
ಮುಂಬೈ: ಗ್ರಾಹಕರು ಬ್ಯಾಂಕ್‌ಗೆ ಚೆಕ್ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್ (ಖಾತೆಗೆ ಹಣ ಜಮೆ ಮಾಡುವ) ಮಾಡುವ ವ್ಯವಸ್ಥೆ ದೇಶವ್ಯಾಪಿ ಎಲ್ಲಾ ಬ್ಯಾಂಕ್‌ಗಳಲ್ಲಿ ಅಕ್ಟೋಬರ್ 4ರಿಂದ ಜಾರಿಗೆ ಬರಲಿದೆ. ಹೀಗಾಗಿ ಚೆಕ್ ಕ್ಲಿಯರೆನ್ಸ್‌ಗೆ 2 ದಿನಗಳವರೆಗೂ ಕಾಯಬೇಕಾದ ತೊಂದರೆಗಳಿಗೆ ಶೀಘ್ರವೇ ತೆರೆ ಬೀಳಲಿದೆ.
ಪ್ರಸಕ್ತ ಬ್ಯಾಂಕ್‌ಗಳಲ್ಲಿ ಚೆಕ್ ಸಲ್ಲಿಸಿದ ಬಳಿಕ ಅದನ್ನು ಸ್ಕ್ಯಾನ್ ಮಾಡಿ, ಮುಂದಿನ ಹಂತಕ್ಕೆ ಸಲ್ಲಿಸಿ, ಅದನ್ನು ಕ್ಲಿಯರ್ ಮಾಡಲು ಕನಿಷ್ಠ 1ರಿಂದ ಗರಿಷ್ಠ 2 ದಿನ ತಗುಲುತ್ತಿತ್ತು.
ಆದರೆ ಅ.4ರಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದು, ಅದರ ಪರಿಣಾಮ ಬ್ಯಾಂಕ್‌ಗಳಿಗೆ ಚೆಕ್ಕ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಅದನ್ನು ಕ್ಲಿಯರ್ ಮಾಡಲಾಗುವುದು. ಎರಡು ಹಂತದಲ್ಲಿ ಈ ಬದಲಾವಣೆ ಜಾರಿಯಾಗಲಿದ್ದು ಈ ವರ್ಷದ ಆಕ್ಟೋಬರ್ 4 ಮತ್ತು ಮುಂದಿನ ವರ್ಷದ ಜ.3ರಿಂದ ಜಾರಿಗೆ ಬರಲಿದ್ದು, ಎಲ್ಲಾ ಬ್ಯಾಂಕುಗಳಲ್ಲಿ ಬೆ.1ರಿಂದ ಸಂಜೆ 4ರ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.
ಆಗಸ್ಟ್ 15ರಿಂದ ಎಸ್‌ಬಿಐ IMPS ಟ್ರಾನ್ಸಾಕ್ಷನ್‌ಗೆ ಶುಲ್ಕ ಅನ್ವಯ, ರಿಟೇಲ್ ಗ್ರಾಹಕರಿಗೆ ಹೊಡೆತ
ನವದೆಹಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಆಗಸ್ಟ 15 ರಿಂದ ತನ್ನ ವಹಿವಾಟು ನಿಯಮದಲ್ಲಿ ಕೆಲ ಬದಲಾವಣೆ ಮಾಡುತ್ತಿದೆ. ಪ್ರಮುಖವಾಗಿ ರಿಟೇಲ್ ಗ್ರಾಹಕರ ಐಎಂಪಿಎಸ್ ಹಣ ವರ್ಗಾವಣೆಗೆ ಶುಲ್ಕ ವಿಧಿಸುತ್ತಿದೆ. ಇದು ಆನ್‌ಲೈನ್ ಹಾಗೂ ಬ್ರಾಂಚ್ ಮೂಲಕ ಹಣ ವರ್ಗಾವಣೆ ಮಾಡುವ ಚಿಲ್ಲರೆ ಗ್ರಾಹರಿಗೆ ಅನ್ವಯವಾಗಲಿದೆ. ಪ್ರಮುಖವಾಗಿ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮೇಲೆ ಶುಲ್ಕ ವಿಧಿಸಲು ಎಸ್‌ಬಿಐ ಮುಂದಾಗಿದೆ. ಆಗಸ್ಟ್ 15ರಿಂದ ಹೊಸ ಶುಲ್ಕ ನಿಯಮ ಅನ್ವಯಾಗುತ್ತಿದೆ.
25,000 ರೂಪಾಯಿ ಮೇಲ್ಪಟ್ಟ ಹಣ ವರ್ಗಾವಣೆಗೆ ಶುಲ್ಕ
ರಿಟೇಲ್ ಗ್ರಾಹಕರು ಆಗಸ್ಟ್ 15ರ ಬಳಿಕ 25,000 ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟು ಹಣ ವರ್ಗಾವಣೆ ಮಾಡಲು ಶುಲ್ಕ ಪಾವತಿಸಬೇಕು. 25,000 ರೂಪಾಯಿ ವರೆಗಿನ ಐಎಂಪಿಎಸ್ ಹಣ ವರ್ಗಾವಣೆಗೆ ಆನ್‌ಲೈನ್ ಮೂಲಕ ಯಾವುದೇ ಶುಲ್ಕ ಇರುವುದಿಲ್ಲ.
ತ್ವರಿತಗತಿಯಲ್ಲಿ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ಮೂಲಕ ಮಾಡಲಾಗುತ್ತದೆ. ಇದು ದೇಶದ ಯಾವುದೇ ಭಾಗಗಕ್ಕೇ ರಿಯಲ್ ಟೈಮ್‌ನಲ್ಲಿ ಹಣ ವರ್ಗಾವಣೆ ಮಾಡಲಿದೆ. ಶೀಘ್ರದಲ್ಲೇ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ಬಳಕೆ ಮಾಡಲಾಗುತ್ತದೆ. ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ. ಅದಕ್ಕೂ ಹೆಚ್ಚಿನ ಮೊತ್ತ ಹಣ ವರ್ಗಾವಣೆ ಮಾಡಲು ಆರ್‌ಟಿಜಿಎಸ್ ಬಳಕೆ ಮಾಡಬಹುದು. ಇದೀಗ ಎಸ್‌ಬಿಐ 25,000 ರೂಪಾಯಿಗಿಂತ ಮೇಲ್ಪಟ್ಟ ಹಣ ವರ್ಗಾವಣೆ ಮಾಡುವ ರಿಟೇಲ್ ಗ್ರಾಹಕರಿಗೆ ಶುಲ್ಕ ವಿಧಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.