*ಜ.1ರಿಂದ ಶೇ.5ರಷ್ಟು GSTಯನ್ನು ಗ್ರಾಹಕರಿಂದ ಸಂಗ್ರಹಿಸೋ ಜೊತೆ ಸರ್ಕಾರಕ್ಕೆ ಜಮೆ ಮಾಡೋ ಕೆಲಸ
*ಫುಡ್ ಡೆಲಿವರಿ apps ಮೇಲೆ ಹೆಚ್ಚಿದ ಹೊರೆ
*ಹೊಸ ನೀತಿಯಿಂದ ಸಣ್ಣ ರೆಸ್ಟೋರೆಂಟ್ ಗಳಿಗೆ ಸಂಕಷ್ಟ
ನವದೆಹಲಿ (ಡಿ.20): ನ್ಯೂ ಇಯರ್ ಮೊದಲ ದಿನ ಅಡುಗೆ ಮನೆಗೆ ರಜೆ ನೀಡಿ, ಸ್ವಿಗ್ಗಿ(Swiggy), ಜೊಮ್ಯಾಟೋ (Zomato) ಅಥವಾ ಇನ್ಯಾವುದೋ ಆಹಾರ ಪೂರೈಕೆ ಅಪ್ಲಿಕೇಷನ್(food delivery application) ಮೂಲಕ ಫುಡ್ ಆರ್ಡರ್(Food order) ಮಾಡೋ ಯೋಚನೆ ನಿಮ್ಮ ತಲೆಯಲ್ಲಿದ್ರೆ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು. ಅದೇನಪ್ಪ ಅಂದ್ರೆ ಜನವರಿ 1ರಿಂದ ಇಂಥ ಆಹಾರ ಪೂರೈಕೆ ಫ್ಲಾಟ್ ಫಾರ್ಮಗಳು ಗ್ರಾಹಕರಿಂದ ಶೇ.5ರಷ್ಟು ತೆರಿಗೆ ಸಂಗ್ರಹಿಸಲಿವೆ. ಈ ಫುಡ್ ಡೆಲಿವರಿ ಅಪ್ಲಿಕೇಷನ್ ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್ ಟಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಬೇಕಿದೆ. ಸೆಪ್ಟೆಂಬರ್ 17ರಂದು ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಸರ್ಕಾರಕ್ಕೆ ಈ ತನಕ ತೆರಿಗೆ ಪಾವತಿಸದ ರೆಸ್ಟೋರೆಂಟ್ ಗಳನ್ನು ಜಿಎಸ್ ಟಿ (GST) ವ್ಯಾಪ್ತಿಯೊಳಗೆ ತರೋ ಉದ್ದೇಶದಿಂದ ಸರ್ಕಾರ ಇಂಥದೊಂದು ಕ್ರಮಕ್ಕೆ ಮುಂದಾಗಿದೆ.
ಏಕೆ ಈ ಬದಲಾವಣೆ?
ಪ್ರಸ್ತುತ ಒಬ್ಬ ಗ್ರಾಹಕ ಸ್ವಿಗ್ಗಿ ಅಥವಾ ಜೊಮ್ಯಾಟೋ ಮೂಲಕ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್ ಮಾಡಿದ್ರೆ ಆತನಿಂದ ಆಹಾರದ ಮೇಲೆ ಶೇ.5ರಷ್ಟು ತೆರಿಗೆಗಳನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್ ಗಳಿಗೆ (Restaurants) ನೀಡುತ್ತಿದ್ದವು. ಆದ್ರೆ ಕೆಲವು ರೆಸ್ಟೋರೆಂಟ್ ಗಳು (Restaurants) ಈ ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿರಲಿಲ್ಲ. ಹೀಗಾಗಿ ಈ ರೀತಿ ರೆಸ್ಟೋರೆಂಟ್ ಗಳು ಸರ್ಕಾರಕ್ಕೆ ತೆರಿಗೆ ವಂಚಿಸೋದನ್ನು ತಡೆಯೋ ಉದ್ದೇಶದಿಂದ ಫುಡ್ ಡೆಲಿವರಿ ಆಪ್ಲಿಕೇಷನ್ ಗಳು ಜನವರಿ 1ರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹಿಸೋ ಜೊತೆ ಅದನ್ನು ಸರ್ಕಾರಕ್ಕೆ ಸಲ್ಲಿಸೋ ಕೆಲಸವನ್ನೂ ಮಾಡಲಿವೆ. ಇದ್ರಿಂದ ರೆಸ್ಟೋರೆಂಟ್ ಗಳಿಗೆ ತಮ್ಮ ಆನ್ ಲೈನ್ ವ್ಯವಹಾರದ ಮಾಹಿತಿಗಳನ್ನು ಮುಚ್ಚಿಡಲು ಸಾಧ್ಯವಾಗೋದಿಲ್ಲ. ರೆಸ್ಟೋರೆಂಟ್ ಗಳ ಆನ್ಲೈನ್ ವ್ಯವಹಾರದ ಮಾಹಿತಿ ಇನ್ನು ಮುಂದೆ ಈ ಮೂಲಕ ಸರ್ಕಾರಕ್ಕೆ ಲಭಿಸಲಿದೆ.
undefined
LIC IPO: ಊಹಪೋಹಗಳಿಗೆ ತೆರೆ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಐಸಿ ಐಪಿಒ ಪಕ್ಕಾ!
ಗ್ರಾಹಕರ ಮೇಲೆ ಪರಿಣಾಮವಾಗುತ್ತದೆಯೇ?
ಈ ಹೊಸ ವ್ಯವಸ್ಥೆ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಏಕೆಂದ್ರೆ ಈಗಾಗಲೇ ಇರೋ ತೆರಿಗೆಯನ್ನು ಜಮೆ ಮಾಡೋ ವಿಧಾನದಲ್ಲಿ ಮಾತ್ರ ಬದಲಾವಣೆ ತರಲಾಗಿದೆ. ಹೊಸ ತೆರಿಗೆಯನ್ನು ವಿಧಿಸದ ಕಾರಣ ಇದು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಈಗಿರುಂತೆಯೇ ಶೇ.5ರಷ್ಟು ತೆರಿಗೆಯನ್ನು ಗ್ರಾಹಕರು ಪಾವತಿಸಿದ್ರೆ ಸಾಕು.
Ban On Future Trading: 7 ಕೃಷಿ ಉತ್ಪನ್ನಗಳ ಭವಿಷ್ಯದ ವ್ಯಾಪಾರಕ್ಕೆ ನಿರ್ಬಂಧ ; ಹಣದುಬ್ಬರ ತಡೆಗೆ ಈ ಕ್ರಮ
ಸಣ್ಣ ರೆಸ್ಟೋರೆಂಟ್ ಗಳಿಗೆ ಹೊಡೆತ
ಈ ನೀತಿ ಸಣ್ಣ ರೆಸ್ಟೋರೆಂಟ್ ಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಅದ್ರಲ್ಲೂ 20ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರೋ ಈ ಹಿಂದೆ ಜಿಎಸ್ ಟಿ ವ್ಯಾಪ್ತಿಗೆ ಒಳಪಡದ ರೆಸ್ಟೋರೆಂಟ್ ಗಳು ಹೊಸ ವರ್ಷದಿಂದ ತೊಂದರೆಗೆ ಸಿಲುಕು ಸಾಧ್ಯತೆಯಿದೆ. ಫುಡ್ ಡೆಲಿವರಿ ಸಂಸ್ಥೆಗಳೇ ತೆರಿಗೆ ಪಾವತಿಸೋ ಕಾರಣ ಈ ಪುಟ್ಟ ರೆಸ್ಟೋರೆಂಟ್ ಗಳು ಕೂಡ ತಮ್ಮ ಆನ್ ಲೈನ್ ವ್ಯವಹಾರಕ್ಕೆ ಸಂಬಂಧಿಸಿ ತೆರಿಗೆ ಪಾವತಿಸಬೇಕಾಗುತ್ತದೆ. ಇಲ್ಲಿಯ ತನಕ ಇಂಥ ರೆಸ್ಟೋರೆಂಟ್ ಗಳು ಆನ್ ಲೈನ್ ವ್ಯವಹಾರದ ದಾಖಲೆಗಳನ್ನಿಡುತ್ತಿರಲಿಲ್ಲ. ಆದ್ರೆ ಇನ್ನುಮುಂದೆ ಆನ್ ಲೈನ್ ವ್ಯವಹಾರದ ದಾಖಲೆಗಳನ್ನು ಕೂಡ ನಿರ್ವಹಿಸಬೇಕಾದ ಅಗತ್ಯವಿದೆ. ಇನ್ನು ಆಹಾರ ಡೆಲಿವರಿ ಮಾಡೋ ಸಂಸ್ಥೆಗಳಿಗೂ ಇದ್ರಿಂದ ಹೊರೆ. ರೆಸ್ಟೋರೆಂಟ್ ಪರವಾಗಿ ತೆರಿಗೆ ಸಂಗ್ರಹಿಸೋ ಜೊತೆ ಅದರ ದಾಖಲೆಯಿಡೋ ಹಾಗೂ ಪಾವತಿ ಮಾಡೋ ಕೆಲಸ ಕೂಡ ಈ ಸಂಸ್ಥೆಗಳ ತಲೆ ಮೇಲೆ ಬೀಳಲಿದೆ.