LPG Connection: ನಾಲ್ಕೇ ನಾಲ್ಕು ಕೆಲಸ ಮಾಡಿದ್ರೆ ಟ್ರಾನ್ಸಫರ್ ಆಗುತ್ತೆ ಗ್ಯಾಸ್ ಕನೆಕ್ಷನ್

By Suvarna NewsFirst Published Dec 18, 2021, 12:01 PM IST
Highlights

ಭಾರತ ಬದಲಾಗಿದೆ. ತುಂಬಾ ಸುತ್ತಾಡಿ,ಸರತಿ ಸಾಲಿನಲ್ಲಿ ನಿಂತು, ಕಾದು ಕಾದು ಆಗ್ತಿದ್ದ ಕೆಲಸವೆಲ್ಲ ಗಂಟೆಯೊಳಗೆ ಮುಗಿಯುತ್ತದೆ. ಅಡುಗೆ ಅನಿಲ ಸಿಲಿಂಡರ್ ವಿಳಾಸ ವರ್ಗಾವಣೆ ಕೂಡ ಅಷ್ಟೆ. ನಗರ ಬದಲಿಸಿದ ಜನರು ಹೊಸ ಗ್ಯಾಸ್ ಸಂಪರ್ಕ ಪಡೆಯಬೇಕಾಗಿಲ್ಲ. ಇರುವ ಗ್ಯಾಸ್ ಸಂಪರ್ಕವನ್ನು ವರ್ಗಾಯಿಸಬಹುದು.

ಸೌದೆ ತಂದು ಬೆಂಕಿ ಉರಿಸಿ,ಆಹಾರ (Food )ಬೇಯಿಸುವ ತೊಂದರೆ ಈಗಿಲ್ಲ. ಪ್ರತಿ ಮನೆಯಲ್ಲೂ ಈಗ ಗ್ಯಾಸ್ (Gas )ಅಳವಡಿಸಲಾಗಿದೆ. ನಗರಗಳಲ್ಲಂತೂ ಗ್ಯಾಸ್ ಕನೆಕ್ಷನ್ (Connection) ಸಾಮಾನ್ಯವಾಗಿದೆ. ಹಳ್ಳಿ-ಹಳ್ಳಿಗಳಿಗೂ ಈಗ ಅಡುಗೆ ಸಿಲಿಂಡರ್ ಅಳವಡಿಸಲಾಗ್ತಿದೆ. ಸರ್ಕಾರ (Government) ಉಚಿತ ಅಡುಗೆ ಅನಿಲ ಸಂಪರ್ಕ ನೀಡುವ ವ್ಯವಸ್ಥೆಯನ್ನು ಮಾಡಿದೆ. ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭ. ಹತ್ತಿರದ ಗ್ಯಾಸ್ ಏಜೆನ್ಸಿ(Gas Agency)ಯಿಂದ ಸುಲಭವಾಗಿ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಇದಕ್ಕಾಗಿ ಕೆಲವು ದಾಖಲೆ(document)ಗಳು ಬೇಕಾಗುತ್ತವೆ. ಆದರೆ ಜನರು ಒಂದು ನಗರ(City)ದಿಂದ ಮತ್ತೊಂದು ನಗರಕ್ಕೆ  ಹೋಗ್ತಿರುತ್ತಾರೆ. ಕೆಲಸ,ಶಿಕ್ಷಣದ ಕಾರಣಕ್ಕೆ ಅನೇಕರು ಪದೇ ಪದೇ ಊರು ಬದಲಿಸುವ ಅನಿವಾರ್ಯತೆ ಎದುರಾಗುತ್ತದೆ. ಪರ ಊರಿನಲ್ಲಿ ಬಾಡಿಗೆ ಮನೆ ಸಿಗಬಹುದು.ಆದ್ರೆ ಗ್ಯಾಸ್ ಸಂಪರ್ಕ ಪಡೆಯುವುದು ಕಷ್ಟ ಎನ್ನುವವರಿದ್ದಾರೆ. ಗ್ಯಾಸ್ ಸಂಪರ್ಕವನ್ನು ಸುಲಭವಾಗಿ ವರ್ಗಾಯಿಸಬಹುದು. ಇದು ಅನೇಕರಿಗೆ ತಿಳಿದಿಲ್ಲ. ಗ್ಯಾಸ್ ಸಂಪರ್ಕವನ್ನು ಹೇಗೆ ಬದಲಿಸಬಹುದು ಎಂಬುದನ್ನು ನಾವಿಂದು ನಿಮಗೆ ಹೇಳ್ತೆವೆ. 

ಗ್ಯಾಸ್ ಸಂಪರ್ಕವನ್ನು ಬದಲಾಯಿಸಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. 

ಗ್ಯಾಸ್ ಸಂಪರ್ಕ ವರ್ಗಾವಣೆ ಹೇಗೆ?
ಹಂತ 1 :  ನೀವು ಊರು ಬದಲಿಸಿದ್ದು, ಗ್ಯಾಸ್ ಸಂಪರ್ಕವನ್ನು ವರ್ಗಾಯಿಸಲು ಬಯಸಿದ್ದರೆ ನೀವು ಮೊದಲು ಈಗಿರುವ ನಗರದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬೇಕು. ನಿಮ್ಮ ಗ್ಯಾಸ್ ಸಿಲಿಂಡರ್ ಮತ್ತು ರೆಗ್ಯುಲೇಟರ್(Regulator) ಸಲ್ಲಿಸಬೇಕು. ಅದನ್ನು ಪರಿಶೀಲಿಸಿದ ನಂತರ ನೀವು ಮೊದಲು ಠೇವಣಿ (Deposit) ಮಾಡಿದ ಹಣ (Money)ವನ್ನು ಗ್ಯಾಸ್ ಏಜೆನ್ಸಿ ನಿಮಗೆ ಹಿಂದಿರುಗಿಸುತ್ತದೆ.

ನಿಮ್ಮ ಬ್ಯಾಂಕ್ ಖಾತೆಗೆ LPG ಸಬ್ಸಿಡಿ ಕ್ರೆಡಿಟ್ ಆಗುತ್ತಿದೆಯಾ?

ಹಂತ 2 :  ನೀವು ಗ್ಯಾಸ್ ಏಜೆನ್ಸಿಯಿಂದ ಫಾರ್ಮ್ ಅನ್ನು ಸಹ ಪಡೆಯುಬೇಕಾಗುತ್ತದೆ. ಅದರಲ್ಲಿ ನಿಮಗೆ ಗ್ಯಾಸ್ ಸಂಪರ್ಕವಿದೆ ಎಂದು ಬರೆಯಲಾಗುತ್ತದೆ. ನಿಮ್ಮ ಹೊಸ ನಗರದಲ್ಲಿ ಇದು ನಿಮಗೆ ಉಪಯುಕ್ತವಾಗುವುದರಿಂದ ನೀವು ಈ ಫಾರ್ಮ್ (Form )ಅನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಈ ಫಾರ್ಮ್ ಇದ್ದಲ್ಲಿ ನೀವು ಗ್ಯಾಸದ ಸಂಪರ್ಕ ಪಡೆಯುವುದು ಸುಲಭವಾಗುತ್ತದೆ.  ಇತ್ತೀಚಿನ ದಿನಗಳಲ್ಲಿ ಇ-ಫಾರ್ಮಿಂಗ್ ವ್ಯವಸ್ಥೆ ಶುರು ಮಾಡಲಾಗಿದೆ. 

ಹಂತ 3 : ಈ ಎಲ್ಲ ಕೆಲಸ ಮುಗಿದ ನಂತರ ನೀವು ವರ್ಗವಾಗುತ್ತಿರುವ   ನಿಮ್ಮ ಹೊಸ ನಗರದ ಗ್ಯಾಸ್ ಏಜೆನ್ಸಿಗೆ ಹೋಗಬೇಕು. ಅಲ್ಲಿಗೆ ಹೋಗಿ ಹಳೆ ಕಂಪನಿ ನೀಡಿದ ಫಾರ್ಮ್ ಅನ್ನು ನಿಮ್ಮ ಏಜೆನ್ಸಿಗೆ ತೋರಿಸಬೇಕು. ಇದನ್ನು ಗ್ಯಾಸ್ ಏಜೆನ್ಸಿ ಸಿಬ್ಬಂದಿ (Staff )ಪರಿಶೀಲನೆ ನಡೆಸುತ್ತದೆ.   

ಹಂತ 4 :  ಬಹುತೇಕ ಎಲ್ಲ ಕೆಲಸ ಮುಗಿದಂತೆ. ಕೊನೆಯದಾಗಿ ನೀವು  ನಿಮ್ಮ ಗ್ಯಾಸ್ ಏಜೆನ್ಸಿಗೆ ಹಣ ಪಾವತಿಸಬೇಕಾಗುತ್ತದೆ. ಗ್ಯಾಸ್ ಏಜೆನ್ಸಿಗೆ ಹಣ ನೀಡಿ,ಎಲ್ಲ ಕೆಲಸ ಮುಗಿಸಬೇಕಾಗುತ್ತದೆ. ಇದರ ನಂತರ, ನಿಮ್ಮ ಹೆಸರಿನಲ್ಲಿ ನೀಡಲಾದ ವರ್ಗಾವಣೆ ಸಂಪರ್ಕವನ್ನು ನೀವು ಪಡೆಯುತ್ತೀರಿ.

ಎಲ್ಪಿಜಿ ಸಂಪರ್ಕ ಪಡೆಯುವುದು ಕೂಡ ಈಗ ಸುಲಭವಾಗಿದೆ. ಕಂಪನಿಗಳು ಗ್ರಾಹಕರ ಕೆಲಸವನ್ನು ಸುಲಭಗೊಳಿಸಿವೆ. ಆಧಾರ್ ಕಾರ್ಡ್ (Aadhaar card )ಸಂಖ್ಯೆ ನೀಡಿದ್ರೆ ತುರ್ತು ಪರಿಸ್ಥಿತಿಯಲ್ಲಿ ಎಲ್ಪಿಜಿ ಕಂಪನಿಗಳು ಎಲ್ಪಿಜಿ ಸಂಪರ್ಕವನ್ನು ನೀಡುತ್ತವೆ. ನಂತ್ರ ವಿಳಾಸ ದಾಖಲೆ ನೀಡಿ,ಶಾಶ್ವತ ಕನೆಕ್ಷನ್ ಪಡೆಯಬೇಕಾಗುತ್ತದೆ. 

ಇದಲ್ಲದೆ ಒಂದು ಮಿಸ್ಡ್ ಕಾಲ್ ನಲ್ಲಿ ಗ್ಯಾಸ್ ಸಂಪರ್ಕ ಪಡೆಯಬಹುದು. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ 8454955555 ಈ ನಂಬರ್ ಗೆ  ಮಿಸ್ಡ್ ಕಾಲ್ ಮಾಡಿದರೆ, ಕಂಪನಿ ನಿಮ್ಮನ್ನು ಸಂಪರ್ಕಿಸುತ್ತದೆ. ಇದರ ನಂತರ ನೀವು ವಿಳಾಸ ಪುರಾವೆ ಮತ್ತು ಆಧಾರ್ ಮೂಲಕ ಗ್ಯಾಸ್ ಸಂಪರ್ಕವನ್ನು ಪಡೆಯಬಹುದು. ಈ ಸಂಖ್ಯೆಯ ಮೂಲಕ ಗ್ಯಾಸ್ ರೀಫಿಲ್  ಸಹ ಮಾಡಬಹುದು.

click me!