ಕೊರೋನಾ ನಡುವೆಯೂ ಒಕೆಕ್ರೆಡಿಟ್ ಕೊಟ್ಟ ಒಂದೊಳ್ಳೆ ಮಾಹಿತಿ!

By Suvarna NewsFirst Published Dec 8, 2020, 6:23 PM IST
Highlights

ಕೊರೋನಾ ಆತಂಕದ ನಡುವೆಯೂ ಒಂದು ಶುಭ ಸುದ್ದಿ/ ಒಕೆಕ್ರೆಡಿಟ್ ದತ್ತಾಂಶ ಹೇಳಿದ ಸತ್ಯ/  ಹಬ್ಬದ ತಿಂಗಳುಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಳ/ ಆಭರಣ ಮತ್ತು ಸಿಹಿತಿಂಡಿ ಮಾರಾಟ ಹೆಚ್ಚಳ

ಬೆಂಗಳೂರು (ಡಿ. 08)  ಕೊರೋನಾ ಆತಂಕ ಕಾಡಿದ್ದರೂ  ಹಬ್ಬದ  ಋತುವಿನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರವು ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಈ ವಲಯಗಳು ವೇಗವಾಗಿ ಚೇತರಿಸಿಕೊಂಡಿವೆ. ಸಿಹಿತಿಂಡಿಗಳ ಮಾರಾಟ, ಡಿಜಿಟಲ್ ಬುಕ್‌ಕೀಪಿಂಗ್ ಅಪ್ಲಿಕೇಶನ್‌ ಒಕೆಕ್ರೆಡಿಟ್ ಸಂಗ್ರಹಿಸಿದ ದತ್ತಾಂಶವು ಇದನ್ನು ಬಹಿರಂಗಪಡಿಸಿದೆ. 

ಬಳಕೆದಾರರ ನಡವಳಿಕೆಯನ್ನು ಆಧರಿಸಿ, ಹಬ್ಬದ  ಋತುವಿನಲ್ಲಿ ವ್ಯವಹಾರಗಳು ಹೇಗೆ ಕಾರ್ಯನಿರ್ವಹಿಸಿದವು ಎಂಬ ಡೇಟಾವನ್ನು ಒಕೆಕ್ರೆಡಿಟ್ ಸಂಗ್ರಹಿಸಿದೆ. ಅಂಕಿಅಂಶಗಳ
ಪ್ರಕಾರ, 2019 ಕ್ಕೆ ಹೋಲಿಸಿದರೆ ಈ ದೀಪಾವಳಿಯ ಸಮಯದಲ್ಲಿ ಸಿಹಿತಿಂಡಿಗಳ ಮಾರಾಟವು ಶೇ. 60 ರಷ್ಟು ಹೆಚ್ಚಾಗಿದೆ. ರಂಗೋಲಿ ಮತ್ತು ದೀಪಗಳಂತಹ ಇತರ ವಸ್ತುಗಳ ಮಾರಾಟವು ಹಿಂದಿನ ವರ್ಷದಂತೆಯೇ ಇದೆ.

ಪೆಟ್ರೋಲ್ ದರ ಗರಿಷ್ಠ ಮಟ್ಟ ತಲುಪಲು ಕಾರಣ ಏನು? 

ಅಪ್ಲಿಕೇಶನ್‌ನಲ್ಲಿನ ವಹಿವಾಟಿನ ಬೆಳವಣಿಗೆಗೆ ಸಣ್ಣ ಉದ್ಯಮಗಳು ಹೆಚ್ಚಿನ ಕೊಡುಗೆ ನೀಡಿವೆ ಎಂದು ಒಕೆಕ್ರೆಡಿಟ್ ಡೇಟಾ ಹೇಳುತ್ತದೆ. ಹಬ್ಬದ ಅವಧಿಯಲ್ಲಿ ಅಪ್ಲಿಕೇಶನ್‌ನಲ್ಲಿನ ಒಟ್ಟಾರೆ ವಹಿವಾಟುಗಳು ಶೇ. 12 ರಷ್ಟು ಏರಿಕೆ ಕಂಡಿದ್ದು ಬೆಳವಣಿಗೆ ದರ ಶೇ. 55ಕ್ಕೆ ಏರಿದೆ.

ಹಬ್ಬದ  ಋತುವಿನಲ್ಲಿ ಹಿಂದಿನ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಆಭರಣಗಳ ವಹಿವಾಟು ಶೇ. 16 ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.  22 ರಷ್ಟು ಕಡಿಮೆಯಾಗಿತ್ತು.  ಒಟ್ಟಾರೆ ಆರ್ಥಿಕ ಚಟುವಟಿಕೆಯಲ್ಲಿನ ಕುಸಿತ ತಡೆಯಲು ವ್ಯಾಪಾರಿಗಳು ಸಣ್ಣ ಮೊತ್ತದ ವ್ಯಾಪಾರಿಗಳು ಸಾಲ ನೀಡುತ್ತಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಕಾಫಿ ಡೇಯಲ್ಲಿ ಬದಲಾವಣೆ  ಗಾಳಿ; ಮಾಳವಿಕಾಗೆ ಸಿಇಒ ಪಟ್ಟ

2019 ಕ್ಕೆ ಹೋಲಿಸಿದರೆ ಈ ವರ್ಷದ ಹಬ್ಬದ ಋತುವಿನಲ್ಲಿ  ಒಕೆಕ್ರೆಡಿಟ್‌ನ ವಹಿವಾಟು ಬುಕ್‌ಕೀಪಿಂಗ್ ಮೌಲ್ಯ ಶೇ. 13 ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿಯೇ ಅತ್ಯಧಿಕ ಬೆಳವಣಿಗೆ ಕಂಡಿದೆ.

ದೀಪಾವಳಿಯನ್ನು ಆರ್ಥಿಕ ವರ್ಷದ ಅಂತ್ಯ ಎಂದು ಕರೆಯಲಾಗುತ್ತದೆ, ದೀಪಾವಳಿಯ ಎರಡನೇ ದಿನವು ಮುಂದಿನ ಹಣಕಾಸು ವರ್ಷದ ಆರಂಭವನ್ನು ಸೂಚಿಸುತ್ತದೆ. ಹಬ್ಬದ ಅವಧಿಯಲ್ಲಿ ಒಕೆಕ್ರೆಡಿಟ್ 2 ಮಿಲಿಯನ್ ಖಾತೆಗಳಲ್ಲಿ ವಹಿವಾಟು ನಡೆಸಿದೆ.  ಸಣ್ಣ ಪಟ್ಟಣಗಳು ಮತ್ತು ಒಳನಾಡಿನ ಮೈಕ್ರೋ ಚಿಲ್ಲರೆ  ವ್ಯಾಪಾರಿಗಳು ಹಿಂದೆಂದಿಗಿಂತಲೂ ಹೆಚ್ಚು ಡಿಜಿಟಲ್ ಬುಕಿಂಗ್ ಅಳವಡಿಸಿಕೊಂಡಿದ್ದಾರೆ.  ಡಿಜಿಟಲೀಕರಣ ಎಲ್ಲದಕ್ಕೂ ನೆರವಾಗಿದೆ ಎಂದು ಅಂಕಿ ಅಂಶ  ಹೇಳುತ್ತದೆ.

ಒಕೆಕ್ರೆಡಿಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ ಹರ್ಷ್ ಪೋಖರ್ನಾ ಅವರ ಪ್ರಕಾರ, ಡಿಜಿಟಲ್ ಬುಕ್‌ಕೀಪಿಂಗ್ ಉದ್ಯಮದ ಒಟ್ಟಾರೆ ಬೆಳವಣಿಗೆ  ಮೇಲೆ ಪರಿಣಾಮ ಬೀರಿದೆ. ಡಿಜಿಟಲ್ ಸಹಾಯದೊಂದಿಗೆ ವ್ಯಾಪಾರ ವಹಿವಾಟು ನಡೆಯುತ್ತಿದ್ದು  ಕೊರೋನಾ ಭೈದ ನಡುವೆಯೂ ಸಮರ್ಪಕ ಅಭಿವೃದ್ಧಿ ಸಾಧಿಸಿದ್ದೇವೆ ಎಂದಿದ್ದಾರೆ. 

click me!