ಆಹಾರಕ್ಕಾಗಿ ಮೀಸಲಾದ ಫುಡ್ ವೋಚರ್‌ಗಳನ್ನು ದುರುಪಯೋಗಪಡಿಸಿಕೊಂಡು, ದಿನಸಿ ವಸ್ತುಗಳಿಗೆ ಖರ್ಚು ಮಾಡಿದ್ದಕ್ಕಾಗಿ ಲಾಸ್ ಏಂಜಲೀಸ್‌ನಲ್ಲಿ 24 ಉದ್ಯೋಗಿಗಳನ್ನು ಮೆಟಾ ವಜಾಗೊಳಿಸಿದೆ.
ಲಾಸ್ ಏಂಜಲಿಸ್ (ಅ.18): ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಮಾಲೀಕರಾದ ಮೆಟಾ, ಫುಡ್ ಕೂಪನ್‌ಗಳನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಲಾಸ್ ಏಂಜಲೀಸ್ ಕಚೇರಿಗಳಿಂದ ಸುಮಾರು 24 ಉದ್ಯೋಗಿಗಳನ್ನು ವಜಾಗೊಳಿಸಿದೆ. ಪ್ರತಿ ಮೀಲ್ ಕೂಪನ್ 25 ಯುಎಸ್ ಡಾಲರ್ (2100 ರೂಪಾಯಿ) ಮೌಲ್ಯದ್ದಾಗಿತ್ತು. ಇದನ್ನು ಫುಡ್ ಖರೀದಿ ಮಾಡಲು ಮಾತ್ರವೇ ಬಳಕೆ ಮಾಡಬೇಕು ಅನ್ನೋದು ಮೆಟಾ ನಿಯಮ. ಆದರೆ, ಇದರಲ್ಲಿ ಕೆಲವರು ಟೂತ್‌ಪೇಸ್ಟ್, ಲಾಂಡ್ರಿ ಡಿಟರ್ಜೆಂಟ್ ಮತ್ತು ವೈನ್ ಗ್ಲಾಸ್‌ಗಳಂತಹ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಇನ್ನೂ ಕೆಲವು ಉದ್ಯೋಗಿಗಳು ಕೆಲಸದಲ್ಲಿ ಇಲ್ಲದೇ ಇದ್ದರೂ ಫುಡ್ ಕೂಪನ್ ಬಳಸಿಕೊಂಡು ಮನೆಗೆ ಆಹಾರವನ್ನು ಕಳುಹಿಸಿದ್ದಾರೆ. ಈ ಮೀಲ್ ಕೂಪನ್‌ಗಳ ದುರುಪಯೋಗದ ವಿರುದ್ಧ ಮೆಟಾ ಮಾನವ ಸಂಪನ್ಮೂಲ ತನಿಖೆ ನಡೆಸಿದ ನಂತರ ವಿಷಯಗಳು ಬೆಳಕಿಗೆ ಬಂದಿವೆ.
ವಾರ್ಷಿಕ 3.36 ಕೋಟಿ ಭಾರೀ ಸಂಬಳ ಪಡೆಯುವ ಉದ್ಯೋಗಿಯೊಬ್ಬಳು ತನ್ನ ಮೀಲ್ ಕೂಪನ್‌ಗಳು ದಿನಸಿ ಹಾಗೂ ಗೃಹಪಯೋಗಿ ವಸ್ತುಗಳ ಖರೀದಿಗೆ ಬಳಸಿದ್ದಾಗಿ ಒಪ್ಪಿಕೊಂಡಿದ್ದಾರೆ.'ನಾನು ಕಚೇರಿಯಲ್ಲಿ ಊಟ ಮಾಡದ ದಿನಗಳಲ್ಲಿ, ಹಾಗೆ ನನ್ನ ಪತಿ ಅಡುಗೆ ಮಾಡುತ್ತಿದ್ದರೆ ಅಥವಾ ನಾನು ಸ್ನೇಹಿತರೊಂದಿಗೆ ರಾತ್ರಿ ಊಟ ಮಾಡುತ್ತಿದ್ದರೆ, ನಾನು ಊಟದ ಕ್ರೆಡಿಟ್ ಅನ್ನು ವ್ಯರ್ಥ ಮಾಡಬಾರದು ಎಂದು ಭಾವಿಸುತ್ತೇನೆ' ಎಂದು ಅನಾಮಧೇಯ ಮೇಸೆಜಿಂಗ್ ಫ್ಲಾಟ್‌ಫಾರ್ಮ್ ಬ್ಲೈಂಡ್‌ನಲ್ಲಿ ಬರೆದುಕೊಂಡಿದ್ದಾರೆ.
undefined
ಮೀಲ್ ಕೂಪನ್‌ಗಳ ದುರುಪಯೋಗದ ಬಗ್ಗೆಕೆಲವು ಉದ್ಯೋಗಿಗಳಿಗೆ ಎಚ್ಚರಿಕೆಗಳನ್ನು ಕಳುಹಿಸಲಾಗಿದ್ದರೂ, ನಿಯಮಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದವರನ್ನು ವಜಾಗೊಳಿಸಲಾಗಿದೆ. ಈ ನಿಯಮದ ಅನುಷ್ಠಾನವು ಮೆಟಾದ ಮಹಾ ಪುನರ್ರಚನಾ ಕಾರ್ಯತಂತ್ರದ ಭಾಗವಾಗಿ ಕಟ್ಟುನಿಟ್ಟಾಗಿದೆ, ಇದು ತನ್ನ ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ವಿಭಾಗಗಳಲ್ಲಿ ವಜಾಗಳು ಮತ್ತು ಸ್ಥಳಾಂತರಗಳನ್ನು ಒಳಗೊಂಡಂತೆ ಅದರ ಉದ್ಯೋಗಿಗಳ ವಿಚಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಸುಮಾರು 21,000 ಉದ್ಯೋಗಗಳನ್ನು ಕಡಿತಗೊಳಿಸಿದ CEO ಮಾರ್ಕ್ ಜುಕರ್‌ಬರ್ಗ್ ಆದೇಶಿಸಿದ ಉದ್ಯೋಗ ಕಡಿತದ ಕ್ಯಾಸ್ಕೇಡ್ ಅನ್ನು ಅನುಸಿರಿಸಿದೆ. ಜೂನ್ 2023 ರ ಹೊತ್ತಿಗೆ, ಮೆಟಾ ಸುಮಾರು 70,799 ಉದ್ಯೋಗಿಗಳನ್ನು ಹೊಂದಿದೆ.
54 ರೂಪಾಯಿ ಷೇರಿನಿಂದ ಅಮೀರ್ ಖಾನ್ ಗಳಿಸಿದ್ದು 72 ಲಕ್ಷ! ಶಾರುಖ್-ಸಲ್ಮಾನ್ ಮಾಡಿಕೊಂಡಿರೋ ಲಾಭವೆಷ್ಟು?
ಅನೇಕ ಕಾರ್ಪೋರೇಟ್ ಕಂಪನಿಗಳು ಉದ್ಯೋಗಿಗಳಿಗೆ ಉಚಿತ ಭೋಜನವನ್ನು ಒದಗಿಸುವುದರೊಂದಿಗೆ ತಂತ್ರಜ್ಞಾನ ವಲಯದಲ್ಲಿ ಫ್ರೀ ಮೀಲ್ ಅನ್ನೋದು ಬಹುಕಾಲದಿಂದಲೂ ಪ್ರಮುಖ ಭತ್ಯೆ ಆಗಿದೆ. ಆನ್-ಸೈಟ್ ಕ್ಯಾಟರಿಂಗ್‌ನಿಂದಾಗಿ ಹೆಚ್ಚು ವಿಸ್ತಾರವಾದ ಮೆಟಾ ಕಛೇರಿಗಳಲ್ಲಿ ಶುಲ್ಕವಿಲ್ಲದೆ ಊಟ ಲಭ್ಯವಿದೆ, ಆದರೆ ಹನ್ನೆರಡು ಸಣ್ಣ ಸೈಟ್‌ಗಳು ದೈನಂದಿನ ಮೀಲ್ ಕೂಪನ್‌ಗಳನ್ನು ನೀಡಿರುವ ಕಾರಣ, ವಿತರಣಾ ಸೇವೆಗಳಾದ UberEats ಮತ್ತು Grubhub ನಿಂದ ಊಟವನ್ನು ಆರ್ಡರ್ ಮಾಡಲು ಉದ್ಯೋಗಿಗಳಿಗೆ ಸಾಧ್ಯವಾಗಿದೆ.
F80 ಹೈಬ್ರಿಡ್ ಸೂಪರ್ ಕಾರ್ ಲಾಂಚ್ ಮಾಡಿದ ಫೆರಾರಿ, 30 ಕೋಟಿಯ ಕಾರು ಕೆಲವೇ ನಿಮಿಷದಲ್ಲಿ ಸೋಲ್ಡ್ ಔಟ್!
ಉದ್ಯೋಗಿಗಳಿಗೆ ಬೆಳಗ್ಗಿನ ತಿಂಡಿಗೆ 20 ಡಾಲರ್, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ ಮೆಟಾ ತಲಾ 25 ಡಾಲರ್ ಮೀಲ್ ಕೂಪನ್ ನೀಡುತ್ತದೆ.2022ರಲ್ಲಿ ಮೆಟಾ ಈ ಫ್ರೀ ಕೂಪನ್ ನೀಡುವ ಅಭ್ಯಾಸವನ್ನು ನಿಲ್ಲಿಸಿತ್ತು. ಈ ವೇಳೆ ಕಂಪನಿಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.