ವಿಶ್ವದ ಘಟಾನುಘಟಿ ಶ್ರೀಮಂತರನ್ನು ಹಿಂದಿಕ್ಕಿರುವ ಭಾರತದ ಉದ್ಯಮಿ ಗೌತಮ್ ಅದಾನಿ, ಇದೀಗ ವಿಶ್ವದಲ್ಲೇ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಬ್ಲೂಮ್‌ಬರ್ಗ್ ಬಿಲೆನಿಯರ್ಸ್ ಇಂಡೆಕ್ಸ್ ಪಟ್ಟಿಯಲ್ಲಿ ಅದಾನಿ ಆದಾಯ ಗಳಿಕೆ ಮುಂದೆ ವಿಶ್ವದ ಸಿರಿವಂತರು ಡಲ್ಲಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ನವದೆಹಲಿ(ಮಾ.12): ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಟೆಸ್ಲಾ ಸಿಇಒ ಹಾಗೂ ಸಹ ಸಂಸ್ಥಾಪಕ ಎಲನ್ ಮಸ್ಕ್, ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಮುಂದೆ ಡಲ್ಲಾಗಿದ್ದಾರೆ. ಸಂಪತ್ತು ಸೃಷ್ಟಿಯಲ್ಲಿ ಗೌತಮ್ ಅದಾನಿ ಇದೀಗ ಅಗ್ರಸ್ಥಾನಕ್ಕೆ ತಲುಪಿದ್ದಾರೆ.
ಹುರನ್ ವಿಶ್ವ ಶ್ರೀಮಂತರ ಪಟ್ಟಿ: 6.09 ಲಕ್ಷ ಕೋಟಿ ಸಂಪತ್ತು ಹೊಂದಿರುವ ಅಂಬಾನಿಗೆ 8ನೇ ಸ್ಥಾನ!
undefined
2021ರ ಆರ್ಥಿಕ ವರ್ಷದಲ್ಲಿ ಅತೀ ಹೆಚ್ಚು ಸಂಪತ್ತು ಸಂಪಾದಿಸಿದವರ ಪಟ್ಟಿಯಲ್ಲಿ ಅದಾನಿ ಮೊದಲ ಸ್ಥಾನದಲ್ಲಿದ್ದಾರೆ. ಅದಾನಿ ಉದ್ಯಮಿಗಳು ಕ್ಷಿಪ್ರಗತಿಯಲ್ಲಿ ಉದ್ಯಮ ವಿಸ್ತರಣೆ ಮಾಡುತ್ತಿದೆ. ಇತರ ಸಿರಿವಂತರ ಉದ್ಯಮಕ್ಕೆ ಹೋಲಿಸಿದರೆ ಅದಾನಿ ಉದ್ಯಮಗಳು ಸಂಪತ್ತು ಸಷ್ಠಿಯಲ್ಲಿ ಶೇಕಡಾ 50 ರಷ್ಟು ಏರಿಕೆ ಕಂಡಿದೆ.
ಒಂದು ಟ್ವೀಟ್ ಮಾಡಿ 8800 ಕೋಟಿ ರು. ಕಳೆದುಕೊಂಡ ಮಸ್ಕ್!
ಅದಾನಿ 2021ರ ಆರಂಭದಲ್ಲಿ 1620 ಕೋಟಿ ಅಮೆರಿಕನ್ ಡಾಲರ್ ಸಂಪತ್ತು ಇದೀಗ 5,000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಕಡಿಮೆ ಅವಧಿಯಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಸಂಪತ್ತು ಸೇರ್ಪಡೆಗೊಳಿಸಿದ ಪಟ್ಟಿಯಲ್ಲಿ ಅದಾನಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಅದಾನಿ ಹತ್ತಿರ ಯಾವ ಸಿರಿವಂತರೂ ಈ ಸ್ಪೀಡ್ ಸಂಪತ್ತು ಸೇರ್ಪಡೆಗೊಳಿಸಲು ಸಾಧ್ಯವಾಗಿಲ್ಲ.
ಅಡು ಮುಟ್ಟದ ಸೊಪ್ಪಿಲ್ಲ ಅದಾನಿ ಕೈಹಾಕದ ಉದ್ಯಮವಿಲ್ಲ ಅನ್ನೋದು ಸರಿಯಾಗಿದೆ. ಕಾರಣ ಕಲ್ಲಿದ್ದಲ್ಲು, ವಿದ್ಯುತ್, ಬಂದರು, ಡೇಟಾ ಸೆಂಟರ್, ವಿಮಾನ ನಿಲ್ದಾಣ, ಗ್ಯಾಸ್ ಮಾರ್ಕೆಟಿಂಗ್ ಸೇರಿದಂತೆ ಬಹುತೇಕ ಕ್ಷೇತ್ರದಲ್ಲಿ ಅದಾನಿ ಪ್ರಾಬಲ್ಯ ಸಾಧಿಸಿದ್ದಾರೆ. ಅದಾನಿ ಬಹುತೇಕ ಎಲ್ಲಾ ಕಂಪನಿಗಳು ಆದಾಯ ಗಳಿಕೆಯಲ್ಲಿ ಪ್ರಗತಿ ವಿಶ್ವದ ಸಿರಿವಂತರನ್ನೇ ಅಚ್ಚರಿಗೊಳಿಸಿದೆ