
ಮದ್ರಾಸ್ [ಜೂನ್ 18] ಆಟೋ ಮೊಬೈಲ್ಸ್ ಉದ್ಯಮದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ಜನರಲ್ ಮೋಟಾರ್ಸ್ ನ ಸಿಎಫ್ ಓ ಆಗಿ ತಮಿಳುನಾಡು ಮೂಲದ ದಿವ್ಯಾ ಸೂರ್ಯದೇವರಾ ಅಧಿಕಾರ ವಹಿಸಿಕೊಂಡಿದ್ದು ಅವರ ಜೀವನದ ಹಾದಿಯನ್ನು ಒಮ್ಮೆ ನೋಡಲೇಬೇಕು. ಜನರಲ್ ಮೋಟಾರ್ಸ್‌ನಂಥ ದಿಗ್ಗಜ ಆಟೊಮೊಬೈಲ್ ಕಂಪನಿಯಲ್ಲಿ ಸಿಇಒ ಹಾಗೂ ಸಿಎಫ್‌ಒ ಇಬ್ಬರೂ ಮಹಿಳೆಯರಾಗಿರುವುದು ಇದೇ ಮೊದಲು.
ಹಾರ್ವರ್ಡ್ ವಿವಿಯಿಂದ ಬಿಜಿನಸ್ ಡಿಗ್ರಿ ಪಡೆದುಕೊಂಡ ದಿವ್ಯಾ ತಾಯಿಯ ಮಗಳಾಗಿಯೇ ಬೆಳೆದವರು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡ ದಿವ್ಯಾ ಮತ್ತು ಸೇರಿದಂತೆ ಮೂವರು ಹೆಣ್ಣು ಮಕ್ಕಳನ್ನು ಆಕೆಯೇ ತಾಯಿಯೇ ಬೆಳೆಸಿದ್ದರು. ಮದ್ರಾಸ್ ನಲ್ಲಿ ಶಿಕ್ಷಣ ಪಡೆದು ಹೆಚ್ಚಿನ ಶಿಕ್ಷಣಕ್ಕೆ ವಿದೇಶಕ್ಕೆ ತೆರಳಿದ ದಿನಗಳನ್ನು ದಿವ್ಯಾ ಇಂದಿಗೂ ಮೆಲುಕು ಹಾಕಿತ್ತಾರೆ.
ಜನರಲ್ ಮೋಟರ್ಸ್ ಗೆ ಸಿಎಫ್ ಓ ಆಗಿ ಭಾರತದ ದಿವ್ಯಾ ನೇಮಕ
ತಮ್ಮ 22ನೇ ವಯಸ್ಸಿನಲ್ಲಿ ವಿದೇಶಕ್ಕೆ ತೆರಳಿದ ವೇಳೆ ಹಣ ಹೊಂದಿಸಿದ ಕತೆಯನ್ನು ದಿವ್ಯಾ ಹೇಳುತ್ತಾರೆ. ಅಧ್ಯಯನಕ್ಕೆ ಬೇಕಾದ ಎಲ್ಲ ಹಣವನ್ನು ಸ್ಟೂಡೆಂಟ್ ಲೋನ್ ನಿಂದಲೇ ಪಡೆದುಕೊಳ್ಳಬೇಕಾಗಿತ್ತು. ಅದನ್ನು ತೀರಿಸುವ ಜವಾಬ್ದಾರಿಯೂ ನನ್ನ ಮೇಲೆಯೇ ಇತ್ತು. ಆದರೆ ಇಂದು ಎಲ್ಲವೂ ಸಾಧ್ಯವಾಗಿದೆ ಎಂದು ಹೇಳುತ್ತಾರೆ.
ಕಂಪನಿಯ ಕಾರ್ಪೋರೇಟ್ ಫೈನಾನ್ಸ್ ನ ಉಪಾಧ್ಯಕ್ಷರಾಗಿ 2017ರ ಜುಲೈ ವರೆಗೆ ಕೆಲಸ ಮಾಡಿದ್ದರು. ಇದಲ್ಲದೇ ಸಾಫ್ಟ್ ಬ್ಯಾಂಕ್ ಸೇರಿದಂತೆ ಹತ್ತಾರು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ದಿವ್ಯಾ ಅವರಿಗಿದೆ. ಇನ್ನು ಮುಂದೆ ದಿವ್ಯಾ ಜನರಲ್ ಮೋಟಾರ್ಸ್ ಸಿಎಫ್ ಓ ಆಗಿ ಮುಂದುವರಿಯಲಿದ್ದು ಭಾರತ ಸೇರಿದಂತೆ ಹಲವಾರು ಕಡೆಯಿಂದ ಅಭಿನಂದನೆಗಳು ಹರಿದು ಬಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.