
ಮುಂಬೈ(ಮಾ.19) ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಭಾರತೀಯ ಉದ್ಯಮಿಗಳಿದ್ದಾರೆ. ಆದರೆ ಅಂಬಾನಿ, ಅದಾನಿ ಸೇರಿದಂತೆ ಇತರರು ಈ ಪಟ್ಟಿಗೆ ಸೇರುವ ಮೊದಲೇ ಶ್ರೀಮಂತರ ಪಟ್ಟಿಯಲ್ಲಿ ರೇಮೆಂಡ್ ಕಂಪನಿಯ ವಿಜಯಪತ್ ಸಿಂಘಾನಿಯಾ ಅಲಂಕರಿಸಿದ್ದರು. ರಿಲಯನ್ಸ್ ಗ್ರೂಪ್, ಅದಾನಿ ಗ್ರೂಪ್ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿದ್ದರು, ವಿಜಯಪತ್ ಸಿಂಘಾನಿಯಾ ಮಟ್ಟಕ್ಕೆ ಬೆಳೆದಿರಲಿಲ್ಲ. ತಂದೆ ಜೊತೆ ರೇಮೆಂಡ್ ಜವಳಿ ಹಾಗೂ ಉಡುಪು ಕಂಪನಿ ಆರಂಭಿಸಿದ್ದ ವಿಜಯಪತ್ ಸಿಂಘಾನಿಯಾ ಭಾರತದ ಅತೀ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ್ದರು. ಆದರೆ ಇದೀಗ ವಿಜಯಪತ್ ಸಿಂಘಾನಿಯಾ ಬಳಿ ಏನೂ ಇಲ್ಲ. ಬಾಡಿಗೆ ಮನೆಯಲ್ಲಿ ದಿನ ದೂಡುತ್ತಿದ್ದಾರೆ.
ಹಾಗಂತ ರೇಮೆಂಡ್ ಕಂಪನಿಗೆ ಯಾವುದೇ ಸಮಸ್ಸೆಯಾಗಿಲ್ಲ. ರೇಮೆಂಡ್ ಕಂಪನಿಯ ಮೌಲ್ಯ ಈಗ ಸರಿಸುಮಾರು 12 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು. ರೇಮಂಡ್ ಕಂಪನಿಯನ್ನು ವಿಜಯಪತ್ ಸಿಂಘಾನಿಯ ಪುತ್ರ ಗೌತಮ್ ಸಿಂಘಾನಿಯಾ ನೋಡಿಕೊಳ್ಳುತ್ತಿದ್ದಾರೆ. ತಾವೇ ಖುದ್ದಾಗಿ ಗೌತಮ್ ಸಿಂಘಾನಿಯಾಗೆ ಅಧ್ಯಕ್ಷ ಪಟ್ಟ ಕಟ್ಟಿದ್ದರು. ಹೀಗಿದ್ದರೆ ವಿಜಯಪತ್ ಸಿಂಘಾನಿಯಾ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದ್ದು ಹೇಗೆ?
ರೇಮಂಡ್ ಗ್ರೂಪ್‌ನ ಅಧ್ಯಕ್ಷನಿಗೆ ಕಂಟಕವಾದ ವಿಚ್ಛೇದನ, ಕಂಪೆನಿಯಲ್ಲಿ ಮರುನೇಮಕಕ್ಕೆ ವಿರೋಧ
ರೇಮೆಂಡ್ ಜವಳಿ ಉಡುಪು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿಬೆಳೆಸಿದ ಕೀರ್ತಿ ವಿಜಯಪತ್ ಸಿಂಘಾನಿಯಾಗೆ ಸಲ್ಲಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ರೇಮೆಂಡ್ ಪ್ರತಿಷ್ಠಿತ ಬ್ರ್ಯಾಂಡ್ ಆಗಿ ಹೊರಹೊಮ್ಮಿದ್ದು, ವಿಜಯಪತ್ ಸಿಂಘಾನಿಯಾ ಕಾಲದಲ್ಲಿ. 2015ರ ವರೆಗೆ ಕುಟುಂಬದಲ್ಲಿ ಕೆಲ ಸಮಸ್ಸೆಗಳಿದ್ದರೂ ವಿಜಯಪತ್ ಸಿಂಘಾನಿಯಾಗೆ ಆತಂಕ ಎದುರಾಗಿರಲಿಲ್ಲ. ಆದರೆ 2015ರಲ್ಲಿ ವಿಜಯಪತ್ ಸಿಂಘಾನಿಯಾ ರೇಮೆಂಡ್ ಗ್ರೂಪ್ ಕಂಪನಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಬಳಿಕ ಇಬ್ಬರು ಪುತ್ರರರಲ್ಲಿ ಒಬ್ಬರಾದ ಗೌತಮ್ ಸಿಂಘಾನಿಯಾಗೆ ಪಟ್ಟ ಕಟ್ಟಿದರು. ಎಲ್ಲಾ ಜವಾಬ್ದಾರಿಗಳನ್ನು ಗೌತಮ್ ಸಿಂಘಾನಿಯಾಗೆ ನೀಡಿದರು.
ಇದರ ಜೊತೆಗೆ ಶೇಕಡಾ 37 ರಷ್ಟು ಪಾಲನ್ನು ಗೌತಮ್ ಸಿಂಘಾನಿಯಾಗೆ ನೀಡಿದರು. ಆದರೆ 2017ರ ವೇಳೆಗೆ ಸಿಂಘಾನಿಯಾ ಕುಟುಂಬದಲ್ಲಿ ತೀವ್ರ ಬಿರುಕು ಮೂಡಿತ್ತು. ಗೌತಮ್ ಸಿಂಘಾನಿಯಾ ಹಾಗೂ ತಂದೆ ವಿಜಯಪತ್ ಸಿಂಘಾನಿಯಾ ಒಡಕು ತಾರಕಕ್ಕೇರಿತ್ತು. ರೇಮೆಂಡ್ ಲಿಮಿಟೆಡ್‌ನಲ್ಲಿರುವ ಜೆಕೆ ಹೌಸ್ ಮನೆಯನ್ನು ವಿಜಯಪತ್ ಸಿಂಘಾನಿಯಾಗೆ ನೀಡಲು ಪುತ್ರ ಗೌತಮ್ ಸಿಂಘಾನಿಯಾ ನಿರಾಕರಿಸಿದರು. 2018ರಲ್ಲಿ ವಿಜಯಪತ್ ಸಿಂಘಾನಿಯಾ ಅವರನ್ನು ರೇಮೆಂಡ್ ಗ್ರೂಪ್ ಬೋರ್ಡ್ ಸದಸ್ಯ ಸೇರಿದಂತೆ ಎಲ್ಲಾ ಹುದ್ದೆಯಿಂದ ವಜಾಗೊಳಿಸಲಾಯಿತು.
ಈ ಮೂಲಕ ವಿಜಯಪತ್ ಸಿಂಘಾನಿಯಾ ಏಕಾಂಗಿಯಾದರು. ತನ್ನಲ್ಲಿದ್ದ ಎಲ್ಲಾ ಆಸ್ತಿಗಳನ್ನು ಇಬ್ಬರು ಮಕ್ಕಳಿಗೆ ಹಂಚಿದ್ದರು. ಮತ್ತೊಬ್ಬ ಪುತ್ರ ಸಿಂಗಾಪೂರದಲ್ಲಿ ನೆಲೆಸಿದ್ದರೆ, ಇತ್ತ ಗೌತಮ್ ಸಿಂಘಾನಿಯಾ ರೇಮೆಂಡ್ ಸಾಮ್ರಾಜ್ಯದ ಒಡೆಯನಾಗಿ ಮೆರೆಯುತ್ತಿದ್ದಾರೆ. ಆದರೆ ಒಡಕಿನ ಕಾರಣ ತಂದೆಯನ್ನು ಮನೆಯಿಂದರೂ ಹೊರದಬ್ಬಲಾಯಿತು.
ತನ್ನ ರೇಮೆಂಡ್ ಕಂಪನಿ ಇಬ್ಬರು ಮಕ್ಕಳ ಪಾಲಾಯಿತು. ತನ್ನಲ್ಲಿದ್ದ ಪಾಲು, ಮನೆ, ಆಸ್ತಿಯೂ ಮಕ್ಕಳ ಕೈಸೇರಿತು. ಇದರ ಬೆನ್ನಲ್ಲೇ ಮನೆಯಿಂದ ಕೂಡ ಹೊರಬಿದ್ದರು. ಇದೀಗ 86 ವರ್ಷದ ವಿಜಯಪತ್ ಸಿಂಘಾನಿಯಾ ಬಾಡಿಗೆ ಮನೆಯಲ್ಲಿ ದಿನ ದೂಡತ್ತಿದ್ದಾರೆ. ಬ್ಯಾಂಕ್ ಖಾತೆಯಲ್ಲ ಉಳಿದಿರುವ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ರಾಜಿ ಆಗಿಲ್ಲ, ಇನ್ನೆಂದೂ ಆತನ ಮನೆಗೆ ಕಾಲಿಡೋದಿಲ್ಲ: ರೇಮಂಡ್ ಗ್ರೂಪ್ ಚೇರ್ಮನ್ ಗೌತಮ್ ಬಗ್ಗೆ ತಂದೆ ಆಕ್ರೋಶ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.