Elon musk Twitter deal ಎಲಾನ್ ಮಸ್ಕ್ ಟ್ವಿಟರ್ ಖರೀದಿ ಒಪ್ಪಂದ ಬೆನ್ನಲ್ಲೇ ಎಷ್ಟಾಗಿದೆ ಟೆಸ್ಲಾ ಷೇರು ಬೆಲೆ?

By Suvarna NewsFirst Published Apr 26, 2022, 12:10 AM IST
Highlights
  • 3.25 ಲಕ್ಷ ಕೋಟಿ ರೂಪಾಯಿಗೆ ಟ್ವಿಟರ್ ಖರೀದಿ ಆಫರ್
  • ಮಸ್ಕ್ ಭಾರಿ ಮೊತ್ತದ ಆಫರ್ ಹಿಂದೆ ಟ್ವಿಟರ್
  • ಒಪ್ಪಂದ ಬೆನ್ನಲ್ಲೇ ಷೇರು ಪೇಟೆಯಲ್ಲಿ ಸಂಚಲನ

ನ್ಯೂಯಾರ್ಕ್(ಏ.25): ಟ್ವಿಟರ್ ಖರೀದಿಗೆ ಮುಂದಾದ ವಿಶ್ವದ ನಂಬರ್ 1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಗುಡ್ ನ್ಯೂಸ್ ಸಿಕ್ಕಿದೆ. ಎಸ್ಕ್ ಭಾರಿ ಮೊತ್ತದ ಆಫರ್ ಒಪ್ಪಿಕೊಳ್ಳಲು ನಿರ್ಧರಿಸಿರುವ ಟ್ವಿಟರ್ ಅಧಿಕೃತ ಘೋಷಣೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಟ್ವಿಟರ್ ಖರೀದಿ ಬೆನ್ನಲ್ಲೇ ಟ್ವಿಟರ್ ಷೇರು ಮೌಲ್ಯ ಶೇಕಡಾ 5.35 ರಷ್ಟು ಏರಿಕೆ ಕಂಡಿದೆ. ಆದರೆ ಟೆಸ್ಲಾ ಷೇರುಗಳು ಶೇಕಡಾ 0.52 ರಷ್ಟು ಕುಸಿತ ಕಂಡಿದೆ.

978.97 ಅಮೆರಿಕನ್ ಡಾಲರ್ ಮೊತ್ತದಲ್ಲಿ ಆರಂಭಗೊಂಡ ಟೆಸ್ಲಾ ಷೇರು ವಹಿವಾಟು ಅಷ್ಟೇ ವೇಗದಲ್ಲಿ 1003.83 ಅಮೆರಿಕನ್ ಡಾಲರ್ ಮೌಲ್ಯ ಪಡೆದುಕೊಂಡಿತು. ಹಿಂದಿನ ದಿನ 1,005.05ರಲ್ಲಿ ಟೆಸ್ಲಾ ಷೇರು ವಹಿವಾಟು ಅಂತ್ಯಗೊಂಡಿತ್ತು. ಹೀಗಾಗಿ ದಿನದ ಆರಂಭದಲ್ಲೇ ಭಾರಿ ಕುಸಿತದೊಂದಿಗೆ ಟೆಸ್ಲಾ ಷೇರು ವಹಿವಾಟು ಆರಂಭಗೊಂಡಿತ್ತು. ಟೆಸ್ಲಾ ಷೇರು ಮಾರುಕಟ್ಟೆಯಲ್ಲಿ ಈ ದಿನದ ಬಿಡ್ ಪ್ರೈಸ್ 998.08 x 2200 ಆಗಿದೆ.  ದಿನದ ಅಂತ್ಯದಲ್ಲಿ ಟೆಸ್ಲಾ ಷೇರುಗಳು 1,015 ಅಮೆರಿಕನ್ ಡಾಲರ್ ಮೌಲ್ಯ ತಲುಪ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Latest Videos

3 ಲಕ್ಷ ಕೋಟಿ ರೂ ಮೊತ್ತಕ್ಕೆ ಟ್ವಿಟರ್ ಖರೀದಿ, ಅಂತಿಮ ಹಂತದಲ್ಲಿ ಎಲಾನ್ ಮಸ್ಕ್ ಡೀಲ್!

ಎಲಾನ್ ಮಸ್ಕ್ ಕಂಪನಿ ಟೆಸ್ಲಾ ಕಂಪನಿ ಷೇರುಗಳ ಮೌಲ್ಯ ಕುಸಿತ ಕಂಡಿದ್ದರೆ, ಇತ್ತ ಮಸ್ಕ್ ಖರೀದಿ ಡೀಲ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ಟ್ವಿಟರ್ ಷೇರು ಮೌಲ್ಯಗಳು ಏರಿಕೆಯಾಗಿದೆ. 51.02 ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಆರಂಭಗೊಂಡ ಟ್ವಿಟರ್ ಷೇರು ಮೌಲ್ಯ ಸದ್ಯ 51.62ರಲ್ಲಿ ವಹಿವಾಟು ನಡೆಯುತ್ತಿದೆ. ಆರಂಭದಿಂದಲೇ ಏರಿಕೆ ಹಂತದಲ್ಲಿರುವ ಕಾರಣ ಟ್ವಿಟರ್ ಷೇರುಗಳು ಮೌಲ್ಯ ನಿಧಾನವಾಗಿ ಏರತ್ತಲೇ ಸಾಗಿದೆ. ಹಿಂದಿನ ದಿನ 48.93 ಮೌಲ್ಯದಲ್ಲಿ ದಿನದ ವಹಿವಾಟು ಅಂತ್ಯಗೊಂಡಿತ್ತು. ಇಂದು ಟ್ವಿಟರ್ ಷೇರು ಮಾರುಕಟ್ಟೆಯ ದಿನದ ವಹಿವಾಟು 53.00 ಮೌಲ್ಯದೊಂದಿಗೆ ಅಂತ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ವೀಟರ್‌ ಕಂಪನಿ 3 ಲಕ್ಷ ಕೋಟಿಗೆ ಮಸ್ಕ್‌ಗೆ ಮಾರಾಟ?
ಸಾಮಾಜಿಕ ಜಾಲತಾಣ ಟ್ವೀಟರ್‌ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರು.ಗಳಿಗೆ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್‌್ಕ ಅವರು ಖರೀದಿ ಮಾಡಿದ್ದು, ಒಪ್ಪಂದ ಹೆಚ್ಚೂ ಕಡಿಮೆ ಅಂತಿಮಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂದು ವರದಿಗಳು ಹೇಳಿವೆ. 

ಮಸ್ಕ್ ಟೆಸ್ಲಾ ಸ್ಥಂಸ್ಥಾಪಕರಲ್ಲ ಎಂದ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಉತ್ತರವೇನು?

82500 ಕೋಟಿ ತೆರಿಗೆ
18.31 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌, ಈ ವರ್ಷ ಭರ್ಜರಿ 82500 ಕೋಟಿ ರು. ತೆರಿಗೆ ಪಾವತಿ ಮಾಡಲಿದ್ದಾರೆ. ಈ ವಿಷಯವನ್ನು ಸ್ವತಃ ಮಸ್ಕ್‌ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಒಂದು ವೇಳೆ ಇಷ್ಟುತೆರಿಗೆ ಪಾವತಿ ಮಾಡಿದಲ್ಲಿ ಅದು ಅಮೆರಿಕ ಇತಿಹಾಸದಲ್ಲೇ ವ್ಯಕ್ತಿಯೊಬ್ಬರು ಏಕಕಾಲಕ್ಕೆ ಮಾಡಿದ ಗರಿಷ್ಠ ತೆರಿಗೆ ಪಾವತಿಯಾಗಿದೆ.

ಟೆಸ್ಲಾ, ಸ್ಪೇಸ್‌ ಎಕ್ಸ್‌ ಕಂಪನಿಯ ಸಿಇಒ ಆಗಿರುವ ಮಸ್ಕ್‌, ಈ ಹುದ್ದೆ ನಿರ್ವಹಿಸಿದ್ದಕ್ಕಾಗಿ ಯಾವುದೇ ವೇತನ ಅಥವಾ ಬೋನಸ್‌ ಪಡೆಯುವುದಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ 2012ರಲ್ಲಿ 2.28 ಕೋಟಿ ಷೇರುಗಳನ್ನು ತಲಾ 6.24 ಡಾಲರ್‌ನಂತೆ ನೀಡಲಾಗಿತ್ತು. ಆ ಪ್ರತಿ ಷೇರುಗಳ ಮೌಲ್ಯ ಇದೀಗ 1222 ಡಾಲರ್‌ಗೆ ತಲುಪಿದೆ. ಈ ಷೇರುಗಳನ್ನು ಮುಂದಿನ ವರ್ಷದೊಳಗೆ ಮಸ್ಕ್‌ ಅವರು ನಗದು ಮಾಡಿಕೊಳ್ಳಲೇಬೇಕು. ಹೀಗಾಗಿ ಅವರು ಅಂದಾಜು 13 ಲಕ್ಷ ಕೋಟಿ ರು. ಮೌಲ್ಯದ ಷೇರುಗಳನ್ನು ಮಾರಾಟ ಮಾಡಬೇಕು. ಇದಕ್ಕೆ ನಾನಾ ರೀತಿಯ ತೆರಿಗೆ ಸೇರಿ ಅಂದಾಜು ಶೇ.54ರಷ್ಟುತೆರಿಗೆಯನ್ನು ಮಸ್ಕ್‌ ಪಾವತಿ ಮಾಡಬೇಕಾಗಿ ಬರಲಿದೆ. ಹೀಗಾದಲ್ಲಿ ಅವರು ಪಾವತಿಸಬೇಕಾದ ತೆರಿಗೆ ಮೊತ್ತ 82500 ಕೋಟಿ ರು. ದಾಟಲಿದೆ ಎಂದು ವಿಶ್ಲೇಷಿಸಲಾಗಿದೆ.

click me!