
ನವದೆಹಲಿ(ಆ.28): ಕೃಷಿ, ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಡ್ರೋಣ್ ಬಳಸಲು ಡಿ.1ರಿಂದ ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಪಿಜ್ಜಾ, ಬರ್ಗರ್ ಮತ್ತಿತರ ಆಹಾರ ಪದಾರ್ಥಗಳನ್ನು ಡ್ರೋಣ್ ಮೂಲಕ ಸಾಗಿಸಲು ಅವಕಾಶ ನೀಡಲಾಗಿಲ್ಲ.
ಈ ಸಂಬಂಧ ನೂತನ ನಿಯಮಾವಳಿ ಬಿಡುಗಡೆ ಮಾಡಲಾಗಿದೆ. ಎಲ್ಲಾ ಡ್ರೋಣ್ ಗಳು ಹಗಲು ಮಾತ್ರ ಕಾರ್ಯನಿರ್ವಹಿಸಬೇಕು. 450 ಮೀಟರ್ ಎತ್ತರದಲ್ಲಿ ಡ್ರೋನ್‌ಗಳು ಹಾರಾಟ ನಡೆಸಬೇಕು. ನ್ಯಾನೋ ಡ್ರೋಣ್ ಗಳು, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಮತ್ತು ಗುಪ್ತಚರ ಸಂಸ್ಥೆಗಳ ಡ್ರೋಣ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಡ್ರೋನ್‌ಗಳನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಡ್ರೋಣ್ ಗಳನ್ನು ಅವುಗಳ ತೂಕದ ಆಧಾರದಲ್ಲಿ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. 250 ಗ್ರಾಂ ತೂಕದ 50 ಅಡಿ ಎತ್ತರ ಹಾರುವ ಡ್ರೋಣ್ ಗಳಿಗೆ ಪರವಾನಿಗೆ ಅಗತ್ಯವಿಲ್ಲ. 2 ಕೆಜಿಗಿಂತ ಹೆಚ್ಚು ತೂಕದ ಡ್ರೋಣ್ ಗಳನ್ನು ನೋಂದಾಯಿಸಿ, ಅವುಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ(ಯುಐಎನ್) ಪಡೆಯಬೇಕು.
ಇಂತಹ ಲೈಸೆನ್ಸ್ ಪಡೆಯಲು 18 ವರ್ಷ ವಯಸ್ಕರಾಗಿರಬೇಕು ಮತ್ತು ಇಂಗ್ಲಿಷ್ ಜ್ಞಾನದೊಂದಿಗೆ ಕನಿಷ್ಠ 10ನೇ ತರಗತಿ ತೇರ್ಗಡೆ ಹೊಂದಿರಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.