ಚಾವಣಿಯಲ್ಲಿ ಬಿರುಕು ಮತ್ತ ನೀರು ಸೋರಿಕೆಗೆ ಏನು ಮಾಡಬೇಕು?

By Suvarna NewsFirst Published Mar 12, 2021, 10:24 AM IST
Highlights

ಮನೆ ಕಟ್ಟುವುದು ಮಾತ್ರವಲ್ಲ, ಅದನ್ನು ಮೆಂಟೈನ್ ಮಾಡುವುದೂ ಅಷ್ಟು ಸುಲಭದ ವಿಷಯವಿಲ್ಲ. ಸ್ವಲ್ಪ ದುಡ್ಡು ಉಳಿಸಬಹುದು ಅಂತ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಇಡೀ ಮನೆಯ ಸೌಂದರ್ಯವನ್ನೇ ಹಾಳುಗೆಡಬಹುದು. ಅದರಲ್ಲಿ ವಿಶೇಷವಾಗಿ ಗೋಡೆ ಹಾಗೂ ಚಾವಣಿಗೆ ಸುಮ್ಮನೆ ಪೇಂಟ್ ಹೊಡೆಸಿ ಬಿಟ್ಟರೆ ಲೀಕೇಜ್ ಆಗೋದು ಗ್ಯಾರಂಟಿ. ಅದಕ್ಕೇನು ಪರಿಹಾರ? ಇಲ್ಲಿದೆ ಓದಿ...

ಮನೆಯ ಗೋಡೆ ಹಾನಿಗೊಂಡು, ನೀರು ಸೋರುವಂತಾಗಿ ಮನೆಯ ಸೌಂದರ್ಯ ಹಾಳಾಗುವುದ ನೋಡುವುದು ಮದ್ಯ ವಯಸ್ಸಿನ ಬಿಕ್ಕಟ್ಟು. ಹಗಲು ರಾತ್ರಿ ದುಡಿದ ಹಣವನ್ನು ವ್ಯಯಿಸಿ, ಬೆವರು ಸುರಿಸಿ ಕಟ್ಟಿಕೊಂಡ ಮನೆ ಈ ರೀತಿ ಹಾಳಾಗುತ್ತಿರುವುದನ್ನು ನೋಡಲು ಯಾವ ಮನೆ ಮಾಲೀಕನಿಗಾದರೂ ಹೊಟ್ಟೆ ಉರಿಯುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಇದು ಮನುಷ್ಯನ ನಿದ್ರೆಯನ್ನೇ ಕಸಿಯುತ್ತದೆ. ಮನೆಯೊಳಗೆ ಹಾಗೂ ಹೊರಗನ್ನು ಗಟ್ಟಿಮುಟ್ಟಾಗಿಟ್ಟು, ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ನೀರು ಸೋರುತ್ತಿದೆ ಎಂದರೆ ಮನೆಗೆ ಹಾನಿಯಾಗಿದೆ ಎಂದರ್ಥ. ಇದಕ್ಕೆ ಹೆದರುವ ಆಗತ್ಯವಿಲ್ಲ. ಇದನ್ನು ಸುಲಭವಾಗಿ ರಿಪೇರಿ ಮಾಡಿಸಬಹುದು ಎಂಬುವುದು ಸಂತೋಷದ ಸುದ್ದಿ. ಮನೆ ಗೋಡೆ ಮತ್ತು ತಾರಸಿಯಲ್ಲಿ ಬಿರುಕು ಸೃಷ್ಟಿಯಾಗಿ ನೀರು ಸೋರದಂತೆ ಮಾಡಲು ಇಲ್ಲಿವೆ ಪರಿಹಾರೋಪಾಯಗಳು.

ಹಾಳಾಗುವ ಗೋಡೆಗೆ ಯಾವುದು ಬೆಸ್ಟ್?

1. ಆದ ಹಾನಿ ಹಾಗೂ ಅದಕ್ಕೆ ಕಾರಣ ಕಂಡು ಕೊಳ್ಳಿ: ಮನೆಗಾದ ಹಾನಿಯ ವಿಸ್ತಾರ ಮತ್ತು ಅದಾಗಲೂ ಮೂಲ ಕಾರಣವೇನೆಂಬುದನ್ನು ಕಂಡುಕೊಳ್ಳಿ. ಸಾಮಾನ್ಯವಾಗಿ ಚಾವಣಿಯಲ್ಲಾದ ಬಿರುಕೇ ನೀರು ಸೋರಿಕೆಗೆ ಪ್ರಮುಖ ಕಾರಣ. ಚಾವಣಿ ಮನೆಯ ಪ್ರಮುಖ ಭಾಗವಾಗಿದ್ದು, ಹವಾಮಾನ ವೈಪರಿತ್ಯಕ್ಕೆ ಹಾಗೂ ನಿಲ್ಲುವ ನೀರಿನ ಕಾರಣಕ್ಕೆ ಬೇಗ ಹಾನಿಗೊಳಗಾಗುತ್ತದೆ. ಆದ್ದರಿಂದ ಹಾನಿಯಾಗಲು ಏನು ಕಾರಣ ಮತ್ತು ಇದರ ಮೂಲ ಏನೆಂಬುದನ್ನು ಕಂಡುಕೊಳ್ಳಲು ತಜ್ಞರ ನೆರವು ಪಡೆಯುವುದು ಅನಿವಾರ್ಯ. ಗೋಡೆ ಮತ್ತು ಚಾವಣಿಗಾದ ಹಾನಿಯ ತೀವ್ರತೆಯನ್ನಾಧರಿಸಿ ಏನು ಮಾಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಅಕಸ್ಮಾತ್ ತೀವ್ರ ಆಳವಾಗಿದ್ದರೆ ತಜ್ಞರ ನೆರವಿನಿಂದ ಸೂಕ್ತ ವಾಟರ್ ಫ್ರೂಫ್ ಚಿಕಿತ್ಸೆ ಕೊಡಿಸುವುದು ಅನಿವಾರ್ಯವಾಗುತ್ತದೆ. 

ಹಾಳಾಗುವ ಗೋಡೆಗೆ ಪೇಂಟ್  ಸಾಕಾ? ವಾಟರ್ ಪ್ರೂಫ್ ಬೇಕಾ?

2. ಚಾವಣೆಯಲ್ಲಾಗುವ ನೀರಿನ ಸೋರಿಕೆಗೆ ಮೂಲ ಕಂಡು ಕೊಳ್ಳಿ: ಎಷ್ಟು ಹಾನಿಯಾಗಿದೆ ಎಂಬುದನ್ನು ಕಂಡು ಕೊಂಡ ನಂತರ, ಯಾವ ರೀತಿ ರಿಪೇರಿ ಮಾಡಿಸಬೇಕು ಎಂಬುದನ್ನು ನಿರ್ಧರಿಸಬೇಕು. ಮೊದಲು ನೀರು ಸೋರಿಕೆಯಾಗಲು ಕಾರಣ ಕಂಡು ಹಿಡಿಯಬೇಕು. ಪೈಪಿನಲ್ಲಿ ನೀರು ಕಟ್ಟಿಕೊಂಡೋ, ಚಾವಣಿ ಕುಸಿದೋ, ಮಳೆ ನೀರು ಕುಯ್ಲಿನಿಂದ ಹೆಚ್ಚು ಆರ್ದತೆ ಸೃಷ್ಟಿಯಾಗಿಯೋ ಅಥವಾ ಗೋಡೆಯ ಹಿಗ್ಗುವ ಅಥವಾ ಸಂಕೋಚನ ಗುಣದಿಂದ ಹಾನಿಯಾಗಿದೆಯಾ ಎಂಬುದನ್ನು ಮೊದಲು ಪತ್ತೆ ಮಾಡಿಕೊಳ್ಳಬೇಕು. ಚಾವಣಿಯಲ್ಲಿ ಅಗತ್ಯ ಸ್ಲೋಪ್ ಇದ್ಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಇದು ನೀರು ನಿಲ್ಲದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆ ಸೋರಿಕೆಗೆ ಹಾಗೂ ಕಲೆಯಾಗಲು ಟೆರಾಸ್‌ನಲ್ಲಿ ನಿಲ್ಲುವುದು ಪ್ರಮುಖ ಕಾರಣ. ಬಿರುಕು ಅಥವಾ ತೂತು ಬೀಳುವುದು ನೀರಿನ ಸೋರಿಕೆಗೆ ಮುಖ್ಯ ಕಾರಣವಾಗಿರುತ್ತದೆ. ಇದನ್ನು ಮೊದಲು ಪತ್ತೆ ಮಾಡಿಕೊಳ್ಳಬೇಕು.  

3.ಚಾವಣಿಗೆ ತಜ್ಞರ ವಾಟರ್ ಫ್ರೂಫ್ ಪರಿಹಾರ: ಒಮ್ಮೆ ಸೋರಿಕೆಯಾದ ಟೆರಾಸ್ ಸ್ವರೂಪವನ್ನು ಮೊದಲು ಸುವ್ಯವಸ್ಥಿತ ರೂಪಕ್ಕೆ ತರಬೇಕು. ಡಾ ಫಿಕ್ಸಿಟ್ ರೂಫ್‌ಸೀಲ್‌ ಬಳಸಿ ಸರಿಪಡಿಸಿಕೊಳ್ಳುವುದು ಅತ್ಯುತ್ತಮ ಪರಿಹಾರ. ಪಿಯು ಹೈಬ್ರಿಡ್ ಕೋಟಿಂಗ್‌ನಿಂದ ಉತ್ಪಾದಿಸಿದ ಈ ಉತ್ಪನ್ನವನ್ನು ನ್ಯಾನೋ ಫೈಬರ್ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ದಪ್ಪನೆಯ ಕೋಟಿಂಗ್ ನೀಡಬಲ್ಲ ಇದು ಗೋಡೆ ಹಾಗೂ ತಾರಸಿಯ ಬಿರುಕನ್ನು ಶಾಶ್ವತವಾಗಿ ಮುಚ್ಚಬಹುದು. ನೀರು ಎಂದಿಗೂ ಸೋರದಂತೆ ಇದು ತಡೆಯುತ್ತದೆ. ಬೇಸಿಗೆಯಲ್ಲಿ ಶಾಖವನ್ನು ಹೀರಿಕೊಳ್ಳದೇ ಮನೆಯನ್ನು ತಂಪಾಗಿ ಇರಿಸುವುದು ಈ ವಾಟರ್ ಪ್ರೂಫ್ ಟ್ರೀಟ್ಮೆಂಟ್‌ನ ಮೌಲ್ಯ ಹೆಚ್ಚಿಸುವ ಮತ್ತೊಂದು ಗುಣ.
 

click me!