Government Stake in PSU Banks: ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿಗೆ ಮೋದಿ ಪ್ಲಾನ್‌: ಸರ್ಕಾರದ ಪಾಲು 26%?

Published : Dec 18, 2021, 07:58 AM IST
Government Stake in PSU Banks: ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿಗೆ ಮೋದಿ ಪ್ಲಾನ್‌: ಸರ್ಕಾರದ ಪಾಲು 26%?

ಸಾರಾಂಶ

*ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲು 26%ಗೆ ಇಳಿಕೆ *ಬಹುಪಾಲು ಇಲ್ಲದಿದ್ದರೂ ಸರ್ಕಾರದ ಬಳಿಯೇ ಇರಲಿದೆ ಅಧಿಕಾರ *ಬ್ಯಾಂಕಿಂಗ್‌ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮೋದಿ ಪ್ಲಾನ್‌ *ಮಾರುಕಟ್ಟೆಗೆ ಸಾಲದ ಹರಿವು ಹೆಚ್ಚಿಸಲು ಕ್ರಾಂತಿಕಾರಿ ಕ್ರಮಕ್ಕೆ ಚಿಂತನೆ

ನವದೆಹಲಿ (ಡಿ. 18): ದೇಶದಲ್ಲಿ ಬ್ಯಾಂಕಿಂಗ್‌ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದ (Privatization of Banks) ನಂತರ ಅತ್ಯಂತ ಮಹತ್ವದ ಬ್ಯಾಂಕಿಂಗ್‌ ಸುಧಾರಣೆ ಎನ್ನಲಾದ ಕ್ರಮವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮುಂದಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (Nationalised Banks) ಸರ್ಕಾರದ ಪಾಲನ್ನು ಶೇ.26ರವರೆಗೆ ಇಳಿಸಲು ಅನುಕೂಲವಾಗುವಂತೆ ನಿಯಮ ತಿದ್ದುಪಡಿಗೆ ಚಿಂತನೆ ನಡೆಸಿದ್ದಾರೆ. ಆದರೆ, ಆಗಲೂ ಬ್ಯಾಂಕಿನ ಮೇಲಿನ ಸರ್ಕಾರದ ಅಧಿಕಾರ ಮೊದಲಿನಂತೆಯೇ ಇರುವಂತೆ ಯೋಜನೆ ರೂಪಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಸದ್ಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಷೇರು (Government Stake) ಕನಿಷ್ಠ ಶೇ.51ರಷ್ಟುಇರಬೇಕು. ಇದಕ್ಕಿಂತ ಕೆಳಗೆ ಸರ್ಕಾರದ ಪಾಲನ್ನು ಇಳಿಸಿದರೆ ಬ್ಯಾಂಕ್‌ ಖಾಸಗೀಕರಣಗೊಳ್ಳುತ್ತದೆ. ಅಂದರೆ ಬ್ಯಾಂಕಿನ ಮೇಲಿನ ಹಿಡಿತವನ್ನು ಸರ್ಕಾರ ಕಳೆದುಕೊಳ್ಳುತ್ತದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಒಡೆತನವನ್ನು ಶೇ.26ರವರೆಗೆ ಇಳಿಸಬೇಕು. 

ವಿದೇಶಿ ಬಂಡವಾಳ ಹೂಡಿಕೆದಾರರು ಅಥವಾ ಖಾಸಗಿ ಕಂಪನಿಗಳಿಗೆ ಬಹುಪಾಲು ಖರೀದಿಸಲು ಅವಕಾಶ ನೀಡಬೇಕು. ಆದರೂ ನಿಯಂತ್ರಣಾಧಿಕಾರ ಸರ್ಕಾರದ ಬಳಿಯೇ ಉಳಿಯಬೇಕು ಎಂದು ಸಂಬಂಧಪಟ್ಟಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಏಕೆ ಈ ಕ್ರಮಕ್ಕೆ ಚಿಂತನೆ?

ಹೀಗೆ ಮಾಡುವುದರಿಂದ ಆರ್ಥಿಕತೆಗೆ ಸಾಲದ ಹರಿವು ಹೆಚ್ಚುತ್ತದೆ. ಬ್ಯಾಂಕುಗಳಿಗೆ ಬಂಡವಾಳ ಹರಿದುಬರುತ್ತದೆ. ನಿಯಂತ್ರಣ ಸರ್ಕಾರದ ಬಳಿಯೇ ಉಳಿಯುವುದರಿಂದ ಜನರಲ್ಲಿ ಬ್ಯಾಂಕಿನ ಮೇಲಿನ ವಿಶ್ವಾಸ ಹಾಗೇ ಇರುತ್ತದೆ. ಅಲ್ಲದೆ ಮುಂದೆ ಅಗತ್ಯಬಿದ್ದರೆ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವುದು ಸುಲಭವಾಗುತ್ತದೆ. ಸಾಕಷ್ಟುಬ್ಯಾಂಕುಗಳನ್ನು ಖಾಸಗೀಕರಣಗೊಳಿಸಿದ ಮೇಲೂ ಸದ್ಯ ಸರ್ಕಾರದ ಬಳಿಯೇ ಬ್ಯಾಂಕಿಂಗ್‌ ಕ್ಷೇತ್ರದ ಮುಕ್ಕಾಲು ಪಾಲು ಬಂಡವಾಳ ಮತ್ತು ಸಾಲ ಇದೆ. ಇದು ಕೂಡ ಇಳಿಕೆಯಾಗುತ್ತದೆ ಎಂದು ಸರ್ಕಾರ ಯೋಚಿಸುತ್ತಿದೆ. ಆದರೆ, ಈ ಪ್ರಸ್ತಾವ ಇನ್ನೂ ಚಿಂತನೆಯ ಮಟ್ಟದಲ್ಲಿದೆ. ಅಂತಿಮಗೊಂಡರೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಸಂಸತ್ತಿನಲ್ಲಿ ಮಂಡಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಸರ್ಕಾರದ ಚಿಂತನೆಗಳು

1. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರ್ಕಾರದ ಪಾಲನ್ನು 51%ನಿಂದ 26%ಗೆ ಇಳಿಸುವುದು

2. ಬ್ಯಾಂಕ್‌ನಲ್ಲಿ ಸರ್ಕಾರದ ಪಾಲು 26% ಇದ್ದರೂ ‘ಸರ್ಕಾರಿ ಬ್ಯಾಂಕ್‌’ ಮಾನ್ಯತೆ ಉಳಿಸುವುದು

3. ಬ್ಯಾಂಕ್‌ ಖಾಸಗೀಕರಣಕ್ಕೆ ಸಂಸತ್ತಿನ ಅನುಮೋದನೆ ನೀಡುವ ಪ್ರಕ್ರಿಯೆಗೆ ವೇಗ ನೀಡುವುದು

4. ಭಾರತೀಯ ಬ್ಯಾಂಕ್‌ಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗಿರುವ 20% ಮಿತಿ ಏರಿಸುವುದು

5. ಒಬ್ಬ ಷೇರುದಾರರಿಗೆ ಇರುವ ಶೇ.10ರಷ್ಟುಮತದಾನದ ಮಿತಿಯನ್ನು ತೆಗೆದುಹಾಕುವುದು

ಇದನ್ನೂ ಓದಿ:

1) Budget 2022:ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರ ಬಜೆಟ್ ಪೂರ್ವ ಸಭೆ

2) Women Retirement Plan: ಪುರುಷರಿಗಿಂತ ಹೆಚ್ಚು ಉಳಿಸೋದು ಹೆಣ್ಮಕ್ಕಳು!

3) ಮತ್ತೊಂದು ಉನ್ನತ ಹುದ್ದೆ ಅಲಂಕರಿಸಿದ ಭಾರತೀಯ ನಾರಿ, ಕಷ್ಟಪಟ್ಟು MBA ಮಾಡಿದ್ದು ಸಾರ್ಥಕ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!