Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಮಾಲೀಕ, 3.25 ಲಕ್ಷ ಕೋಟಿ ರೂಗೆ ಸಾಮಾಜಿಕ ಜಾಲತಾಣ ಖರೀದಿ!

By Suvarna News  |  First Published Apr 26, 2022, 1:55 AM IST
  • ಎಲಾನ್ ಮಸ್ಕ್ ಡೀಲ್ ಒಪ್ಪಿದ ಟ್ವಿಟರ್
  • 44 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಸೇಲ್
  • ಎಲಾನ್ ಮಸ್ಕ್ ಮಾಲೀಕತ್ವದಲ್ಲಿ ಟ್ವಿಟರ್
     

ನ್ಯೂಯಾರ್ಕ್(ಏ.26): ವಿಶ್ವದ ಅತೀ ದೊಡ್ಡ ಹಾಗೂ ಪ್ರಬಲ ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್‌ ಇದೀಗ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಪಾಲಾಗಿದೆ. ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ನೀಡಿದ್ದ ಆಫರ್ ಒಪ್ಪಿಕೊಂಡಿರುವ ಟ್ವಿಟರ್ ಬರೋಬ್ಬರಿ 3.25 ಲಕ್ಷ ಕೋಟಿ ರೂಪಾಯಿಗೆ(44 ಬಿಲಿಯನ್ ಅಮೆರಿಕನ್ ಡಾಲರ್) ಮಾರಾಟವಾಗಿದೆ.

ಎಲಾನ್ ಮಸ್ಕ್ 44 ಬಿಲಿಯನ್ ಅಮೆರಿಕನ್ ಡಾಲರ್ ಆಫರ್ ನೀಡಿದ ಬೆನ್ನಲ್ಲೇ ಟ್ವಿಟರ್ ಪಾಲುದಾರರೊಂದಿಗೆ ಮಾತುಕತೆ ಆರಂಭಗೊಂಡಿತ್ತು. ಇದೀಗ ಟ್ವಿಟರ್ ತನ್ನ ಷೇರುದಾರರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದೆ. ಪ್ರತಿ ಷೇರಿಗೆ 54.20 ಅಮೆರಿಕನ್ ಡಾಲರ್ ಒಪ್ಪದಂವನ್ನು ಟ್ವಿಟರ್ ಘೋಷಿಸಿತು. ಎಲಾನ್ ಮಸ್ಕ್ ನಾಲ್ಕು ದಿನಗಳ ಹಿಂದೆ ಈ ಆಫರ್ ನೀಡಿದ್ದರು. ಅಷ್ಟೇ ವೇಗದಲ್ಲಿ ಟ್ವಿಟರ್ ಮಸ್ಕ್ ತೆಕ್ಕೆಗೆ ಜಾರಿಕೊಂಡಿದೆ.

Tap to resize

Latest Videos

undefined

ಎಲಾನ್ ಮಸ್ಕ್ ಟ್ವಿಟರ್ ಖರೀದಿ ಒಪ್ಪಂದ ಬೆನ್ನಲ್ಲೇ ಎಷ್ಟಾಗಿದೆ ಟೆಸ್ಲಾ ಷೇರು ಬೆಲೆ?

ಪ್ರತಿ ಷೇರಿಗೆ 4150 ರು. ನೀಡುವುದಾಗಿ ಮಸ್‌್ಕ ನೀಡಿದ್ದ ಆಫರ್‌ ಕಂಪನಿಯನ್ನು ಒತ್ತಡಕ್ಕೆ ಸಿಲುಕಿಸಿತ್ತು. ಒಂದು ವೇಳೆ ಖರೀದಿಯ ನಡೆದರೆ ಟೈಮ್‌ಲೈನ್‌, ಶುಲ್ಕ ಮುಂತಾದವುಗಳು ಹೇಗಿರಬೇಕು ಎಂದು ಎರಡೂ ಕಡೆಯವರೂ ಚರ್ಚೆ ನಡೆಸಿದ್ದಾರೆ. ಎಲ್ಲಾ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಏ.14ರಂದು ಟ್ವೀಟರ್‌ನ ಪ್ರತಿ ಷೇರಿಗೆ 4150 ರು. ನೀಡುವ ಮೂಲಕ 3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸುವುದಾಗಿ ಮಸ್‌್ಕ ಆಫರ್‌ ನೀಡಿದ್ದರು.

ಎಪ್ರಿಲ್ ತಿಂಗಳ ಆರಂಭದಲ್ಲಿ ಷೇರು ಖರೀದಿ, ಈಗ ಸಂಸ್ಥೆಯನ್ನೇ ಖರೀದಿ
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್ಕ್ ಎಪ್ರಿಲ್ ತಿಂಗಳ ಆರಂಭದಲ್ಲಿ ಪ್ರಸಿದ್ಧ ಸಾಮಾಜಿಕ ಜಾಲತಾಣವಾದ ಟ್ವೀಟರಿನ 7.35 ಕೋಟಿ ಷೇರು ಖರೀದಿಸಿದ್ದಾರೆ. ಈ ಮೂಲಕ ಟ್ವೀಟರಿನ ಶೇ.9.2 ರಷ್ಟುಪಾಲುದಾರಿಕೆ ಪಡೆದುಕೊಂಡಿದ್ದಾರೆ. ಈ ಖರೀದಿಯೊಂದಿಗೆ ಮಸ್ಕ್, ಟ್ವೀಟರ್‌ನ ಅತಿದೊಡ್ಡ ಷೇರುದಾರರಾಗಿ ಹೊರಹೊಮ್ಮಿದ್ದರು. ಮಾರ್ಚ್ ತಿಂಗಳಲ್ಲಿ ಮಸ್ಕ್ ಟ್ವೀಟರ್‌ನಲ್ಲಿ ಮುಕ್ತವಾಗಿ ಸಂವಹನ ನಡೆಸುವ ಸಾಮರ್ಥ್ಯದ ಬಗ್ಗೆ ಪ್ರಶ್ನಿಸಿದ್ದರು. ಮುಂದೊಂದು ದಿನ ಮಸ್ಕ್ ಆಕ್ರಮಣಕಾರಿ ಮಾಲೀಕತ್ವ ನೀತಿ ಮೂಲಕ ಟ್ವೀಟರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೂಡಿಕೆ ತಜ್ಞರು ಅಭಿಪ್ರಾಯ ಪಟ್ಟಿದ್ದರು.

Iphone ಮೀರಬಹುದಾದ ಟೆಸ್ಲಾ ಪೈ ಫೋನ್, ಹೀಗಿದೆ ಫೀಚರ್ಸ್‌!

ಇದೀಗ ಈ ಎಲ್ಲಾ ವಿಚಾರ ನಿಜವಾಗಿದೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿ ಇದೀಗ ಸಾಮಾಜಿಕ ಜಾಲತಾಣ ದಿಗ್ಗಜನನ್ನೇ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಆಗಿರುವ ಎಲಾನ್ ಮಸ್ಕ್ ಸ್ಪೇಸ್ ಎಕ್ಸ್ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಮೂಲಕ ಮಂಗಳಯಾನಕ್ಕೂ ಸಜ್ಜಾಗಿದ್ದಾರೆ. ಇನ್ನು ಎಲಾನ್ ಮಸ್ಕ್ ಸ್ಟಾರ್ ಲಿಂಕ್ ಬ್ರಾಂಡ್ ಬ್ಯಾಂಡ್ ಸೇವೆ ವಿಶ್ವದಲ್ಲೇ ಜನಪ್ರಿಯವಾಗಿದೆ.

ಜಗತ್ತಿನ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಮಾಲೀಕತ್ವದ ಸ್ಪೇಸ್‌ ಎಕ್ಸ್‌ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ ಸರ್ಕಾರದಿಂದ ಅನುಮತಿ ಕೋರಿದೆ.

‘ಸ್ಪೇಸ್‌ ಎಕ್ಸ್‌ ಮಾಲೀಕತ್ವದ ಅಧೀನ ಸಂಸ್ಥೆ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಕಮ್ಯುನಿಕೇಷನ್‌ ಪ್ರೈ.ಲಿ (ಎಸ್‌ಎಸ್‌ಸಿಪಿಎಲ್‌) ಭಾರತದಲ್ಲಿ ನ.1ರಿಂದ ತನ್ನ ಕಚೇರಿಯನ್ನು ಆರಂಭಿಸಿದೆ. ನಾವು ಇನ್ಮುಂದೆ ಪರವಾನಗಿ ಪಡೆಯಲು, ಬ್ಯಾಂಕ್‌ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದು’ ಕಂಪನಿಯ ಭಾರತದ ನಿರ್ದೇಶಕ ಸಂಜಯ್‌ ಭಾರ್ಗವ ತಿಳಿಸಿದ್ದಾರೆ.

click me!