Elon musk Twitter Deal 3 ಲಕ್ಷ ಕೋಟಿ ರೂ ಮೊತ್ತಕ್ಕೆ ಟ್ವಿಟರ್ ಖರೀದಿ, ಅಂತಿಮ ಹಂತದಲ್ಲಿ ಎಲಾನ್ ಮಸ್ಕ್ ಡೀಲ್!

By Suvarna News  |  First Published Apr 25, 2022, 10:28 PM IST
  • 43 ಬಿಲಿಯನ್ ಡಾಲರ್ ಮೊತ್ತದ ಟ್ವಿಟರ್ ಡೀಲ್
  • ಅಂತಿಮ ಘಟ್ಟದಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಪ್ರಸ್ತಾಪ 
  • ಶೀಘ್ರದಲ್ಲೇ ಟ್ವಿಟರ್‌ಗೆ ಹೊಸ ಬಾಸ್
     

ಕ್ಯಾಲಿಫೋರ್ನಿಯಾ(ಏ.25):  ವಿಶ್ವದ ಅತೀ ದೊಡ್ಡ ಸಾಮಾಜಿಕ ಜಾಲತಾಣ ಟ್ವಿಟರ್‌ಗೆ ನೂತನ ಮುಖ್ಯಸ್ಥನ ಘೋಷಣೆ ಶೀಘ್ರದಲ್ಲೇ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಪ್ರಸ್ತಾಪ ಒಪ್ಪಿರುವ ಟ್ಟಿಟರ್, ಟ್ವಿಟರ್ ಮಾರಾಟ ಡೀಲ್ ಅಂತಿಮಗೊಂಡಿದೆ. ಆದರೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ರಾಯರ್ಸ್ ಸುದ್ದಿ ಸಂಸ್ತೆ ವರದಿ ಮಾಡಿದೆ.

ಟೆಸ್ಲಾ ಸಿಇಒ ಎಲಾನ್ ಮಸ್ಕ್ 3.25 ಲಕ್ಷ ಕೋಟಿ ರೂಪಾಯಿ ಮೊತ್ತಕ್ಕೆ ಟ್ವಿಟರ್ ಖರೀದಿಸಲು ಪ್ರಸ್ತಾಪ ಸಲ್ಲಿಸಿದ್ದರು. ಇದು ಅತ್ಯುತ್ತಮ ಹಾಗೂ ಅಂತಿಮ ಡೀಲ್ ಎಂದು  ಟೆಸ್ಲಾ ಹೇಳಿತ್ತು. ಈ ಪ್ರಸ್ತಾಪ ಸ್ವೀಕರಿಸಲು ಟ್ವಿಟರ್ ಇಂಕ್ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. 

Tap to resize

Latest Videos

undefined

ಮಸ್ಕ್ ಟೆಸ್ಲಾ ಸ್ಥಂಸ್ಥಾಪಕರಲ್ಲ ಎಂದ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಉತ್ತರವೇನು?

ಟ್ವಿಟರ್‌ನಲ್ಲಿ ಶೇಕಡಾ 9.2 ರಷ್ಟು ಪಾಲು ಹೊಂದಿರುವ ಎಲಾನ್ ಮಸ್ಕ್, 43 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಟ್ವಿಟರ್ ಸಾಮಾಜಿಕ ಜಾಲತಾಣ ಖರೀದಿಸಲು ಪ್ರಸ್ತಾಪ ಮುಂದಿಟ್ಟಿದ್ದರು. ಪ್ರತಿ ಷೇರಿಗೆ 4150 ರು. ನೀಡುವುದಾಗಿ ಮಸ್ಕ್ ನೀಡಿದ್ದ ಆಫರ್‌ ಕಂಪನಿಯನ್ನು ಒತ್ತಡಕ್ಕೆ ಸಿಲುಕಿಸಿತ್ತು. ಒಂದು ವೇಳೆ ಖರೀದಿಯ ನಡೆದರೆ ಟೈಮ್‌ಲೈನ್‌, ಶುಲ್ಕ ಮುಂತಾದವುಗಳು ಹೇಗಿರಬೇಕು ಎಂದು ಎರಡೂ ಕಡೆಯವರೂ ಚರ್ಚೆ ನಡೆಸಿದ್ದಾರೆ. ಎಲ್ಲಾ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಏ.14ರಂದು ಟ್ವೀಟರ್‌ನ ಪ್ರತಿ ಷೇರಿಗೆ 4150 ರು. ನೀಡುವ ಮೂಲಕ 3 ಲಕ್ಷ ಕೋಟಿ ರು.ಗೆ ಟ್ವೀಟರ್‌ ಖರೀದಿಸುವುದಾಗಿ ಮಸ್ಕ್ ಆಫರ್‌ ನೀಡಿದ್ದರು. 

ಟ್ವಿಟರ್ ನಿರ್ದೇಶಕ ಮಂಡಳಿ ಸೇರಿದ ಬೆನ್ನಲ್ಲೇ ಖರೀದಿ ಆಫರ್:
ಪ್ರಸ್ತುತ ಟ್ವೀಟರ್‌ನಲ್ಲಿ ಶೇ.9ರಷ್ಟುಷೇರು ಹೊಂದಿರುವ ಟೆಸ್ಲಾ ಸಿಇಒ ಮಸ್ಕ್ ಟ್ವೀಟರ್‌ನ ನಿರ್ದೇಶಕ ಮಂಡಳಿಗೆ ಸೇರಲು ನಿರಾಕರಿಸಿದ ಕೆಲವು ದಿನಗಳಲ್ಲೇ ಇಡೀ ಕಂಪನಿಯನ್ನು ಖರೀದಿಸಲು ಆಫರ್‌ ನೀಡಿದ್ದಾರೆ.

ಟ್ವೀಟರ್‌ನಲ್ಲಿ ಈಗಾಗಲೇ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಎಲಾನ್ ಮಸ್ಕ್ ಉಳಿದ ಷೇರುಗಳನ್ನು ಪ್ರತಿ ಷೇರಿಗೆ 4,150 ರು. ನೀಡುವ ಮೂಲಕ ಖರೀದಿಸುವ ಆಫರ್‌ ನೀಡಿದ್ದಾರೆ. ‘ಈ ಬೆಲೆ ಅತ್ಯುತ್ತಮ ಮತ್ತು ಅಂತಿಮ. ಒಂದು ವೇಳೆ ನನ್ನ ಆಫರ್‌ ನಿರಾಕರಿಸಿದರೆ ಬೇರೆ ಯೋಚನೆ ಮಾಡಬೇಕಾದೀತು’ ಎಂದು ಎಚ್ಚರಿಕೆ ಧಾಟಿಯಲ್ಲಿ ಮಾತನಾಡಿದ್ದಾರೆ.

41 ಬಿಲಿಯನ್ ಡಾಲರ್ ಕ್ಯಾಶ್ ಕೊಡ್ತೇನೆ, ಟ್ವಿಟರ್ ಕಂಪನಿ ಕೊಡ್ತೀರಾ ಎಲಾನ್ ಮಸ್ಕ್ ನೇರ ಆಫರ್!

‘ಜಗತ್ತಿನಾದ್ಯಂತ ಮುಕ್ತ ಮಾತುಕತೆಗೆ ವೇದಿಕೆಯಾಗಬಹುದು ಎಂಬ ಕಾರಣಕ್ಕೆ ನಾನು ಟ್ವೀಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಮುಕ್ತ ಮಾತುಕತೆ ಅವಶ್ಯಕವಾಗಿದೆ. ಆದರೆ ಟ್ವೀಟರ್‌ ಈಗಿರುವ ರೂಪದಲ್ಲಿ ಈ ಸಾಮಾಜಿಕ ಅಗತ್ಯವನ್ನು ಪೂರೈಸುವುದಿಲ್ಲ. ಟ್ವೀಟರ್‌ನ್ನು ಒಂದು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

ಟ್ಲಿಟರ್‌ ಅನ್ನು ಜಾಹೀರಾತು ಮುಕ್ತ ವೆಬ್‌ಸೈಟಾಗಿ ಮಾಡುವುದು ಸೇರಿದಂತೆ ಇನ್ನಿತರ ಬದಲಾವಣೆಗಳನ್ನು ತರಲು ಬಯಸಿದ್ದರು. ಆದರೆ ಟ್ವೀಟರ್‌ ಸಿಇಒ ಪರಾಗ್‌ ಅಗರ್‌ವಾಲ್‌ 2021ರಲ್ಲಿ ಟ್ವೀಟರಿನಲ್ಲಿ ಶೇ. 90 ರಷ್ಟುಆದಾಯವು ಜಾಹೀರಾತಿನ ಮೂಲಕವೇ ಬರುವ ಕಾರಣ ಮಸ್ಕ್ ಪ್ರಸ್ತಾಪ ವಿರೋಧಿಸಿದ್ದರು. ಇದೀಗ ಮಸ್ಕ್ ಸಂಪೂರ್ಣ ಟ್ವಿಟರ್ ಖರೀದಿಗೆ ಮುಂದಾಗಿದ್ದಾರೆ. 

click me!