
ನವದೆಹಲಿ (ಆ.13) ಭಾರತದ ಮದ್ಯ ಬ್ರ್ಯಾಂಡ್ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಜನಪ್ರಿಯತೆ ಹಾಗೂ ಮೆಚ್ಚುಗೆ ಗಳಿಸಿದೆ. ಇನ್ನು ಭಾರತದಲ್ಲಿ ಮದ್ಯ ಮಾರಾಟ ಪ್ರತಿ ದಿನ ದಾಖಲೆ ಬರೆಯುತ್ತಿದೆ. ಇದರ ಜೊತೆಗೆ ಹೊಸ ಹೊಸ ಮದ್ಯ ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇತ್ತೀಚೆಗೆ ಯುಕೆ ಜೊತೆಗಿನ ಟ್ರೇಡ್ ಒಪ್ಪಂದಿಂದ ಇನ್ನು ಯುಕೆ ವಿಸ್ಕಿಗಳು ಭಾರತದಲ್ಲಿ ಕಡಿಮೆ ಬೆಲೆ ಲಭ್ಯವಾಗಲಿದೆ. ಈ ಬೆಳವಣಿಗೆ ನಡುವೆ ಬಾಲಿವುಡ್ ನಟ ಶಾರುಖ್ ಖಾನ್, ಪುತ್ರ ಆರ್ಯನ್ ಖಾನ್ ಹಾಗೂ ಯುವ ಉದ್ಯಮಿ ನಿಖಿಲ್ ಕಾಮತ್ ಜೊತೆಯಾಗಿ ಹೊಸ ಲಿಕ್ಕರ್ ಬ್ರ್ಯಾಂಡ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಡಿ ಯವೋಲ್ ( D’YAVOL) ಹೊಸ ಮದ್ಯ ಬ್ರ್ಯಾಂಡ್ ಇದೀಗ ಮಾರುಕಟ್ಟೆಗೆ ಎಂಟ್ರಿಕೊಡುತ್ತಿದೆ.
ಡಿಯವೋಲ್ ಸ್ಪ್ರಿರಿಟ್ ಬ್ರ್ಯಾಂಡ್ ತನ್ನ ಮೊದಲ ಉತ್ಪನ್ನವಾಗಿ ಪ್ರೀಮಿಯಂ ಟೆಕ್ಕಿಲಾ ಲಾಂಚ್ ಮಾಡುತ್ತಿದೆ. ವರ್ಲ್ಡ್ ಕ್ಲಾಸ್ ಸ್ಪಿರಿಟ್, ಬ್ಲೆಂಡೆಡ್ ಸ್ಮೂತ್ ಮದ್ಯ ಈ ಬ್ರ್ಯಾಂಡ್‌ನ ವಿಶೇಷತೆ. ಇದರ ಜೊತೆತೆ ಬಾಟಲಿ ಶ್ರೇಷ್ಠ ಹೆರಿಟೇಜ್ ವಿಶೇಷತೆಗಳನ್ನು ಒಳಗೊಂಡಿದೆ. ರೆಡಿಕೋ ಖೈತಾನ್ ಜೊತೆ ಸೇರಿದ ಈ ಮೂವರು ದಿಗ್ಗಜರು ಹೊಸ ಮದ್ಯ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ರೆಡಿಕೋ ಖೈತಾನ್ ಹಲವು ದಶಕಗಳಿಂದ ಭಾರತದಲ್ಲಿ ಮದ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ತಿಂಗಳು ಪ್ರೀಮಿಯಂ ಟೆಕ್ಕಿಲಾ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇದು ಅತ್ಯಂತ ಲಕ್ಷುರಿ ಹಾಗೂ ಪ್ರಿಮಿಯಂ ಕ್ವಾಲಿಟಿ ಟೆಕ್ಕಿಲಾ ಎಂದು D’YAVOL ಬ್ರ್ಯಾಂಡ್ ಹೇಳಿದೆ.
ಜಾಗತಿಕ ಮಾರುಕಟ್ಟೆಯಲ್ಲೂ ಡಿ ಯವೋಲ್ ಭಾರಿ ಸದ್ದು ಮಾಡುವ ಸಾಧ್ಯತೆ ಇದೆ. ಶಾರುಖ್ ಖಾನ್ ಜನಪ್ರಿಯತೆ, ನಿಖಿಲ್ ಕಾಮತ್ ಉದ್ಯಮಿ ಕ್ಷೇತ್ರದಲ್ಲಿನ ಅನುಭವ ಹಾಗೂ ರೆಡಿಕೋ ಖೈತಾನ್ ಮದ್ಯ ಕ್ಷೇತ್ರದ ಅನುಭವಗಳಿಂದ ಹೊಸ ಮದ್ಯ ಬ್ರ್ಯಾಂಡ್ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಮಾತನಾಡಿರುವ ಶಾರುಖ್ ಖಾನ್ ರಿಡೆಕೋ ಖೈತಾನ್ ಅನುಭವ, ನಿಖಿಲ್ ಕಾಮತ್ ಎನರ್ಜಿ ಈ ಹೊಸ ಬ್ರ್ಯಾಂಡ್ ಮತ್ತಷ್ಟು ಅಭಿವೃದ್ಧಿ ಕಾಣಲು ಸಹಕಾರಿಯಾಗಿದೆ. ಸೂಕ್ತ ಸಮಯದಲ್ಲಿ ಹೊಸ ಬ್ರ್ಯಾಂಡ್ ಲಾಂಚ್ ಆಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಇಲ್ಲಿನ ಸಂಸ್ಕೃತಿ ಹಾಗೂ ದೇಶಿಯತೆಗಳಿಂದ ಮಿಳಿತವಾದ ಬ್ರ್ಯಾಂಡ್ ಇದು. ಹೀಗಾಗಿ ಗುಣಮಟ್ಟ, ಲಕ್ಷುರಿಯಲ್ಲಿ ಯಾವುದೇ ರಾಜಿ ಇಲ್ಲ. ಹೊಸ ನಾವೀನ್ಯತೆಯ ಈ ಬ್ರ್ಯಾಂಡ್ ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಆಗಿ ಮಾರ್ಪಡಲಿದೆ ಎಂದು ಆರ್ಯನ್ ಖಾನ್ ಹೇಳಿದ್ದಾರೆ. ಇದು ಬ್ರ್ಯಾಂಡ್‌ನ ಹೊಸ ಅಧ್ಯಾಯ ಎಂದು D’YAVOL ಸ್ಪಿರಿಟ್ ಮುಖ್ಯಸ್ಥ ಲೇತಿ ಬ್ಲಗೋವಾ ಹೇಳಿದ್ದಾರೆ.
ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಮದ್ಯ ಸೇವನೆಯಿಂದ ಆರೋಗ್ಯ ಮಾತ್ರವಲ್ಲ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.