
ನವದೆಹಲಿ (ಆ.13) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಆಗಸ್ಟ 15 ರಿಂದ ತನ್ನ ವಹಿವಾಟು ನಿಯಮದಲ್ಲಿ ಕೆಲ ಬದಲಾವಣೆ ಮಾಡುತ್ತಿದೆ. ಪ್ರಮುಖವಾಗಿ ರಿಟೇಲ್ ಗ್ರಾಹಕರ ಐಎಂಪಿಎಸ್ ಹಣ ವರ್ಗಾವಣೆಗೆ ಶುಲ್ಕ ವಿಧಿಸುತ್ತಿದೆ. ಇದು ಆನ್‌ಲೈನ್ ಹಾಗೂ ಬ್ರಾಂಚ್ ಮೂಲಕ ಹಣ ವರ್ಗಾವಣೆ ಮಾಡುವ ಚಿಲ್ಲರೆ ಗ್ರಾಹರಿಗೆ ಅನ್ವಯವಾಗಲಿದೆ. ಪ್ರಮುಖವಾಗಿ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮೇಲೆ ಶುಲ್ಕ ವಿಧಿಸಲು ಎಸ್‌ಬಿಐ ಮುಂದಾಗಿದೆ. ಆಗಸ್ಟ್ 15ರಿಂದ ಹೊಸ ಶುಲ್ಕ ನಿಯಮ ಅನ್ವಯಾಗುತ್ತಿದೆ.
ರಿಟೇಲ್ ಗ್ರಾಹಕರು ಆಗಸ್ಟ್ 15ರ ಬಳಿಕ 25,000 ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟು ಹಣ ವರ್ಗಾವಣೆ ಮಾಡಲು ಶುಲ್ಕ ಪಾವತಿಸಬೇಕು. 25,000 ರೂಪಾಯಿ ವರೆಗಿನ ಐಎಂಪಿಎಸ್ ಹಣ ವರ್ಗಾವಣೆಗೆ ಆನ್‌ಲೈನ್ ಮೂಲಕ ಯಾವುದೇ ಶುಲ್ಕ ಇರುವುದಿಲ್ಲ.
ತ್ವರಿತಗತಿಯಲ್ಲಿ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ಮೂಲಕ ಮಾಡಲಾಗುತ್ತದೆ. ಇದು ದೇಶದ ಯಾವುದೇ ಭಾಗಗಕ್ಕೇ ರಿಯಲ್ ಟೈಮ್‌ನಲ್ಲಿ ಹಣ ವರ್ಗಾವಣೆ ಮಾಡಲಿದೆ. ಶೀಘ್ರದಲ್ಲೇ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ಬಳಕೆ ಮಾಡಲಾಗುತ್ತದೆ. ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ಐಎಂಪಿಎಸ್ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ. ಅದಕ್ಕೂ ಹೆಚ್ಚಿನ ಮೊತ್ತ ಹಣ ವರ್ಗಾವಣೆ ಮಾಡಲು ಆರ್‌ಟಿಜಿಎಸ್ ಬಳಕೆ ಮಾಡಬಹುದು. ಇದೀಗ ಎಸ್‌ಬಿಐ 25,000 ರೂಪಾಯಿಗಿಂತ ಮೇಲ್ಪಟ್ಟ ಹಣ ವರ್ಗಾವಣೆ ಮಾಡುವ ರಿಟೇಲ್ ಗ್ರಾಹಕರಿಗೆ ಶುಲ್ಕ ವಿಧಿಸುತ್ತದೆ.
25,000 ರೂಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟ ಹಣವನ್ನು ಐಎಂಪಿಎಸ್ ಮೂಲ ವರ್ಗಾವಣೆ ಮಾಡುವುದಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ 15 ರಿಂದ ಶುಲ್ಕ ವಿಧಿಸುತ್ತದೆ. 25,000 ರೂಪಾಯಿಯಿಂದ 1,00,000 ರೂಪಾಯಿ ವರೆಗೆ 2 ರೂಪಾಯಿ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ. 1,00,000 ರೂಪಾಯಿಯಿಂದ 2,00,000 ರೂಪಾಯಿವರೆಗೆ ಐಎಂಪಿಎಸ್ ಹಣ ವರ್ಗಾವಣೆ ಮಾಡಲು 6 ರೂಪಾಯಿ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ. ಇನ್ನು 2,00,001 ರೂಪಾಯಿಂದ 5,00,000 ರೂಪಾಯಿ ವರೆಗಿನ ಐಎಂಪಿಎಸ್ ಹಣ ವರ್ಗಾವಣೆ 10 ರೂಪಾಯಿ ಹಾಗೂ ಜಿಎಸ್‌ಟಿ ಅನ್ವಯವಾಗಲಿದೆ.
ನ್ಯಾಷನಲ್ ಪೇಮೆಂಟ್ ಕಾರ್ಪೋಪೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ಭಾರತದಲ್ಲಿ ಐಎಂಪಿಎಸ್ ಸೇವೆ ನಿರ್ವಹಣೆ ಮಾಡುತ್ತಿದೆ. ತ್ವರಿತಗತಿಯಲ್ಲಿ ಹಣ ವರ್ಗಾವಣೆ ಮಾಡಲು ಐಎಂಪಿಎಸ್ ಬಳಕೆ ಮಾಡಲಾಗುತ್ತದೆ. ಎಲ್ಲಾ ಬ್ಯಾಂಕ್‌ಗಳು ಐಎಂಪಿಎಸ್ ಸೇವೆ ನೀಡುತ್ತದೆ. ವಿಶೇಷ ಅಂದರೆ ಈ ಸೇವೆ ದಿನದ 24 ಗಂಟೆಯೂ ಲಭ್ಯವಿದೆ. ಮಧ್ಯರಾತ್ರಿ ಯಾರಿಗಾದರೂ ತಕ್ಷಣ ಹಣ ಕಳುಹಿಸಲು ಐಎಂಪಿಎಸ್ ಮೂಲಕ ಸಾಧ್ಯವಿದೆ. ಇನ್ನು NEFT ಮೂಲಕ ಹಣ ಕಳುಹಿಸುವುದಾದರೆ ಬ್ಯಾಕಿಂಗ್ ಸಮಯದಲ್ಲಿ ಇದು ವರ್ಗಾವಣೆ ಆಗಲಿದೆ. ಇದಕ್ಕೆ ಒಂದು ವರ್ಕಿಂಗ್ ಡೇ ಬೇಕಾಗಲಿದೆ. ತಕ್ಷಣವೇ ಆಗಬಹುದು ಅಥವಾ ಒಂದು ವರ್ಕಿಂಗ್ ಡೇ ಹಿಡಡಿಯಬಹುದು. ದೊಡ್ಡ ಮೊತ್ತ ಕಳುಹಿಸಲು NEFT ಅಥವಾ ಆರ್‌ಟಿಜಿಎಸ್ ಆಯ್ಕೆ ಮಾಡಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.