ಜನರಲ್ ಮೋಟರ್ಸ್ ಗೆ ಸಿಎಫ್ ಓ ಆಗಿ ಭಾರತದ ದಿವ್ಯಾ ನೇಮಕ..!

Published : Jun 15, 2018, 06:46 PM IST
ಜನರಲ್ ಮೋಟರ್ಸ್ ಗೆ ಸಿಎಫ್ ಓ ಆಗಿ ಭಾರತದ ದಿವ್ಯಾ ನೇಮಕ..!

ಸಾರಾಂಶ

ಜನರಲ್ ಮೋಟಸರ್ಸ್ ಗೆ ಭಾರತೀಯ ಸಂಜಾತೆ ಸಿಎಫ್‌ಓ ಚೆನೈ ಮೂಲದ ದಿವ್ಯಾ ಸೂಯರ್ಯದೇವರ ಸಿಎಫ್‌ಓ ಆಗಿ ನೇಮಕ ಆಟೋಮೊಬೈಲ್ ಕ್ಷೇತ್ರದ ಮೊದಲ ಮಹಿಳಾ ಸಿಎಫ್‌ಓ  

ಬೆಂಗಳೂರು(ಜೂ.15): ಅಮೆರಿಕದ ಪ್ರಸಿದ್ಧ 'ಜನರಲ್ ಮೋಟಾರ್ಸ್‌'ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಇಂಡೋ- ಅಮೆರಿಕನ್ ಮಹಿಳೆ ದಿವ್ಯಾ ಸೂರ್ಯದೇವರ ಆಯ್ಕೆಯಾಗಿದ್ದಾರೆ. ಪ್ರಸಕ್ತ  ಕಂಪನಿಯ ಕಾರ್ಪೋರೇಟ್‌ ಫೈನಾನ್ಸ್‌ನ ಉಪಾಧ್ಯಕ್ಷರಾಗಿ ದಿವ್ಯಾ ಕಾರ್ಯನಿರ್ವಹಿಸುತ್ತಿದ್ದರು. 
  
ಇನ್ನು ಕಲವೇ ದಿನಗಳಲ್ಲಿ ಜನರಲ್‌ ಮೋಟಾರ್ಸ್‌ ಎಸ್‌&ಪಿ ಯ ಟಾಪ್‌ 500 ಕಂಪನಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ.   ಹರ್ಷೆ & ಅಮೆರಿಕನ್‌ ವಾಟರ್‌ ವರ್ಕ್ಸ್‌‌ ಕಂಪನಿಯಲ್ಲೂ ಮಹಿಳಾ ಸಿಇಒ ಹಾಗೂ ಸಿಎಫ್‌ಒಗಳಿದ್ದು, ಈ ಕಂಪನಿಗಳು ಟಾಪ್‌ 500 ರಲ್ಲಿ ಸ್ಥಾನ ಪಡೆದುಕೊಳ್ಳಲಿವೆ. 

ಚೆನ್ನೈನ ಮೂಲದವರಾದ  ದಿವ್ಯಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿ, ನಂತರ ತಮ್ಮ 22ನೇ ವರ್ಷದಲ್ಲಿ ಅಮೆರಿಕಾಕ್ಕೆ ತೆರಳಿ ಅಲ್ಲಿನ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಪಡೆದಿದ್ದಾರೆ. ದಿವ್ಯಾ ಚಾರ್ಟರ್ಡ್ ಫೈನಾನ್ಷಿಯಲ್ ಅನಲಿಸ್ಟ್ ಮತ್ತು ಅಕೌಂಟೆಂಟ್ ಆಗಿಯೂ ಕಾರ್ಯನಿರ್ವಹಣೆ ಮಾಡಿದ ಅನುಭವ ಹೊಂದಿದ್ದಾರೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Share Market: ರಿಲಯನ್ಸ್ ಷೇರಿನ ಹೆಸರಲ್ಲಿ ಬೆಂಗಳೂರು ಉದ್ಯಮಿಗೆ ₹8 ಕೋಟಿ ವಂಚನೆ!
ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌: ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!