಗರಿಕರ ಠೇವಣಿಗಳಿಗೆ ಶೇ.7.75 ಬಡ್ಡಿ

By Suvarna News  |  First Published Feb 23, 2023, 5:17 PM IST

ಕೆಲವು ದಿನಗಳ ಹಿಂದಷ್ಟೇ ಆರ್ ಬಿಐ ರೆಪೋ ದರ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಸ್ಥಿರ ಠೇವಣಿ ಹಾಗೂ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿವೆ.ಎಚ್ ಡಿಎಫ್ ಸಿ ಬ್ಯಾಂಕ್ ಕೂಡ ಸ್ಥಿರ ಠೇವಣಿ ಅಥವಾ ಎಫ್ ಡಿಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿದೆ.ಹಾಗಾದ್ರೆ ಎಚ್ ಡಿಎಫ್ ಸಿ ಬ್ಯಾಂಕ್ ಯಾವೆಲ್ಲ ಅವಧಿಯ ಎಫ್ ಡಿಗಳ ಬಡ್ಡಿದರ ಹೆಚ್ಚಳ ಮಾಡಿದೆ? ಇಲ್ಲಿದೆ ಮಾಹಿತಿ. 
 


ನವದೆಹಲಿ( ಫೆ.23): ಭಾರತದ ಖಾಸಗಿ ವಲಯದ ಅತೀದೊಡ್ಡ ಬ್ಯಾಂಕ್ ಎಚ್ ಡಿಎಫ್ ಸಿ ಬ್ಯಾಂಕ್ ದೊಡ್ಡ ಮೊತ್ತದ ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. 2 ಕೋಟಿ ರೂ.ನಿಂದ 5 ಕೋಟಿ ರೂ. ಮೊತ್ತದ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಏರಿಕೆ ಮಾಡಲಾಗಿದೆ. ಫೆಬ್ರವರಿ 8ರಂದು ಆರ್ ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್  ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಅನೇಕ ಬ್ಯಾಂಕ್ ಗಳು ಈಗಾಗಲೇ ಎಫ್ ಡಿಗಳ ಮೇಲಿನ ಬಡ್ಡಿದರ ಏರಿಕೆ ಮಾಡಿವೆ. ಅದೇರೀತಿ ಎಚ್ ಡಿಎಫ್ ಸಿ ಕೂಡ ಬಡ್ಡಿದರ ಹೆಚ್ಚಳ ಮಾಡಿದೆ. ಏಳು ದಿನಗಳಿಂದ ಹಿಡಿದು 10 ವರ್ಷಗಳ ನಡುವಿನ ಅವಧಿಯ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ  ಎಚ್ ಡಿಎಫ್ ಸಿ ಬ್ಯಾಂಕ್ ಇನ್ನು ಮುಂದೆ ಶೇ.4.75 ರಿಂದ ಶೇ. 7 ಬಡ್ಡಿದರ ನೀಡಲಿದೆ. ಇನ್ನು ಹಿರಿಯ ನಾಗರಿಕರಿಗೆ ಶೇ. 5.25 ರಿಂದ ಶೇ.7.75 ಬಡ್ಡಿದರ ನೀಡಲಿದೆ. ಈ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕಿನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ಹೊಸ ಬಡ್ಡಿದರವು ಈ ತಿಂಗಳ 17ರಿಂದಲೇ ಜಾರಿಗೆ ಬಂದಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಪ್ರಸ್ತುತ  7 ರಿಂದ 29 ದಿನಗಳ ಅವಧಿಯ ದೊಡ್ಡ ಮೊತ್ತದ ಸ್ಥಿರ ಠೇವಣಿಗಳ ಮೇಲೆ ಶೇ.4.75ರಷ್ಟು ಬಡ್ಡಿ ನೀಡುತ್ತಿದೆ. ಇನ್ನು 30 ರಿಂದ 45 ದಿನಗಳ ಅವಧಿಯ ದೊಡ್ಡ ಮೊತ್ತದ ಎಫ್ ಡಿಗಳ ಮೇಲೆ ಶೇ.5.50 ಬಡ್ಡಿ ನೀಡುತ್ತಿದೆ.  46 ರಿಂದ 60 ದಿನಗಳ ಅವಧಿಗೆ ಶೇ. 5.75 ಹಾಗೂ 61ರಿಂದ 89 ದಿನಗಳ ಅವಧಿಗೆ ಶೇ. 6 ಬಡ್ಡಿ ನೀಡುತ್ತಿದೆ. 

Tap to resize

Latest Videos

ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಇಪಿಎಫ್ ಸದಸ್ಯರಿಗೆ ಅವಕಾಶ; ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಮಾಹಿತಿ

90 ದಿನಗಳಿಂದ 6 ತಿಂಗಳ ಅವಧಿಯ ಎಫ್ ಡಿಗಳಿಗೆ ಈಗ ಶೇ.6.50 ಬಡ್ಡಿ ಸಿಗುತ್ತಿದೆ. ಇನ್ನು 6 ತಿಂಗಳು  1 ದಿನದಿಂದ 9 ತಿಂಗಳ ಮೆಚ್ಯೂರಿಟಿ ಅವಧಿ ಹೊಂದಿರುವ ಎಫ್ ಡಿಗಳ ಮೇಲೆ ಶೇ.6.65 ಬಡ್ಡಿ ವಿಧಿಸಲಾಗುತ್ತಿದೆ.  9 ತಿಂಗಳು 1 ದಿನದಿಂದ 1 ವರ್ಷ ಅವಧಿಯ ದೊಡ್ಡ ಮೊತ್ತದ ಎಫ್ ಡಿಗಳ ಮೇಲೆ ಶೇ.6.75 ಬಡ್ಡಿ ವಿಧಿಸಲಾಗುತ್ತಿದೆ. ಹಾಗೆಯೇ ಒಂದು ವರ್ಷದಿಂದ 15 ತಿಂಗಳು ಮೆಚ್ಯೂರಿಟಿ ಅವಧಿ ಹೊಂದಿರುವ ಎಫ್ ಡಿಗಳ ಮೇಲೆ ಶೇ.7 ಬಡ್ಡಿದರ ನೀಡಲಾಗುತ್ತಿದೆ. ಇನ್ನು 15 ತಿಂಗಳಿಂದ 2 ವರ್ಷಗಳ ಅವಧಿಯ ಎಫ್ ಡಿ ಬಡ್ಡಿದರ ಶೇ.7.15  ಹಾಗೂ 2 ವರ್ಷ 1 ದಿನದಿಂದ 10 ವರ್ಷಗಳ ಅವಧಿ ಎಫ್ ಡಿ ಮೇಲಿನ ಬಡ್ಡಿದರ ಶೇ.7.

ಹಿರಿಯ ನಾಗರಿಕರಿಗೆ ಹೆಚ್ಚುವರಿ ಬಡ್ಡಿ
ಈ ಮೇಲೆ ತಿಳಿಸಿದ ಸಾಮಾನ್ಯ ಬಡ್ಡಿದರದ ಮೇಲೆ ಶೇ.0.50 ಹೆಚ್ಚುವರಿ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ಎಚ್ ಡಿಎಫ್ ಸಿ ಬ್ಯಾಂಕ್ ನೀಡುತ್ತದೆ. 7 ದಿನಗಳಿಂದ ಹಿಡಿದು 5 ವರ್ಷಗಳ ಅವಧಿಯ ಹಿರಿಯ ನಾಗರಿಕರ ಎಫ್ ಡಿಗೆ ಈ ದರ ಅನ್ವಯಿಸುತ್ತದೆ.  ಕನಿಷ್ಠ 60 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರು ಹಾಗೂ ನಿವೃತ್ತ ಉದ್ಯೋಗಿಗಳು ಈ ಹೆಚ್ಚುವರಿ ಬಡ್ಡಿದರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. 

SBI Alert:ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದಿದ್ರೆ ಎಚ್ಚರ, ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡ್ಬೇಡಿ!

ಹಿರಿಯ ನಾಗರಿಕರ ಕಾಳಜಿ ಎಫ್ ಡಿ 
2020ರ ಮೇ 18ರಿಂದ 2023ರ ಮಾರ್ಚ್ 31ರ ಅವಧಿಯ ಹಿರಿಯ ನಾಗರಿಕರಿಗೆ ರೂಪಿಸಿರುವ ಎಚ್ ಡಿಎಫ್ ಸಿ ಬ್ಯಾಂಕಿನ ವಿಶೇಷ ಠೇವಣಿ ಯೋಜನೆಯಾದ ಹಿರಿಯ ನಾಗರಿಕರ ಕಾಳಜಿ ಎಫ್ ಡಿ ಮೇಲೆ ಹಿರಿಯ ನಾಗರಿಕರಿಗೆ ನೀಡುವ ಹೆಚ್ಚುವರಿ ಶೇ.0.50 ಬಡ್ಡಿದರದ ಮೇಲೆ ಮತ್ತೆ 0.25 ಹೆಚ್ಚುವರಿ ಬಡ್ಡಿ ನೀಡಲಾಗುವುದು. ಇದು 5 ಕೋಟಿ ರೂ.ಗಿಂತ ಕಡಿಮೆ ಮೊತ್ತದ 5 ವರ್ಷ 1ದಿನದಿಂದ 10 ವರ್ಷಗಳ ಅವಧಿಯ ಎಫ್ ಡಿಗೆ ಮಾತ್ರ ಅನ್ವಯಿಸುತ್ತದೆ. 
 

click me!