
ನವದೆಹಲಿ (ಮಾ.12): ಬ್ಯಾಂಕಿಂಗ್ ವಲಯವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಸಂಘಟನೆ ಮಾರ್ಚ್ 15 ಮತ್ತು 16 ರಂದು 2 ದಿನ ರಾಷ್ಟ್ರೀಯ ಬಂದ್‌ಗೆ ಕರೆ ನೀಡಿವೆ.
ಮಾರ್ಚ್ 13 ಮತ್ತು ಮಾರ್ಚ್ 14 ಶನಿವಾರ, ಭಾನುವಾರ ಬ್ಯಾಂಕ್ ರಜೆ ಇದ್ದು ಅದರ ಮಾರನೇ ದಿನದಿಂದಲೇ 2 ದಿನಗಳ ಬ್ಯಾಂಕ್ ನೌಕರರ 9 ಒಕ್ಕೂಟಗಳನ್ನು ಒಳಗೊಂಡ ಯುಎಫ್ಬಿಯು ಸಂಘಟನೆಯ ಪ್ರತಿಭಟನೆಯಿಂದ ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ಎಫ್‌ಡಿಐ ಮಿತಿ ಶೇ.74ಕ್ಕೆ ಹೆಚ್ಚಿಸಲು ಸಂಪುಟ ಅಸ್ತು! ..
ಬಂಡವಾಳ ಹಿಂತೆಗೆತದ ಭಾಗವಾಗಿ 2 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ 2021 - 22 ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.