LIC IPO: ಊಹಪೋಹಗಳಿಗೆ ತೆರೆ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಐಸಿ ಐಪಿಒ ಪಕ್ಕಾ!

By Suvarna News  |  First Published Dec 20, 2021, 5:47 PM IST

*ಜನವರಿ-ಮಾರ್ಚ್ ನಡುವೆ ಎಲ್ಐಸಿ ಐಪಿಒ ನಡೆಯೋ ಸಾಧ್ಯತೆ
*ಎಲ್ಐಸಿ  ಐಪಿಒ ಭಾರತದ ಅತಿದೊಡ್ಡ ಐಪಿಒ ಆಗಿ ಮೂಡಿಬರೋ ನಿರೀಕ್ಷೆ
*ಈಗಾಗಲೇ ಐಪಿಒಗೆ ಸಿದ್ಧತೆ ಮಾಡಿಕೊಂಡಿರೋ ಕೇಂದ್ರ ಸರ್ಕಾರ
*ಈ ಐಪಿಒ ಮೂಲಕ ಕೇಂದ್ರ ಸರ್ಕಾರ ಒಂದು ಲಕ್ಷ ಕೋಟಿ ರೂ. ಗಳಿಸೋ ನಿರೀಕ್ಷೆ


ನವದೆಹಲಿ (ಡಿ. 20): ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ  ಬೃಹತ್ ಐಪಿಒ (IPO) ಈ ಆರ್ಥಿಕ ವರ್ಷದ ಕೊನೆಯಲ್ಲಿ ನಡೆಯಲಿದೆ ಎಂದು ಕೆಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ (ಡಿ.20) ಮಾಹಿತಿ ನೀಡಿದ್ದಾರೆ. ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ (Tuhin Kanta Pandey) ನೀಡಿರೋ ಪ್ರಕಾರ ಐಪಿಒ ಯೋಜನೆ ಸಿದ್ಧತೆಯ ಹಾದಿಯಲ್ಲಿದೆ.

ಎಲ್ಐಸಿ  ಐಪಿಒ ಭಾರತದ ಅತಿದೊಡ್ಡ ಐಪಿಒ ಆಗಿ ಮೂಡಿಬರೋ ನಿರೀಕ್ಷೆಯಿದೆ. ಈ ಐಪಿಒ ಮೂಲಕ ಸರ್ಕಾರ ಸುಮಾರು ಒಂದು ಲಕ್ಷ ಕೋಟಿ ರೂ. ಗಳಿಸೋ ಸಾಧ್ಯತೆಯಿದೆ. 'ಈ ವರ್ಷದಲ್ಲಿ ಎಲ್ಐಸಿ ಐಪಿಒ ನಡೆಯೋ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲವು ಮಾಧ್ಯಮಗಳು ವರದಿ ಮಾಡಿರೋದು ಸರಿಯಲ್ಲ.ಈ ಆರ್ಥಿಕ ವರ್ಷದ ಅಂತಿಮ ತ್ರೈಮಾಸಿಕದಲ್ಲಿ ಐಪಿಒ ನಡೆಸೋ ಬಗ್ಗೆ ಯೋಜನೆಗಳು ಸಿದ್ಧಗೊಳ್ಳುತ್ತಿವೆ' ಎಂದು ಪಾಂಡೆ ಟ್ವೀಟ್ (tweet) ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಕೇಂದ್ರ ಬಜೆಟ್(Budget) 2022ರ ಬಳಿಕ ಎಲ್ಐಸಿ ಐಪಿಒ ನಡೆಸೋ ಬಗ್ಗೆ ಸರ್ಕಾರ ಅನೇಕ ಆಡಳಿತಾತ್ಮಕ ಹಾಗ ಕಾನನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಿದೆ. 

Latest Videos

undefined

LIC IPO: ಪ್ಯಾನ್ ಮಾಹಿತಿ ನವೀಕರಿಸಲು ಪಾಲಿಸಿದಾರರಿಗೆ ಸೂಚನೆ

ಎಲ್ಐಸಿ ಕಾಯ್ದೆ 1956 ಅಡಿಯಲ್ಲಿ ಎಲ್ಐಸಿಗೆ ಶಾಸನಬದ್ಧ ನಿಗಮದ(Corporation)ಸ್ಥಾನಮಾನ ನೀಡಲಾಯಿತು. ಇಂದು ಎಲ್ಐಸಿ ಭಾರತದ ಪ್ರಮುಖ ಜೀವವಿಮಾ ಸಂಸ್ಥೆಯಾಗಿದ್ದು, ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದೆ. ಎಲ್ಐಸಿ ವಿದೇಶದಲ್ಲಿ ಕೂಡ ಶಾಖೆಗಳನ್ನು ಹೊಂದಿದೆ. ಇಂಗ್ಲೆಂಡ್(UK), ಫಿಜಿ(Fiji) ಹಾಗೂ ಮಾರಿಶೀಷ್ ನಲ್ಲಿ (Mauritius) ಶಾಖೆಗಳನ್ನು ಹೊಂದಿದೆ.  ಬೆಹ್ರೈನ್ ಕೀನ್ಯಾ, ಶ್ರೀಲಂಕಾ, ನೇಪಾಳ, ಸೌದಿ ಅರೇಬಿಯಾ ಹಾಗೂ ಬಾಂಗ್ಲದೇಶದಲ್ಲಿ ಜಂಟಿ ಸಹಭಾಗಿತ್ವದಲ್ಲಿ( Joint Ventures) ಶಾಖೆಗಳನ್ನು ಹೊಂದಿದೆ.  

ಎಲ್ಐಸಿ ಪಿಂಚಣಿ ನಿಧಿ ನಿಗಮ (LIC Pension Fund Ltd), ಎಲ್ಐಸಿ ಕಾರ್ಡ್ಸ್ ಸರ್ವೀಸ್ ನಿಗಮ (LIC Cards Services Ltd) ಎಲ್ಐಸಿಯ ಅಂಗಸಂಸ್ಥೆಗಳಾಗಿವೆ. ಐಡಿಬಿಐ ಬ್ಯಾಂಕ್ ನಿಗಮ (IDBI Bank Ltd), ಎಲ್ಐಸಿ ಮ್ಯೂಚುವಲ್ ಫಂಡ್ (LIC Mutual Fund) ಹಾಗೂ ಎಲ್ಐಸಿ ಹೌಸಿಂಗ್ ಫೈನಾನ್ಸ್ ನಿಗಮ (LIC Housing Finance Ltd) ಕೂಡ ಎಲ್ಐಸಿಗೆ ಸಂಬಂಧಿಸಿದ ಸಂಸ್ಥೆಗಳಾಗಿವೆ. 

LIC Stake: ಇಂಡಸ್ ಇಂಡ್ ಬ್ಯಾಂಕಿನಲ್ಲಿ ಎಲ್ಐಸಿ ಷೇರು ಹೆಚ್ಚಳಕ್ಕೆ ಆರ್ ಬಿಐ ಅನುಮತಿ

ಎಲ್ಐಸಿ ಯೋಜಿಸಿರೋ ಐಪಿಒನಲ್ಲಿ ಶೇ.10 ಭಾಗವನ್ನು ಪಾಲಿಸಿದಾರರಿಗೆ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಸಿದಾರರು ಈ ಐಪಿಒ ಪ್ರಯೋಜನ  ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಎಲ್ಐಸಿ ಅವರ ಕಾಯಂ ಖಾತಾ ಸಂಖ್ಯೆ (PAN) ಮಾಹಿತಿಯನ್ನು ನವೀಕರಿಸೋ (update) ಜೊತೆಗೆ ಡಿ ಮ್ಯಾಟ್ ಖಾತೆಗಳನ್ನು(demat accounts) ತೆರೆಯುವಂತೆ ಸೂಚಿಸಿದೆ. ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲಿ ಎಲ್ಐಸಿ ಜಾಹೀರಾತುಗಳನ್ನು ಕೂಡ ಪ್ರಕಟಿಸಿದೆ. ಭಾರತದಲ್ಲಿ ಯಾವುದೇ ಐಪಿಒನಲ್ಲಿ ಪಾಲ್ಗೊಳ್ಳಲು ನೀವು ಮಾನ್ಯತೆ ಪಡೆದ ಡಿಮ್ಯಾಟ್ ಖಾತೆ ಹೊಂದಿರೋದು ಅಗತ್ಯ.ಆದಕಾರಣ ಪಾಲಿಸಿದಾರರು ತಮ್ಮ ಬಳಿ ಮಾನ್ಯತೆ ಹೊಂದಿದ ಡಿಮ್ಯಾಟ್ ಖಾತೆಯಿದೆ ಎಂಬುದನ್ನು ದೃಢೀಕರಿಸೋದು ಅಗತ್ಯ ಎಂದು ಜಾಹೀರಾತಿನಲ್ಲಿ ಎಲ್ಐಸಿ ಸ್ಪಷ್ಟಪಡಿಸಿದೆ.18300 ಕೋಟಿ ರೂ. ಸಂಗ್ರಹ ಉದ್ದೇಶದೊಂದಿಗೆ ಪೇಟಿಎಂ ಸಂಸ್ಥೆ ನವೆಂಬರ್ ನಲ್ಲಿ ನಡೆಸಿದ ಐಪಿಒ ದೇಶದ ಅತಿದೊಡ್ಡ ಐಪಿಒ ಎಂಬ ದಾಖಲೆ ನಿರ್ಮಿಸಿತ್ತು. ಆದ್ರೆ ಷೇರುಗಳು ನಿರೀಕ್ಷೆಗಿಂತ ಭಾರಿ ಕಡಿಮೆ ಲಿಸ್ಟ್ ಆಗಿ ಶೇ.27ರಷ್ಟು ಕುಸಿತ ಕಂಡಿತ್ತು. ಎಲ್ಐಸಿ ನಡೆಸಲು ಉದ್ದೇಶಿಸಿರೋ ಐಪಿಒ ಪೇಟಿಎಂಗಿಂತ ದೊಡ್ಡ ಪ್ರಮಾಣದಲ್ಲಿರುತ್ತೆ ಎಂದು ಹೇಳಲಾಗಿದೆ. 

click me!